Site icon Karnataka 360

SSLC Examination | ಮತ್ತೆ ಆರಂಭವಾಯ್ತು ಎಸ್.ಎಸ್.ಎಲ್.ಸಿ. ಪರೀಕ್ಷೆ

ತುಮಕೂರು | ಎಸ್.ಎಸ್.ಎಲ್.ಸಿ. ಪರೀಕ್ಷೆ-2 (SSLC Examination) ಮೇ 26 ರಿಂದ ಜೂನ್ 2ರವರೆಗೆ ನಡೆಯಲಿದ್ದು, ಇದಕ್ಕಾಗಿ ತುಮಕೂರು ತಾಲ್ಲೂಕಿನಲ್ಲಿ 11 ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಪರೀಕ್ಷಾ (SSLC Examination) ಕೇಂದ್ರದ ವಿವರ

ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ಗಾಂಧಿನಗರದ ಸೇಂಟ್ ಮೇರಿಸ್, ಆರ್ಯನ್ ಪ್ರೌಢಶಾಲೆ, ನಾಗವಲ್ಲಿಯ ಕೆ.ಪಿ.ಎಸ್.ಶಾಲೆ,  ಹೊರಪೇಟೆಯ ಬಾಪೂಜಿ ಪದವಿ ಪೂರ್ವ ಕಾಲೇಜು ಹಾಗೂ ಚೇತನ ಪ್ರೌಢಶಾಲೆ, ಬಟವಾಡಿಯ ಚೇತನ ವಿದ್ಯಾಮಂದಿರ ಪ್ರೌಢಶಾಲೆ, ಸಿದ್ದಗಂಗ ಮಠದ ಶ್ರೀ ಸಿದ್ದಲಿಂಗೇಶ್ವರ ಸನಿವಾಸ ಪ್ರೌಢಶಾಲೆ, ಬಿ.ಹೆಚ್.ರಸ್ತೆಯ ಸಿದ್ದಗಂಗಾ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆಪಿಎಸ್ ಎಂಪ್ರೆಸ್, ಕಾಳಿದಾಸ ನಗರದ ಕಾಳಿದಾಸ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಇದನ್ನು ಓದಿ : By-election | ಮದ್ಯ ಮಾರಾಟ ನಿಷೇಧ ಮಾಡಿ ಡಿಸಿ ಆದೇಶ

ಪರೀಕ್ಷಾ (SSLC Examination) ವೇಳಾಪಟ್ಟಿ

ಪ್ರಕಟಿತ ವೇಳಾಪಟ್ಟಿಯನ್ವಯ ಮೇ 26ರಂದು  ಪ್ರಥಮ ಭಾಷೆಯಾದ ಕನ್ನಡ/ತೆಲುಗು/ಹಿಂದಿ/ಮರಾಠಿ/ ತಮಿಳು/ಉರ್ದು/ ಇಂಗ್ಲೀಷ್/ಇಂಗ್ಲೀಷ್ (NCERT)/  ಸಂಸ್ಕೃತ; ಮೇ 27ರಂದು ಗಣಿತ, ಸಮಾಜ ಶಾಸ್ತ್ರ ; ಮೇ 28ರಂದು ದ್ವಿತೀಯ ಭಾಷೆ ಇಂಗ್ಲೀಷ್/ ಕನ್ನಡ; ಮೇ 29ರಂದು ಸಮಾಜ ವಿಜ್ಞಾನ;  ಮೇ 30ರಂದು  ತೃತೀಯ ಭಾಷೆಯಾದ ಹಿಂದಿ (NCERT), ಹಿಂದಿ/ಕನ್ನಡ/ ಇಂಗ್ಲೀಷ್/ ಅರೇಬಿಕ್/ ಉರ್ದು/ ಸಂಸ್ಕೃತ/ ಕೊಂಕಣಿ/ತುಳು ಹಾಗೂ NSQF ವಿಷಯಗಳಾದ ಮಾಹಿತಿ ತಂತ್ರಜ್ಞಾನ/ ರೀಟೇಲ್/ಆಟೋಮೊಬೈಲ್/ಬ್ಯೂಟಿ ಅಂಡ್ ವೆಲ್‌ನೆಸ್/ಅಪರೆಲ್ ಮೇಡ್ ಅಪ್ಸ್ ಮತ್ತು ಹೋಂ ಫರ್ನಿಷಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್.

ಮೇ 31ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ: ಜೂನ್ 2ರಂದು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್- IV/ ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್  ಇಂಜಿನಿಯರಿಂಗ್- IV / ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿAಗ್- IV /  ಪ್ರೋಗ್ರಾಮಿಂಗ್ ಇನ್ ANSI ‘C’ ಹಾಗೂ ಅರ್ಥಶಾಸ್ತ್ರ ವಿಷಯ ಪರೀಕ್ಷೆಗಳು ನಡೆಯಲಿವೆ.

Exit mobile version