ತುಮಕೂರು | ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಕಾನೂನು ಪಾಲನೆ ಕುರಿತು ಮೊಬೈಲ್ ಕ್ಯಾಮೆರಾ ಸಹಾಯದಿಂದ ಕಿರುಚಿತ್ರ (Short film) ತಯಾರಿಸಿ ಕಳುಹಿಸಲು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಕರು ತಂಬಾಕು ಸೇವನೆಗೆ ದಾಸರಾಗುತ್ತಿದ್ದು, ಯುವಜನರಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಿರು ಚಿತ್ರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಆಸಕ್ತರು ತಂಬಾಕು ದುಷ್ಪರಿಣಾಮ ಕುರಿತು ಕಿರುಚಿತ್ರಗಳನ್ನು ತಯಾರಿಸಿ ಇಲಾಖೆಯ ಇ-ಮೇಲ್ datctumkur@gmail.com ಗೆ ಕಳುಹಿಸಬಹುದಾಗಿದೆ.