Tuesday, February 4, 2025
Homeಜಿಲ್ಲೆತುಮಕೂರುTumkur Railway Station | ಭೀಕರ ದುರಂತ : ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಯುವಕ...

Tumkur Railway Station | ಭೀಕರ ದುರಂತ : ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಯುವಕ ಸಾವು..!

ತುಮಕೂರು | ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ರೈಲಿನಡಿ ಸಿಲುಕಿ ಯುವಕನೊಬ್ಬ ದಾರೂಣವಾಗಿ ಸಾವನ್ನಪ್ಪಿರುವಂತಹ ಘಟನೆ ತುಮಕೂರು ರೈಲ್ವೆ ನಿಲ್ದಾಣದ (Tumkur Railway Station) ಪ್ಲಾಟ್‌ಫಾರಂ ನಂಬರ್ 4 ರಲ್ಲಿ ನಡೆದಿದೆ. 

ಮೃತ ಯುವಕನ ಗುರುತು

ಮೃತನನ್ನು ಛಾಯಾಂಕ್ (24), ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.  ಈತ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದನು.  ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಿಂದ ತುಮಕೂರಿಗೆ (Tumkur Railway Station) ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. 

ಇದನ್ನು ಓದಿ : Union Budget 2025 | ವೈದ್ಯಕೀಯ ಕ್ಷೇತ್ರಕ್ಕೆ ಕೇಂದ್ರ ಬಜೆಟ್ ಮಹತ್ತರ ಕೊಡುಗೆ –  ಡಾ. ಎಸ್ ಪರಮೇಶ್

ಘಟನೆ ವಿವರ

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿದಾಗ ಆಯತಪ್ಪಿ ಬಿದ್ದು (Tumkur Railway Station) ರೈಲಿನಡಿ ಸಿಲುಕಿದನು.  ಗಂಭೀರವಾಗಿ ಗಾಯಗೊಂಡಿದ್ದ ಛಾಯಾಂಕ್ ರಕ್ತದ ಮಡುವಿನಲ್ಲಿ ನರಳುತ್ತಿದ್ದನು. ಸ್ಥಳೀಯರು ಆತನ ಮನೆಯವರ ಸಂಪರ್ಕಿಸಿ ತಕ್ಷಣ ಮಾಹಿತಿ ನೀಡಿದರು.  ತಕ್ಷಣ ಆಸ್ಪತ್ರೆಗೆ ರವಾನೆ ಮಾಡಲಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments