Wednesday, February 5, 2025
Homeಜಿಲ್ಲೆತುಮಕೂರುS R Srinivas  | ಡಾ. ಜಿ. ಪರಮೇಶ್ವರ್ ಮತ್ತು ಕೆ ಎನ್ ರಾಜಣ್ಣ ವಿರುದ್ಧ...

S R Srinivas  | ಡಾ. ಜಿ. ಪರಮೇಶ್ವರ್ ಮತ್ತು ಕೆ ಎನ್ ರಾಜಣ್ಣ ವಿರುದ್ಧ ಗುಡುಗಿದ ಎಸ್ ಆರ್ ಶ್ರೀನಿವಾಸ್

ತುಮಕೂರು | ತುಮಕೂರು ಜಿಲ್ಲೆಯಲ್ಲಿ ತುಮುಲ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ನಡೆದ ಬೆಳವಣಿಗೆ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಶಾಸಕ ಎಸ್. ಆರ್ ಶ್ರೀನಿವಾಸ್ (S R Srinivas), ತಮ್ಮ ಪತ್ನಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪತ್ನಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿದಕ್ಕೆ ಅಸಮಾಧಾನ

ಶಾಸಕ ಶ್ರೀನಿವಾಸ್ (S R Srinivas) ಅವರು, ಡಾ, ಜಿ ಪರಮೇಶ್ವರ್ ಮತ್ತು ಕೆ. ಎನ್ ರಾಜಣ್ಣ ಜಿಲ್ಲೆಯಲ್ಲಿ ತುಘಲಕ್ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಏನಾಗುತ್ತಿದೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ. ಸಭೆಗಳಿಗೆ ನಮಗೆ ಆಹ್ವಾನ ನೀಡುವುದಿಲ್ಲ, ನಮ್ಮ ಅಭಿಪ್ರಾಯ ಕೇಳುವುದಿಲ್ಲ, ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.   

ಎಡಗೈ ಸಮುದಾಯಕ್ಕೆ ನ್ಯಾಯದ ಬೇಡಿಕೆ

ಶ್ರೀನಿವಾಸ್, ಎಡಗೈ ಸಮುದಾಯದ ಜನರ ಮೇಲೆ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದು, ಬಲಗೈ ಸಮುದಾಯದವರು ಮಾತ್ರ ಅಧಿಕಾರದ ಸ್ಥಾನದಲ್ಲಿ ಇರ್ತಿದ್ದಾರೆ ಎಂದು ಹೇಳಿದ್ದಾರೆ.  ಜಿಲ್ಲೆಯ ಎರಡು ಮೀಸಲು ಕ್ಷೇತ್ರಗಳಲ್ಲಿ, ಭೋವಿ ಜನಾಂಗ ಮತ್ತು ಬಲಗೈ ಸಮುದಾಯದವರು ಗೆದ್ದಿದ್ದಾರೆ. ಆದರೆ ಎಡಗೈ ಜನಾಂಗಕ್ಕೆ ನ್ಯಾಯ ಸಿಗುತ್ತಿಲ್ಲ, ಮುಂದಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಎಡಗೈ ಸಮುದಾಯಕ್ಕೆ ನೀಡುವಂತೆ ಒತ್ತಾಯಿಸಿದ್ದಾರೆ. 

ತುಮುಲ್ ಅಧ್ಯಕ್ಷರ ಆಯ್ಕೆ ಕುರಿತು ತೀರ್ವ ಅಸಮಾಧಾನ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಿಲ್ಕ್ ಯುನಿಯನ್ ಅಧ್ಯಕ್ಷ ಸ್ಥಾನಕ್ಕೆ ನಾಮಿನಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಇದು ಶೋಷಿತ ಸಮುದಾಯದ ವಿರುದ್ಧ ಅನ್ಯಾಯವಾಗಿದೆ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಧ್ಯಕ್ಷರ ಆಯ್ಕೆ ಸಂಬಂಧ ಯಾವುದೇ ಸಭೆಗಳಿಗೆ ಎಂಎಲ್‌ಎಗಳನ್ನು ಆಹ್ವಾನಿಸಿಲ್ಲ. ನಾವು ಎಂಎಲ್‌ಎಗಳಿದ್ದರೂ ನಮ್ಮ ಮಾತು ಕೇಳಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಚಿವರ ವರ್ತನೆಗೆ ಎಸ್ ಆರ್ ಶ್ರೀನಿವಾಸ್ (S R Srinivas) ಟೀಕೆ 

ಇಬ್ಬರು ಸಚಿವರು ತಮ್ಮ ಇಚ್ಛೆಯಂತೆ ಆಡಳಿತ ನಡೆಸುತ್ತಿದ್ದಾರೆ. ಸಚಿವರು ಜಿಲ್ಲೆಯನ್ನು ತಮ್ಮವನ್ನಾಗಿಸಿಕೊಂಡಿದ್ದಾರೆ. ಎಲ್ಲರು ಇವರ ಬಗ್ಗೆ ನಿಶಬ್ದವಾಗಿದ್ದಾರೆ ಎಂದು ಆರೋಪಿಸಿದರು.  ಇಬ್ಬರು ಸಚಿವರು ಜೊತೆಯಾದರೆ, ಇಡೀ ಜಿಲ್ಲೆಯನ್ನು ಕಂಟ್ರೋಲ್ ಮಾಡಬಹುದು ಎಂಬುದೇ ಸತ್ಯ ಎಂದು ವ್ಯಂಗ್ಯವಾಡಿದರು. 

ಮೀಟಿಂಗ್ ಕುರಿತ ಅಸಮಾಧಾನ ವ್ಯಕ್ತ

ಮುನ್ನೆ ನಡೆದ CLP ಮೀಟಿಂಗ್ ಬಳಿಕ ಗೃಹ ಸಚಿವ ಪರಮೇಶ್ವರ್ ಮತ್ತು ರಾಜಣ್ಣ ಜೊತೆ ಚರ್ಚೆ ನಡೆಯಿತು. ಅದಾದ ನಂತರ ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಇದು ತುಘಲಕ್ ದರ್ಬಾರ್‌ನಂತಹ ಆಡಳಿತವಾಗಿದೆ, ಎಂದು ಅವರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ. 

ಸರ್ಕಾರದ ವಿರುದ್ಧ ಯಾವುದೇ ಅಸಮಾಧಾನವಿಲ್ಲ

ನನ್ನ ಅಸಮಾಧಾನ ಸರ್ಕಾರದ ವಿರುದ್ಧ ಅಲ್ಲ, ಆದರೆ ಸಚಿವರ ವರ್ತನೆ ವಿರುದ್ಧ ಅಸಮಾಧಾನವಿದೆ. ನಮಗೆ ವಿಶ್ವಾಸದಲ್ಲಿ ತೆಗೆದುಕೊಂಡು ಹೋಗಬೇಕು, ನಮ್ಮ ಅಭಿಪ್ರಾಯ ಕೇಳಬೇಕು. ನಾವು ಶಾಸಕರಿದ್ದೇವೆ, ನಾವು ಅವರನ್ನು ಗೆಲ್ಲಿಸಿದ್ದೇವೆ. ಆದರೆ ನಮ್ಮ ಮಾತು ಕೇಳಲೇ ಇಲ್ಲ ಎಂದು ಅವರು ಕಿಡಿ ಕಾರಿದರು. 

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಬೇಡಿಕೆ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಎಡಗೈ ಸಮುದಾಯದವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.  ನಿಮ್ಮಿಂದ ಈ ಬಾರಿ ಸಾಮಾಜಿಕ ನ್ಯಾಯ ಮಾಡುವ ನಿರೀಕ್ಷೆ ಇದೆ. ಅದನ್ನು ಪ್ರಾಮಾಣಿಕವಾಗಿ ನೆರವೇರಿಸಬೇಕು ಎಂದು ಅವರು ಸರ್ಕಾರವನ್ನು ಪ್ರೇರೇಪಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ನಡೆದ ಈ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದ ಒಳ ರಾಜಕಾರಣಕ್ಕೆ ಹೊಸ ತಿರುವು ನೀಡಿದ್ದು, ಎಡಗೈ ಸಮುದಾಯಕ್ಕೆ ನ್ಯಾಯ ದೊರಕಿಸಬೇಕು ಎಂಬ ವಾದ ಪ್ರಾಮುಖ್ಯತೆಯನ್ನು ಪಡೆದಿದೆ. ಶಾಸಕ ಎಸ್. ಆರ್. ಶ್ರೀನಿವಾಸ್ (S R Srinivas) ಅವರ ಆರೋಪಗಳು ಮತ್ತು ಬೇಡಿಕೆಗಳು ಜಿಲ್ಲೆಯಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments