ಬೆಳಗಾವಿ | ಎಲ್ಲರು ಊಟಕ್ಕೆ ಸೇರಿದ್ವಿ, ಎರಡನೇ ಹಂತದ ವಕ್ಫ್ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ಡಿಸೆಂಬರ್ 26, 27 ಕ್ಕೆ ಎರಡನೆ ಹಂತದ ಹೋರಾಟದ ಬಗ್ಗೆ ಚರ್ಚೆಯಾಗಿದೆ. ಜನರ ಸಮಸ್ಯೆಗಳ ಅಭಿಪ್ರಾಯ ಸಂಗ್ರಹಕ್ಕೆ ರಾಜ್ಯಾದ್ಯಂತ ಹೋರಾಟ ನಡೆಸ್ತಿದ್ದೆವೆ. ಬಿಜೆಪಿ ಬೆಂಬಲದಿಂದಲೇ ಹೋರಾಟ ಮಾಡುತ್ತಿದ್ದೆವೆ ಎಂದು ರಮೇಶ್ ಜಾರಕಿಹೊಳೆ (Ramesh Jarkiholi) ಹೇಳಿದ್ದಾರೆ.
ದೆಹಲಿ ಹೈಕಮಾಂಡ್ ಭೇಟಿ
ದೆಹಲಿ ಹೈಕಮಾಂಡ್ ಭೇಟಿ ವಿಚಾರದ ಬಗ್ಗೆ ಮಾತನಾಡಿ, ಮೊದಲ ಹಂತದ ಹೋರಾಟದ ವರದಿ ನೀಡಿದ್ದೇವೆ. ಜೆಪಿಸಿ ಸಮಿತಿಗೂ ವರದಿ ನೀಡಿದ್ದೇವೆ. ಯಾರ ವಿರುದ್ದವು ಇಲ್ಲ ಪರವು ಇಲ್ಲಾ. ಯತ್ನಾಳ್ ಶೋಕಸ್ ನೋಟಿಸ್ ಗೆ ಉತ್ತರ ಕೊಟ್ಟಿದ್ದಾರೆ. ಇದನ್ನ ಬಿಟ್ಟು ಬೇರೆ ಏನಿಲ್ಲಾ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ವಿಜಯೇಂದ್ರ ಪರ ಮಾಜಿ ಶಾಸಕರ ಸಭೆ
ಆ ಹೋರಾಟದಲ್ಲಿ ಇರುವವರ ಫೋಟೊಗಳನ್ನ ನೋಡಿ 12 ಜನ ಮಾಜಿ ಶಾಸಕರು ಇದ್ದಾರೆ. ಅಧ್ಯಕ್ಷರಿದ್ದಾರೆ ಅನ್ನೊ ಕಾರಣಕ್ಕೆ ಅವರೆಲ್ಲಾ ಹೋಗಿದ್ದಾರೆ. ಅಧ್ಯಕರು ಹೋರಾಟಕ್ಕೆ ಹೋಗಿ ಅಂತ ಹೇಳಿದ್ದಕ್ಕೆ ಹೋಗಿದ್ದಾರೆ. ಯಡಿಯೂರಪ್ಪ ಅವರ ಮೇಲೆ ನಮಗೆ ಬಹಳ ಗೌರವವಿದೆ. ಅವರು ಸೈಕಲ್ ಸುತ್ತಿ ಪಕ್ಷ ಕಟ್ಟಿದ್ದಾರೆ. ಅವರೇ ಫೋನ್ ಮಾಡಿ ಹೇಳ್ತಿದ್ದಾರೆ. ವಿಜಯೇಂದ್ರ ಪಕ್ಷದ ಮೊದಲೆನಲ್ಲಾ. ಯಡಿಯೂರಪ್ಪನವರು ರಾಷ್ಟ್ರೀಯ ನಾಯಕರು. ಅವರು ವಿಜಯೇಂದ್ರ ಅವರನ್ನ ಮಗ ಅಂತ ನೋಡಬಾರದು ರಾಜ್ಯಾಧ್ಯಕ್ಷ ಅಂತ ನೋಡಬೇಕು. ರಾಷ್ಟ್ರೀಯ ನಾಯಕರ ಜೊತೆ ಕೂತು ಚರ್ಚೆ ಮಾಡಿ ತೀರ್ಮಾನ ಮಾಡಲಿ. ಪಾರ್ಲಿಮೆಂಟ್, ಉಪಚುನಾವಣೆ ಫಲಿತಾಂಶ ನೋಡಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಲಿ ಎಂದರು.
ಹೋರಾಟಕ್ಕೆ ಹೈಕಮಾಂಡ್ ನಾಯಕರ ಅನುಮತಿ
ರಾಜ್ಯ ನಾಯಕರು ಯಾರು ಇಲ್ಲಾ ರಾಷ್ಟ್ರೀಯ ನಾಯಕರಿಗೆ ಎಲ್ಲವನ್ನ ತಿಳಿಸಿದ್ದೇವೆ. ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೆ ಅದಕ್ಕೆ ನಾವು ತಲೆಬಾಗುತ್ತೇವೆ. ಪಕ್ಷದ ತೀರ್ಮಾನವೇ ಫೈನಲ್ ಎಂದು ಹೇಳಿದ್ದಾರೆ.
ವಿಜಯೇಂದ್ರ ಜೊತೆ ವಾರ್ ಗೆ ಫುಲ್ ಸ್ಟಾಪ್
ಯಾವ ವಾರ್ ಇಲ್ಲಾ ಅದಕ್ಕೆ ನೀವು ಟೈಟಲ್ ಕೊಡ್ತಿದ್ದಿರಿ. ನಾವು ರೈತರ ಪರ ಸಮಸ್ಯೆಗಳಿಗೆ ಹೋರಾಟ ಮಾಡ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ
ಕಾಂಗ್ರೆಸ್ ನವರು ಅಧಿವೇಶನ ಮಾಡಲಿ ನಾವು ಅಲ್ಲಿಯೇ ಇದ್ದವರು. ಮಹಾತ್ಮಾಗಾಂಧಿಯವರು ಸ್ವಾತಂತ್ರ್ಯ ಹೋರಾಟಗಾರರು ಅವರನ್ನು ಹೈಜಾಕ್ ಮಾಡಿದ್ದಾರೆ. ಕಾಂಗ್ರೆಸ್ ದೇಶದ ಜನರದ್ದು ಹಂತಹಂತವಾಗಿ ಕಾಂಗ್ರೆಸ್ ಬೇರೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.