ತುಮಕೂರು | ತುಮಕೂರು ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದಾಧ್ಯಂತ ಸಂಗೀತ ಪ್ರಿಯರಿಗೆ ಸಂಗೀತವನ್ನು ಉಣಬಡಿಸಿರುವ ತುಮಕೂರು ನಗರದ ಸಂಗೀತ್ ಶ್ರೀನಿವಾಸ್ ಅವರು ಇದೀಗ ಸಂಗೀತ್ ರೆಕಾರ್ಡಿಂಗ್ ಸ್ಟುಡಿಯೋ (Sangeet Recording Studio) ಆರಂಭಿಸಿದ್ದು, ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಉದ್ಘಾಟನೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಸಂಗೀತ್ ಶ್ರೀನಿವಾಸ್ ಅವರ ಕಾರ್ಯ ವೈಖರಿಯ ಬಗ್ಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಸಂಗೀತ್ ಶ್ರೀನಿವಾಸ್ ಅವರು ಹೆಮ್ಮೆಯ ಕೊಡುಗೆ ಎನ್ನಬಹುದು. ಅನೇಕ ಯುವ ಗಾಯಕರು ಮತ್ತು ವಾದಕರನ್ನು ತಯಾರು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈಗಾಗಲೇ ಸಂಗೀತ್ ಸ್ಕೂಲ್ ಆಫ್ ಮ್ಯೂಸಿಕ್ ಮೂಲಕ ಜನಮನಗೆದ್ದಿರುವ ಇವರು ಮುಂದಿನ ಹಂತವಾಗಿ ಸಂಗೀತ್ ರೆಕಾರ್ಡಿಂಗ್ ಸ್ಟುಡಿಯೋ (Sangeet Recording Studio) ಆರಂಭಿಸಿರುವುದು ಇಲ್ಲಿರುವಂತಹ ಎಷ್ಟೋ ಪ್ರತಿಭಾನ್ವಿತರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನು ಓದಿ : Agnibanniraya Swamy Temple | ಕರ್ನಾಟಕದ ಪ್ರಥಮ ಅಗ್ನಿಬನ್ನಿರಾಯ ಸ್ವಾಮಿ ದೇವಾಲಯ ಲೋಕಾರ್ಪಣೆಗೆ ಕ್ಷಣಗಣನೆ
ಸಂಗೀತ್ ಶ್ರೀನಿವಾಸ್ ಅವರು ಮಾತನಾಡಿ, ತುಮಕೂರು ನಗರದಲ್ಲಿ ಸುಸಜ್ಜಿತವಾದ ರೆಕಾರ್ಡಿಂಗ್ ಸ್ಟುಡಿಯೋ (Sangeet Recording Studio) ಆರಂಭಿಸಬೇಕು ಎನ್ನುವುದು ಬಹಳ ದಿನಗಳ ಕನಸಾಗಿತ್ತು ಇದೀಗ ಅದು ನೆರವೇರಿದೆ. ತುಮಕೂರಿನಲ್ಲಿರುವ ಪ್ರತಿಭಾನ್ವಿತರು, ಸಂಗೀತ ಪ್ರಿಯರು ಇದರ ಸದುಪಯೋಗಪಡಿಸಿಕೊಳ್ಳಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ತುಮಕೂರಿನವರಿಗೆ ಈ ಸ್ಟೂಡಿಯೋವನ್ನು ನೀಡಲು ಯೋಚನೆ ಮಾಡಿದ್ದೇವೆ ಎಂದು ಹೇಳಿದರು.
ತುಮಕೂರು ನಗರದ ಡಾ. ರಾಜಕುಮಾರ್ ರಸ್ತೆ ಹೊರಪೇಟೆ ವೃತ್ತದಲ್ಲಿರುವ ಸಂಗೀತ್ ರೆಕಾರ್ಡಿಂಗ್ ಸ್ಟುಡಿಯೋವನ್ನು (Sangeet Recording Studio) ಸಂಗೀತ ನಿರ್ದೇಶಕ ವಿ ಮನೋಹರ್ ಉದ್ಘಾಟನೆ ಮಾಡಿದರು. ಪ್ರಥಮ ಗಾಯನವನ್ನು ಚಲನಚಿತ್ರ ಹಿನ್ನೆಲೆ ಗಾಯಕರಾದ ವಿಷ್ಣು ರಾಮನ್ ಅವರು ಹಾಡಿದರು. ಜಿ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕರಾದ ಕಂಬದ ರಂಗಯ್ಯ ಅವರು ಧ್ವನಿ ಮುದ್ರಣ ಯಂತ್ರದ ಚಾಲನೆ ನೀಡಿದರು.
ತುಮಕೂರು ನಗರದಲ್ಲಿ ಸಂಗೀತ್ ಮ್ಯೂಸಿಕ್ ಮೂಲಕ ಸಂಗೀತ ಸ್ಕೂಲ್ ಆಫ್ ಮ್ಯೂಸಿಕ್ ಮಾಡಿ ಇದೀಗ ಸಂಗೀತ್ ರೆಕಾರ್ಡಿಂಗ್ ಸ್ಟುಡಿಯೋ (Sangeet Recording Studio) ಮಾಡಿರುವ ಸಂಗೀತ್ ಶ್ರೀನಿವಾಸ್ ಅವರ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದರ ಸದುಪಯೋಗಪಡಿಸಿಕೊಳ್ಳುವುದು ತುಮಕೂರಿನ ಸಂಗೀತ ಪ್ರಿಯರದ್ದಾಗಿದೆ.