ತುಮಕೂರು | ಪುಟ್ಟ ಕಂದಮ್ಮ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವಂತಹ ಘಟನೆ ತುಮಕೂರು (Tumkur) ಜಿಲ್ಲೆಯ ಗುಬ್ಬಿ ತಾಲೂಕಿನ ಜಿ. ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು ದಯಾನಂದ್ ರವರ ಪುತ್ರ 3 ವರ್ಷದ ಕುಶಾಲ್ ಎನ್ನಲಾಗಿದೆ.
ಮಧ್ಯಾಹ್ನ 12:30 ರಲ್ಲಿ ತಾಯಿ ಮನೆ ಕೆಲಸ ಮಾಡಿಕೊಂಡು ನಿರತರಾಗಿದ್ದಾರೆ. ಅರ್ಧ ಗಂಟೆಯದರೂ ಕುಶಾಲ್ ಮನೆಗೆ ಬಾರದೆ ಇದ್ದಾಗ ಆತಂಕಗೊಂಡು ಅಕ್ಕ ಪಕ್ಕ ಹುಡುಕಾಟ ನಡೆಸಿದ್ದಾರೆ. ಮಗು ಕಾಣದಿದ್ದಾಗ ಕೊನೆಗೆ ಮನೆ ಹತ್ತಿರ ಇದ್ದ ನೀರಿನ ಸಂಪ್ ನೋಡಿದ್ದಾರೆ. ಈವೇಳೆ ಪುಟ್ಟ ಕಂದಮ್ಮ ನೀರಿನ ಸಂಪಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಮಗುವನ್ನು ಮೇಲಕ್ಕೆ ಎತ್ತಿ ತುಮಕೂರು ಜಿಲ್ಲೆಯ (Tumkur) ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಪುಟ್ಟ ಕಂದಮ್ಮನ ಪ್ರಾಣ ಮರಳಿ ಬಾರದ ಊರಿಗೆ ಪ್ರಯಾಣ ಬೆಳೆಸಿತ್ತು. ಆಟ ಆಡಲು ಹೋದ 3 ವರ್ಷದ ಪುಟ್ಟ ಕಂದಮ್ಮ ಕುಶಾಲ್ ಸಾವನ್ನಪ್ಪಿದ್ದನು.