ತುಮಕೂರು | ಬಕ್ರೀದ್ ಹಬ್ಬದ (Bakrid2025) ಹಿನ್ನೆಲೆಯಲ್ಲಿ ಶಿರಾ ಪಟ್ಟಣದಲ್ಲಿ ಮೇ 31 ಮತ್ತು ಜೂನ್ 1 ರಂದು ಬೆಳಿಗ್ಗೆ 9 ಗಂಟೆಯಿಂದ ಬೃಹತ್ ಕುರಿ-ಮೇಕೆ ಮೇಳ (Sheep and Goat Fair) ಆಯೋಜಿಸಲಾಗಿದೆ. ಈ ಮೇಳವನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ಶಿರಾ ನಗರಸಭೆ ಹಾಗೂ ಕುರಿ-ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಹಜರತ್ ಮಲ್ಲಿಕ್ ರೆಹಾನ್ ಪಾಷ ದರ್ಗಾದ ಬಳಿಯಲ್ಲಿ ಏರ್ಪಡಿಸಲಾಗಿದೆ.
ಇದನ್ನು ಓದಿ : Indian American Startup Culture | ಅಮೇರಿಕಾದ ಮತ್ತು ಭಾರತದ ಉದ್ಯಮಿಗಳ ನಡುವಿನ ಪ್ರಮುಖ ವ್ಯತ್ಯಾಸಗಳು..!
ಕುರಿ ಮತ್ತು ಮೇಕೆಗಳಿಗೆ ಮಾರುಕಟ್ಟೆ ಒದಕಿಸಲಿದೆ (Sheep and Goat Fair) ಈ ಮೇಳ
ಈ ಮೇಳದ ಮೂಲಕ ರೈತರಿಗೆ ತಮ್ಮ ಕುರಿ-ಮೇಕೆಗಳಿಗೆ (Sheep and Goat Fair) ಉತ್ತಮ ಮಾರುಕಟ್ಟೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಮೇಳದಲ್ಲಿ ಉತ್ತಮ ಗುಣಮಟ್ಟದ ಟಗರುಗಳು ಹಾಗೂ ಹೋತಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ರೈತರು ತಮ್ಮ ಪಶುಗಳನ್ನು ಮೇಳದಲ್ಲಿ ತಂದು ಮಾರಾಟ ಮಾಡಬಹುದಾಗಿದೆ.

ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಗತ್ಯಕ್ಕೆ ತಕ್ಕಂತಹ ಟಗರು ಮತ್ತು ಹೋತಗಳನ್ನು ಖರೀದಿಸಬಹುದಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಮನವಿ ಮಾಡಿದ್ದಾರೆ.