Wednesday, February 5, 2025
Homeರಾಷ್ಟ್ರೀಯRupee vs Dollar | ಅಮೇರಿಕಾದ ಡಾಲರ್ ಎದುರು ಕುಸಿಯುತ್ತಿದೆ ಭಾರತೀಯ ರೂಪಾಯಿ, ಕಾರಣವೇನು ಗೊತ್ತಾ..?

Rupee vs Dollar | ಅಮೇರಿಕಾದ ಡಾಲರ್ ಎದುರು ಕುಸಿಯುತ್ತಿದೆ ಭಾರತೀಯ ರೂಪಾಯಿ, ಕಾರಣವೇನು ಗೊತ್ತಾ..?

ನವದೆಹಲಿ | ಭಾರತದ ರೂಪಾಯಿ ಮೌಲ್ಯ ಡಾಲರ್ (Rupee vs Dollar) ಎದುರು ನಿರಂತರವಾಗಿ ಕುಸಿಯುತ್ತಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಡಾಲರ್ ಎದುರು ರುಪಾಯಿ (Rupee vs Dollar) ಮೌಲ್ಯ 86.30 ಗಡಿಯನ್ನು ದಾಟಿದೆ. ಶುಕ್ರವಾರ ಸಂಜೆ 85.9650 ಯೊಂದಿಗೆ ಮುಕ್ತಾಯಗೊಂಡ ರುಪಾಯಿ, ಇಂದು ಸೋಮವಾರ 86.2050 ಮಟ್ಟದಲ್ಲಿ ಆರಂಭವಾಯಿತು. ತಜ್ಞರ ಪ್ರಕಾರ, ಈ ವರ್ಷ ರುಪಾಯಿ ಮೌಲ್ಯ 90 ದಾಟಿದರೂ ಅಥವಾ 95 ರೂಪಾಯಿ ಮಟ್ಟಕ್ಕೆ ತಲುಪಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ.

ಇವು ಕರೆನ್ಸಿ ಮೌಲ್ಯ ಕುಸಿತಕ್ಕೆ (Rupee vs Dollar) ಪ್ರಮುಖ ಕಾರಣಗಳು

ಆರ್ ಬಿ ಐ  ಬದಲಾದ ನೀತಿ

ಹಿಂದಿನ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಮ್ಮ ಎಚ್ಚರಿಕೆಯಿಂದ ಡಾಲರ್ ವಿರುದ್ಧ ರುಪಾಯಿ ಮೌಲ್ಯವನ್ನು ಸ್ಥಿರವಾಗಿ ಉಳಿಸುತ್ತಿದ್ದರು. ಆದರೆ, ಪ್ರಸ್ತುತ ಗವರ್ನರ್ ಸಂಜಯ್ ಮಲ್ಹೋತ್ರಾ ಸರ್ಕಾರದ ಮಾರುಕಟ್ಟೆ ಆಧಾರಿತ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದು ರುಪಾಯಿ ಮೌಲ್ಯವನ್ನು ಮಾರುಕಟ್ಟೆಯ ಒತ್ತಡಕ್ಕೆ ಗುರಿ ಮಾಡುತ್ತಿದೆ. 

ಅಮೇರಿಕಾ ಉದ್ಯೋಗ ಸುಧಾರಣೆ

ಅಮೇರಿಕಾದಲ್ಲಿ ಉದ್ಯೋಗ ಮಾರುಕಟ್ಟೆ ಉತ್ತಮಗೊಂಡಿದ್ದು, ಡಾಲರ್ ಬಲವನ್ನು ಹೆಚ್ಚಿಸಿದೆ. ಅಲ್ಲದೆ, ಫೆಡರಲ್ ರಿಸರ್ವ್ ಬಡ್ಡಿದರ ಕಡಿತಕ್ಕೆ ಸಿದ್ಧವಿಲ್ಲ ಎನ್ನುವ ಸೂಚನೆಗಳು ಡಾಲರ್ ಕರಾನ್ಸಿಗೆ ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸಿವೆ. 

ವಿದೇಶಿ ಹೂಡಿಕೆದಾರರ ಹೊರಗಮ್ಮನೆ

ವಿದೇಶಿ ಹೂಡಿಕೆದಾರರು (FPIs) ಭಾರತದಿಂದ ಬಂಡವಾಳವನ್ನು ವಾಪಸ್ ಪಡೆಯುತ್ತಿರುವುದು ರುಪಾಯಿ ಮೌಲ್ಯದ ಮೇಲೆ ಹೆಚ್ಚುವರಿ ಒತ್ತಡ ತರುತ್ತಿದೆ. 

ಷೇರು ಮಾರುಕಟ್ಟೆ ಕುಸಿತ

ಶೇರು ಮಾರುಕಟ್ಟೆಯಲ್ಲಿನ ಕುಸಿತವು ರುಪಾಯಿ ಮೌಲ್ಯದ ಹಿನ್ನಡೆಗೆ ಮತ್ತೊಂದು ಕಾರಣವಾಗಿದೆ. 

ಡಾಲರ್ ಮೌಲ್ಯ ಏರಿಕೆಗೆ ಕಾರಣಗಳು

ಅಮೇರಿಕಾದ ಟ್ರೆಷರಿ ಯೀಲ್ಡ್ ಹೆಚ್ಚಳ (Rupee vs Dollar)

ಸರ್ಕಾರದ ಟ್ರೆಷರಿ ಯೀಲ್ಡ್ ಬೆಂಚ್ಮಾರ್ಕ್ ಹೆಚ್ಚಿರುವುದು ಡಾಲರ್ ಪ್ರಾಬಲ್ಯವನ್ನು ಉತ್ತೇಜಿಸಿದೆ. 

ಅಮೇರಿಕಾ ಕರೆನ್ಸಿಗೆ ಬೇಡಿಕೆ

ಡಾಲರ್ ಕರೆನ್ಸಿ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಶಕ್ತಿಯುತವಾಗಿದ್ದು, ಇದು ಭಾರತೀಯ ರುಪಾಯಿಯ ಮೇಲೆ ಹಿನ್ನಡೆ ತಂದಿದೆ. 

DSP ಫೈನಾನ್ಸ್ ಸಂಸ್ಥೆಯ ಸಿಇಒ ಜಯೇಶ್ ಮೆಹ್ತಾ ಅವರು ರುಪಾಯಿ 86 ಗಡಿಯನ್ನು ಮುಟ್ಟುವುದಾಗಿ ಮೊದಲೇ ನಿರೀಕ್ಷೆ ಮಾಡಿದ್ದರು. ಆದರೆ 87 ರೂಪಾಯಿ ಮಟ್ಟಕ್ಕೆ ತಲುಪಲು ಆರ್ಬಿಐ ಬಿಡುವ ಸಾಧ್ಯತೆ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ, ತಜ್ಞರಾದ ಉದಿತ್ ಸಿಕಂಡ್ ಮತ್ತು ಟಾಮ್ ಮಿಲ್ಲರ್, ರುಪಾಯಿ 90 ಅಥವಾ 95 ರೂಪಾಯಿ ಮಟ್ಟಕ್ಕೆ ಕುಸಿದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಹೇಳಿದ್ದಾರೆ. 

ಭಾರತೀಯ ರೂಪಾಯಿ ಸ್ಥಿರತೆ

ನಾನಾ ಆರ್ಥಿಕ ಬದಲಾವಣೆಗಳು ಮತ್ತು ಮಾರುಕಟ್ಟೆ ಒತ್ತಡವನ್ನು ಆಧರಿಸಿ, ಆರ್ಬಿಐ ಮತ್ತು ಸರ್ಕಾರ ಸಮರ್ಥ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯವು ಆಂತರಿಕ ಮತ್ತು ಜಾಗತಿಕ ಆರ್ಥಿಕತೆಯ ಬಲವನ್ನು ಪ್ರತಿಬಿಂಬಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments