Supreme Court Justice | ಭಾರತದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಲು ಇರಬೇಕಾದ ಅರ್ಹತೆಗಳೇನು..?

ನವದೆಹಲಿ | ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ (Supreme Court Justice) ಅತ್ಯುನ್ನತ ನ್ಯಾಯಾಲಯವಾಗಿದೆ. ಇಲ್ಲಿ ನ್ಯಾಯಾಧೀಶರಾಗಿ ನೇಮಕವಾಗುವುದು ಅತ್ಯಂತ ಗೌರವದ ವಿಷಯವಾಗಿದ್ದು, ಇದರಿಗಾಗಿ ನಿರ್ದಿಷ್ಟವಾಗಿ ಭಾರತೀಯ ಸಂವಿಧಾನದಲ್ಲಿ ಹಲವು ಅರ್ಹತೆಗಳನ್ನು ನಿರ್ಧರಿಸಲಾಗಿದೆ.

ಸುಪ್ರೀಂ ಕೋರ್ಟ್ (Supreme Court Justice) ನ್ಯಾಯಮೂರ್ತಿಯಾಗಲು ಅರ್ಹತೆ

ಭಾರತದ ಸಂವಿಧಾನದ ಕಲಂ 124(3) ರ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಲು (Supreme Court Justice) ಅಭ್ಯರ್ಥಿಗೆ ಈ ಕೆಳಗಿನ ಅರ್ಹತೆಗಳಿರಬೇಕು

1. ಭಾರತದ ಪೌರತ್ವ: ನ್ಯಾಯಾಧೀಶರಾಗಲು ಅಭ್ಯರ್ಥಿ ಭಾರತೀಯ ನಾಗರಿಕರಾಗಿರಬೇಕು.

2. ಕಾನೂನು ಸೇವಾ ಅನುಭವ: ಕನಿಷ್ಠ 5 ವರ್ಷಗಳ ಕಾಲ ಯಾವುದೇ ಹೈಕೋರ್ಟ್ ಅಥವಾ ಹೈಕೋರ್ಟ್‌ಗಳ ಸಮೂಹದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು

ಅಥವಾ

ಕನಿಷ್ಠ 10 ವರ್ಷಗಳ ಕಾಲ ಯಾವುದೇ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿರಬೇಕು

ಅಥವಾ

ರಾಷ್ಟ್ರಪತಿಗೆ ಅಭ್ಯರ್ಥಿಯು ವಿಶಿಷ್ಟವಾದ ಕಾನೂನು ಜ್ಞಾನ ಹಾಗೂ ಶ್ರೇಷ್ಟತೆ ಹೊಂದಿದ್ದಾರೆ ಎಂಬ ವಿಶ್ವಾಸ ಮೂಡಿಸಿದ್ರೆ ಕೂಡ ನೇಮಕ ಸಾಧ್ಯ.

ಇದನ್ನು ಓದಿ : Saudi Arabia | 73 ವರ್ಷಗಳ ತನ್ನ ನಿಯಮ ಬದಲಿಸಿಕೊಂಡ ಸೌದಿ ಅರೇಬಿಯಾ..!

ಇದಲ್ಲದೆ, ಸೂಕ್ತವಾದ ನೈತಿಕ ಮೌಲ್ಯಗಳು, ನಿಷ್ಠೆ, ನ್ಯಾಯದೀಕ್ಷೆ ಮತ್ತು ಸಂವಿಧಾನದ ಅಡಿಯಲ್ಲಿ ನಿಷ್ಪಕ್ಷಪಾತ ಸೇವೆ ನೀಡಬಲ್ಲ ಸಾಮರ್ಥ್ಯ ಇದ್ದರೆ ಮಾತ್ರ ಅತ್ಯುನ್ನತ ನ್ಯಾಯಮೂರ್ತಿಯಾಗಿ ಸ್ಥಾನ ಪಡೆಯಬಹುದು.

ಈ ನೇಮಕವನ್ನು ರಾಷ್ಟ್ರಪತಿ ಅವರು ಮಾಡುವರು. ಮುಖ್ಯ ನ್ಯಾಯಮೂರ್ತಿಯ ನೇಮಕದ ವೇಳೆ, ಸುಪ್ರೀಂ ಕೋರ್ಟ್‌ನ (Supreme Court Justice) ಹಿರಿಯ ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಯುತ್ತದೆ.

ಇಂತಹ ಗಂಭೀರ ಆಯ್ಕೆ ಪ್ರಕ್ರಿಯೆ ಮೂಲಕ, ದೇಶದ ನ್ಯಾಯ ವ್ಯವಸ್ಥೆಯ ನಿಷ್ಠೆ, ನೈತಿಕತೆ ಮತ್ತು ಭದ್ರತೆಗೆ ಭರವಸೆ ನೀಡಲಾಗುತ್ತದೆ.

Leave a Reply

Your email address will not be published. Required fields are marked *