ಕೃಷಿ ಮಾಹಿತಿ | ರೈತರ ಆದಾಯದ ಮೂಲಗಳಲ್ಲಿ ಕುರಿ ಸಾಕಾಣಿಕೆಯೂ (Sheep farming) ಕೂಡ ಒಂದು. ಇದರಲ್ಲಿ ಅನೇಕ ತಳಿಗಳಿದ್ದು ಕರ್ನಾಟಕದಲ್ಲಿ ವಿವಿಧ ದೇಶೀಯ ಕುರಿ ತಳಿಗಳನ್ನು ಸಾಕಲಾಗುತ್ತದೆ. ಅವುಗಳಲ್ಲಿ ಕೆಲವು ತಳಿಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ.
ಬಂಡೂರು (ಬನ್ನೂರು) ತಳಿಮ (Sheep farming)
ಈ ತಳಿ ದಕ್ಷಿಣ ಕರ್ನಾಟಕದಲ್ಲಿ, ವಿಶೇಷವಾಗಿ ಮೈಸೂರು, ಹಾಸನ, ಕೋಲಾರ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಬಂಡೂರು ಕುರಿಗಳು ಮುಖ್ಯವಾಗಿ ಮಾಂಸ ಉತ್ಪಾದನೆಗಾಗಿ ಸಾಕಲಾಗುತ್ತದೆ ಮತ್ತು ಅವುಗಳ ಮಾಂಸವು ಉತ್ತಮ ಗುಣಮಟ್ಟವನ್ನು ಹೊಂದಿದೆ.
ಡೆಕ್ಕನಿ ತಳಿ
ಡೆಕ್ಕನ್ ಪ್ರದೇಶದ ಹವಾಮಾನಕ್ಕೆ ಹೊಂದಿಕೊಂಡಿರುವ ಈ ತಳಿ, ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಕಲಾಗುತ್ತದೆ. ಡೆಕ್ಕನಿ ಕುರಿಗಳು ಬಲಿಷ್ಠವಾಗಿದ್ದು, ಬರಡು ಪ್ರದೇಶಗಳಲ್ಲಿಯೂ ಸಾಕಲು ಅನುಕೂಲಕರವಾಗಿವೆ.
ಬಳ್ಳಾರಿ ತಳಿ
ಈ ತಳಿ ಬಳ್ಳಾರಿ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತದೆ. ಬಳ್ಳಾರಿ ಕುರಿಗಳು ಮಧ್ಯಮ ಗಾತ್ರದ ಮೈಕಟ್ಟನ್ನು ಹೊಂದಿದ್ದು, ಮಾಂಸ ಮತ್ತು ಉಣ್ಣೆ ಎರಡನ್ನೂ ಉತ್ಪಾದಿಸುತ್ತವೆ. ರೈತರಿಗೆ ಹೆಚ್ಚು ಲಾಭವನ್ನು ತಂದುಕೊಡುವ ಕುರಿಗಳಲ್ಲಿ ಇವು ಕೂಡ ಒಂದು.
ಕೆಂಗುರಿ ತಳಿ
ಕೆಂಗುರಿ ಕುರಿಗಳು ಕರ್ನಾಟಕದ ಕೆಲವು ಭಾಗಗಳಲ್ಲಿ ಸಾಕಲಾಗುತ್ತದೆ. ಇವು ಮಧ್ಯಮ ಗಾತ್ರದ ಮೈಕಟ್ಟನ್ನು ಹೊಂದಿದ್ದು, ಮಾಂಸ ಉತ್ಪಾದನೆಗೆ ಸೂಕ್ತವಾಗಿವೆ. ಸಾಮಾನ್ಯವಾಗಿ ಒಂದು ಕಡೆಯಿಂದು ಮತ್ತೊಂದು ಕಡೆಗೆ ವಲಸೆ ಹೋಗಿ ಇವುಗಳನ್ನು ಬೆಳೆಸುತ್ತಾರೆ.
ಹಾಸನ ತಳಿ
ಹಾಸನ ಜಿಲ್ಲೆಯಲ್ಲಿ ಹಾಸನ ಕುರಿ ತಳಿ ಸಾಕಲಾಗುತ್ತದೆ. ಈ ತಳಿ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಂಡಿದ್ದು, ಉತ್ತಮ ಉಣ್ಣೆ ಮತ್ತು ಮಾಂಸವನ್ನು ನೀಡುತ್ತದೆ.
ಈ ತಳಿಗಳಲ್ಲಿ, ಬಂಡೂರು (ಬನ್ನೂರು) ತಳಿ ತನ್ನ ಉತ್ತಮ ಮಾಂಸದ ಗುಣಮಟ್ಟದಿಂದಾಗಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಆದರೆ, ಪ್ರಾದೇಶಿಕ ಹವಾಮಾನ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಬೇರೆ ತಳಿಗಳಿಗೂ ಬೇಡಿಕೆ ಇದೆ.
ಕುರಿ ಸಾಕಾಣಿಕೆಯಲ್ಲಿ (Sheep farming) ಯಶಸ್ವಿಯಾಗಲು, ಸ್ಥಳೀಯ ಹವಾಮಾನ ಮತ್ತು ಪರಿಸರಕ್ಕೆ ಹೊಂದುವ ತಳಿಗಳನ್ನು ಆಯ್ಕೆ ಮಾಡುವುದು ಮುಖ್ಯ. ಅದರೊಂದಿಗೆ, ಸರಿಯಾದ ಆಹಾರ, ಆರೈಕೆ ಮತ್ತು ನಿರ್ವಹಣೆ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ.