ತುಮಕೂರು | ಸಂಚಾರ ಪೊಲೀಸ್ ಠಾಣೆ (Traffic Police Station) ವ್ಯಾಪ್ತಿಯಲ್ಲಿ ಸುಮಾರು 38 ವರ್ಷದ ಅಪರಿಚಿತ ವ್ಯಕ್ತಿಯು ನಗರದ ಹೊರವಲಯ ಭೀಮಸಂದ್ರದ ಗಾರ್ಮೆಂಟ್ಸ್ ಬಳಿ ರಸ್ತೆ ದಾಟುವಾಗ ಅತಿ ವೇಗದ ವಾಹನ ಡಿಕ್ಕಿ (Tumkur Accident) ಹೊಡೆದ ಪರಿಣಾಮ ವ್ಯಕ್ತಿಯ ತಲೆಯ ಬಲಭಾಗಕ್ಕೆ ಮತ್ತು ಬಲಗಾಲಿಗೆ ಬಲವಾದ ಪೆಟ್ಟು ಬಿದ್ದು ಗಾಯಗೊಂಡಿದ್ದಾನೆ. ಗಾಯಾಳು ವ್ಯಕ್ತಿಯು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾ ಸ್ಥಿತಿಯಲ್ಲಿ ಇದ್ದಾನೆ.
ಈತನ ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಗಾಯಾಳು ವ್ಯಕ್ತಿಯು 5.6 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಗಾಯಗೊಂಡಿದ್ದ ಸಂದರ್ಭದಲ್ಲಿ ಸಿಮೆಂಟ್ ಬಣ್ಣದ ರೇಡಿಮೇಡ್ ಟೀ-ಶರ್ಟ್, ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದನು.
ಈತನ ವಾರಸುದಾರರ ಬಗ್ಗೆ ಮಾಹಿತಿಯುಳ್ಳವರು ಹತ್ತಿರದ ಪೊಲೀಸ್ ಠಾಣೆ ಅಥವಾ ದೂ.ವಾ.ಸಂ. 0816-2278207, ಮೊ.ಸಂ.9480802929/46/00ಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಸಂಚಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್.ಪಿ. ರಂಗನಾಥ್ ಮನವಿ ಮಾಡಿದ್ದಾರೆ.