Home Blog Page 318

ಗೋವಿಂದರಾಜು ನನ್ನ ಬಳಿ ಅಶ್ಲೀಲವಾಗಿ ಮಾತನಾಡಿಲ್ಲ : ಯುಟರ್ನ್ ಹೊಡೆದ ಮಹಿಳೆ..!

ತುಮಕೂರು | ನಗರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಗೋವಿಂದರಾಜು ಮೇಲೆ ಮಹಿಳೆ ರೇಷ್ಮಾ ಗಂಭೀರ ಆರೋಪ ಮಾಡಿದ್ದರು. ಇದೀಗ ಇದ್ದಕ್ಕಿದ್ದ ಹಾಗೆ ಗೋವಿಂದರಾಜು ಅವರದು ಏನು ತಪ್ಪಿಲ್ಲ ಎಂದು ಯುಟರ್ನ್ ಹೊಡೆದಿದ್ದಾರೆ.

ಹೌದು,, ಗೋವಿಂದರಾಜು ಕ್ಯಾನ್ವಾಸ್ ವಿಚಾರವಾಗಿ ಕರೆ ಮಾಡಿ ಮಾತನಾಡಿದ್ದರು. ನಾನು ಅದನ್ನು ತಪ್ಪಾಗಿ ಭಾವಿಸಿದೆ ಎಂದು ತೇಪೆ ಹಾಕಿದ್ದಾಳೆ ಮಹಿಳೆ. ಇಲ್ಲಸಲ್ಲದ ಆರೋಪ ಮಾಡಿ ಅವರ ಘನತೆಗೆ ಧಕ್ಕೆ ತರುವಂತಹ ಕೆಲಸ ಮಾಡಲಾಗಿದೆ.  ಗೋವಿಂದರಾಜು ಅಶ್ಲೀಲವಾಗಿ ನಮ್ಮ ಬಳಿ ಮಾತನಾಡಿಲ್ಲ ಚುನಾವಣೆ ಪ್ರಚಾರದ ವಿಚಾರವಾಗಿ ಮಾತ್ರ ನನ್ನ ಬಳಿ ಮಾತನಾಡಿದ್ದರು ಎಂದಿದ್ದಾರೆ.

ಭಾನುವಾರ ಗೋವಿಂದರಾಜು ವಿಚಾರವಾಗಿ ನಗರ ಟೌನ್ ಹಾಲ್ ಬಳಿ ಮಹಿಳೆಯರು ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಗೂ ನಮಗೂ ಸಂಬಂಧವಿಲ್ಲ ಎಂದು ಮಹಿಳೆ ಸ್ಪಷ್ಟನೆ ನೀಡಿದ್ದಾರೆ.

ಈ ಮೂಲಕ ಗೋವಿಂದರಾಜು ಕುಟುಂಬಕ್ಕೆ ಕ್ಷಮೆ ಕೇಳುತ್ತೇನೆ. ಗೋವಿಂದರಾಜು ಬಳಿ ಕ್ಷಮೆ ಕೇಳುತ್ತೇನೆ ಎಂದು ಮಹಿಳೆ ರೇಷ್ಮಾ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

ಡಿ ಸಿ ಗೌರಿಶಂಕರ್ ಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ : ಈ ಬಾರಿ ಚುನಾವಣೆಗೆ ಸ್ಪರ್ಧಿಸೋದು ಪಕ್ಕಾ..?

ತುಮಕೂರು | ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ ಸಿ ಗೌರಿಶಂಕರ್ ಅವರಿಗೆ ಇದೀಗ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಹೌದು,, 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ತುಮಕೂರು ಗ್ರಾಮಾಂತರ ಕ್ಷೇತ್ರದ ಸುಮಾರು 32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ಡಿಸಿ ಗೌರಿಶಂಕರ್ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ದೂರು ದಾಖಲಿಸಿದ್ದರು.

ಕಲಬುರಗಿ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಶಾಸಕ ಡಿ ಸಿ ಗೌರಿಶಂಕರ್ ಅವರನ್ನು ಅನರ್ಹಗೊಳಿಸಿದ್ದು ಚುನಾವಣೆಯನ್ನು ಅಸಿಂದು ಎಂದು ಆದೇಶ ನೀಡಿದ್ದರು.

ಆದರೆ ಡಿ ಸಿ ಗೌರಿಶಂಕರ್ ಅವರ ಪರ ವಕೀಲರು ಈ ಆದೇಶದ ವಿರುದ್ಧವಾಗಿ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದರು. 30 ದಿನಗಳ ಕಾಲಾವಕಾಶ ನೀಡಲಾಗಿದ್ದು, ಆದಾಗಿಯೂ ಜೆಡಿಎಸ್ ಪಕ್ಷ ಗೌರಿಶಂಕರ್ ಅವರಿಗೆ ಟಿಕೆಟ್ ನೀಡಿದ್ದು ಶಾಸಕರು ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಇದೀಗ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಆದೇಶವನ್ನು ಹೊರಡಿಸಿದ್ದು, ಡಿಸಿ ಗೌರಿಶಂಕರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆ ಇಲ್ಲದಂತಾಗಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಚುನಾವಣಾ ಕಾರ್ಯದಲ್ಲಿ ಇದೀಗ ಡಿ ಸಿ ಗೌರಿಶಂಕರ್ ನಿರತರಾಗಿದ್ದಾರೆ.

ಜಗದೀಶ್ ಶೆಟ್ಟರ್  ಹಿಂದುರಿಗಿ ಬರುವ  ನಿರೀಕ್ಷೆ ಮಾಡೋಲ್ಲ  – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು | ಕಾಂಗ್ರೆಸ್ ನವರು ಬಿಜೆಪಿಯವರನ್ನು  ಕರೆದುಕೊಂಡಿರಬಹುದು. ಆದರೆ ಬಿಜೆಪಿಯ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ  ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದರು.

ಜಗದೀಶ್ ಶೆಟ್ಟರ್ ಅವರು ಮಾಡಿರುವ ಆರೋಪದ ಬಗ್ಗೆ ಮಾತನಾಡಿ ಯಾರಾದರೂ ಪಕ್ಷ ಬಿಟ್ಟು ಹೋದಾಗ ಏನಾದರೂ ಒಂದು ಕಾರಣ ಕೊಡಬೇಕು.  ಕಳೆದ 25 ವರ್ಷದ ಅವರ ರಾಜಕೀಯ ಜೀವನದಲ್ಲಿ ಬಿಜೆಪಿ ಶೆಟ್ಟರ್ ಗೆ ಎಲ್ಲವನ್ನೂ ಕೊಟ್ಟಿದೆ. ಅವರನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹೋಗಿದ್ದಾರೆ ಅದಕ್ಕೊಂದು ನೆಪ ಅಷ್ಟೇ ಎಂದರು.

ಜಗದೀಶ್ ಶೆಟ್ಟರ್ ಅವರು  ವಾಪಸ್ಸು ಬರುವ  ಬಗ್ಗೆ ಮಾತನಾಡಿ,   ಅವರು ಹಿಂದುರಿಗಿ ಬರುವ  ನಿರೀಕ್ಷೆ ಮಾಡೋಲ್ಲ  ಎಂದರು. ವೀರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸರನ್ನ ಹೊರಹಾಕಿದನಂಥ  ಪಕ್ಷಕ್ಕೆ ಶೆಟ್ಟರ್  ಹೋಗಿದ್ದಾರೆ.  ಮೊದಲು ಸನ್ಮಾನ ಮಾಡಿ  ಚುನಾವಣಾ ಬಳಿಕ ಅವಮಾನ ಮಾಡ್ತಾರೆ. ಜಗದೀಶ ಶೆಟ್ಟರ್ ಅವರನ್ನ ಬಳಸಿಕೊಂಡು ಹೊರಗೆ ಹಾಕುತ್ತಾರೆ. ಬಿಎಸ್ ವೈ ಇರೋತನಕ ಲಿಂಗಾಯತರು ನಮ್ಮ ಜೊತೆ ಇರುತ್ತಾರೆ ಎಂದರು.

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟದ್ದು ದುರಾದೃಷ್ಟಕರ – ಸಿ ಟಿ ರವಿ

ಚಿಕ್ಕಮಗಳೂರು | ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟದ್ದು ದುರಾದೃಷ್ಟಕರ. ಮೆರಿಟ್, ಡಿ ಮೆರಿಟ್ ಬಗ್ಗೆ ನಾನು ಚರ್ಚೆ ಮಾಡಲ್ಲ ಇಷ್ಟು ದಿನ ಬಿಜೆಪಿ ಪರ, ಕಾಂಗ್ರೆಸ್ ವಿರುದ್ಧದ ರಾಜಕಾರಣ ಮಾಡಿದವರು ನಿನ್ನೆವರೆಗೆ ಕಾಂಗ್ರೆಸ್ ಕೋಮಾದಲ್ಲಿದೆ, ಐಸಿಯುನಲ್ಲಿದೆ ಅದನ್ನ ಯಾರು ಬದುಕಿಸಲು ಆಗುವುದಿಲ್ಲ ಎಂದವರು ನೀವೇ ಹೇಳುತ್ತಿದ್ದ ಕೋಮಾಗೆ ಹೋಗಿರುವ ಪಾರ್ಟಿಗೆ ಹೋಗಿ ಹೋಗಿರುವುದು ದುರಾದೃಷ್ಟಕರ ಎಂದು ಶಾಸಕ ಸಿ ಟಿ ರವಿ ಹೇಳಿದ್ದಾರೆ.

ಪಕ್ಷ ಸ್ವಾಭಾವಿಕವಾಗಿ ರಿಕವರಿ ಮಾಡಿಕೊಳ್ಳುತ್ತದೆ. ಆದರೆ ವ್ಯಕ್ತಿಗಳು ರಿಕವರಿ ಮಾಡಿಕೊಳ್ಳಲು ಆಗುವುದಿಲ್ಲ. ಜನಸಂಘದಿಂದ ಬಂದವರು ಎಂಬ ಹೆಗ್ಗಳಿಕೆ ಇತ್ತು ಅದನ್ನ ಕಳೆದುಕೊಂಡಿದ್ದೀರಾ..? ನೀವು ಏನೆಲ್ಲಾ ಆಗಿದ್ದೀರಾ ಅದು ಭಾರತೀಯ ಜನತಾ ಪಾರ್ಟಿಯ ಲೆಕ್ಕಕ್ಕೆ ಸೇರುತ್ತದೆ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸಾವಿರಾರು ಕಾರ್ಯಕರ್ತರ ಜೊತೆ ಬಂದು ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಿ.ಟಿ. ರವಿಗೆ ಪತ್ನಿ ಪಲ್ಲವಿ, ಸಫಾಯಿ ಕರ್ಮಚಾರಿ ನಿಗಮ ಮಂಡಳಿ ಅಧ್ಯಕ್ಷ ವೆಂಕಟೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ತಾಪಂ ಮಾಜಿ‌ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಸಾಥ್ ನೀಡಿದ್ದಾರೆ.

ಮೀಸಲಾತಿ ಹೆಚ್ಚಳ ದಿಟ್ಟ ನಿರ್ಧಾರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಯಚೂರು | ನಾನು ಅಂಬೇಡ್ಕರ್ ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  ಅವರು  ರಾಯಚೂರಿನಲ್ಲಿ ಪರಿಶಿಷ್ಟ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ  ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಶಿಕ್ಷಣ, ಉದ್ಯೋಗ ಮೀಸಲಾತಿ ನೀಡುವ ಮೂಲಕ ಸ್ವಾಭಿಮಾನಿ ಬದುಕು ಬದುಕಬೇಕೆಂಬ ಅಂಬೇಡ್ಕರ್ ಅವರ ದೂರದೃಷ್ಟಿ ಯಿಂದ ಇದು ಸಾಧ್ಯವಾಗಿದೆ. ಈ ಜನಾಂಗಕ್ಕೆ ನ್ಯಾಯ ನೀಡಬೇಕು ಎಂದು ಮೀಸಲಾತಿ ಹೆಚ್ಚಳ ಮಾಡುವ ದಿಟ್ಟ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಮತ ಬ್ಯಾಂಕ್

ಹಿಂದಿನ ಸರ್ಕಾರಗಳು ಈ ನಿರ್ಧಾರ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.  ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣದಲ್ಲಿ ಹೇಳಿದರು. ಪರಿಶಿಷ್ಟರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದರು.

ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ

ಭಾರತದ ಜನಸಂಖ್ಯೆ 130 ಕೋಟಿ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕರ್ನಾಟಕದಲ್ಲಿ  ಆರು ಜಾತಿಗಳು ಎಸ್.ಸಿ ಗೆ ಸೇರಿದ್ದವು. ಈಗ 103 ಜಾತಿಗಳಿವೆ. ಜನಸಂಖ್ಯೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಾಗಿರಲಿಲ್ಲ. ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಆದರೆ ಮೀಸಲಾತಿ ಹೆಚ್ಚಿಸುವ ಪ್ರಯತ್ನ ಮಾಡಲಿಲ್ಲ. ಸಂವಿಧಾನದಲ್ಲಿ  ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಲು ಅಂಬೇಡ್ಕರ್ ಹೇಳಿದ್ದು, ಆ ಕೆಲಸವಾಗಿಲ್ಲ. ಬೇರೆ ರಾಜ್ಯಗಳಲ್ಲಿ 25 / 30 ರಷ್ಟಿಲ್ಲ.  ಇಂದಿರಾ ಸಹಾನಿ ಪ್ರಕರಣದ ತೀರ್ಪನ್ನು ನಾಗಮೋಹನ್ ದಾಸ್ ಸಮಿತಿ ಎತ್ತಿ ಹಿಡಿದು ಶಿಫಾರಸ್ಸು ಮಾಡಿದೆ ನ್ಯಾ. ಸುಭಾಷ್ ಅಡಿ ನೇತೃತ್ವದ ಸಮಿತಿ  ತನ್ನ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಮೀಸಲಾತಿ ಹೆಚ್ಚಿಸಿದೆ.

ಮುಕ್ತಿ ದೊರೆಯಬೇಕು

ಶಿಕ್ಷಣ, ಉದ್ಯೋಗ ಇಲ್ಲದಿದ್ದರೆ ಸಾಮಾಜಿಕವಾಗಿ ಗುಲಾಮರಾಗಿ ಬದುಕುವ ರೀತಿಗೆ ಮುಕ್ತಿ ತರಬೇಕು. ಮೀಸಲಾತಿ ಮುಟ್ಟಲು ಸಾಧ್ಯವಿಲ್ಲ. ರಾಜಕೀಯ ಜಾಗೃತಿ ಅಗತ್ಯ. ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೇ ಸಾಯಬೇಕೆಂಬ ಕಾನೂನಿಲ್ಲ. ಅವರೂ ಮುಂದೆ ಬಂದ ಸಬಲರಾಗಬೇಕು. ಬಡತನ ಮುಕ್ತ ಬದುಕು , ಸ್ವಾಭಿಮಾನದ ಬದುಕು ಬದುಕಬೇಕು ಎಂದರು.

ಜನ ಜಾಗೃತರಾಗಿದ್ದಾರೆ

ಹಿಂದುಳಿದ ಸಮುದಾಯ ಜಾಗೃತವಾಗಿದೆ, ನಮ್ಮವರು ಯಾರು ಹೋರಾಟಕ್ಕೆ ಯಾರು ಬೆಲೆ ಕೊಡುತ್ತಾರೆ,  ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾರೆ,  ನಮ್ಮ ದ್ವನಿಯನ್ನು ಕೇಳುತ್ತಾರೆ, ಯಾರು ನಮ್ಮ ಪರವಾಗಿ ಸಂಕಷ್ಟದಲ್ಲಿ ನಿಲ್ಲುತ್ತಾರೆ, ರಕ್ಷಣೆಯನ್ನು ಕೊಡುತ್ತಾರೆಯೋ ಅವರಿಗೆ ಮತ ನೀಡಬೇಕು ಎಂದರು.

ನಾಟಕ ನಡೆಯುವುದಿಲ್ಲ

ಅಭಿವೃದ್ದಿ, ಶಿಕ್ಷಣ, ಉದ್ಯೋಗ  ನಮ್ಮ ಹಕ್ಕುಗಳನ್ನ ಕೊಡುವವರು,  ಅವರೇ ನಮ್ಮವರು ಎಂಬ ಜಾಗೃತಿ ಮೂಡಬೇಕು. ಹೀಗಾಗಿ ನಮ್ಮ ಮುಂದೆ ಇನ್ನು ನಾಟಕ ನಡೆಯುವುದಿಲ್ಲ, ಬದಲಾವಣೆಯಾಗಿದೆ, ಇನ್ನು ಮುಂದೆ ಯಾರು ನಮ್ಮ ಪರವಾಗಿ ನಿಲ್ಲುತ್ತಾರೆ ಅವರಿಗೆ ನಮ್ಮ ಮತ ಎಂಬ ತೀರ್ಮಾನ ಜನಗಳು ಮಾಡಬೇಕು.  ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ, ಯುವಕರಲ್ಲಿ  ಜಾಗೃತಿ ಮೂಡಿದೆ ಎಂದರು.

ರಾಜಕೀಯ ಇಚ್ಛಾಶಕ್ತಿಯಿಂದ ಮಾಡಿರುವ ತೀರ್ಮಾನದ ಲಾಭ ಪಡೆಯಬೇಕು. ಈ ವಿಚಾರವನ್ನು ಮನೆ ಮನೆಗೆ ತಿಳಿಸಿ ಸಾಮಾಜಿಕ ಕ್ರಾಂತಿ ಮಾಡಬೇಕು ಎಂದು ತಿಳಿಸಿದರು.

ಸೂಪರ್ ಹೀರೊ ಪಾತ್ರದಲ್ಲಿ ನಟ ಸೂರ್ಯ : 10 ಭಾಷೆಗಳ ಪ್ಯಾನ್ ಇಂಡಿಯಾ ಸಿನಿಮಾದ ಪೋಸ್ಟರ್ ರಿಲೀಸ್..!

ಮನರಂಜನೆ | ತಮಿಳಿನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಸೂರ್ಯ ಅಭಿನಯದ ‘ಸೂರ್ಯ 42’ ಚಿತ್ರವೂ ಒಂದು. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಘೋಷಣೆಯಾದ ಈ ಚಿತ್ರವು 3ಡಿಯಲ್ಲಿ ಮೂಡಿಬರುತ್ತಿದ್ದು, 10 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಇದೀಗ ‘ಕಂಗುವ’ ಎಂದು ನಾಮಕರಣ ಮಾಡಲಾಗಿದ್ದು ಮೋಷನ್ ಪೋಸ್ಟರ್ ಸಹ ಇತ್ತೀಚೆಗೆ ಬಿಡುಗಡೆಯಾಗಿದೆ.

ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಕಂಗುವ’ ಚಿತ್ರವು 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರ ಸಂಗೀತವಿರುವ ಈ ಚಿತ್ರವು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ವಿ ಎಫ್ ಎಕ್ಸ್ ಗೆ ಸಾಕಷ್ಟು ಹಣ ಖರ್ಚಾಗಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗಿದ್ದು, ಚಿತ್ರವು 2024ರಲ್ಲಿ ಬಿಡುಗಡೆಯಾಗಲಿದೆ.

ಈಗಾಗಲೇ ಗೋವಾ, ಚೆನ್ನೈ ಮುಂತಾದ ಕಡೆ ಚಿತ್ರಕ್ಕೆ ಶೇ. 50ರಷ್ಟು ಚಿತ್ರೀಕರಣ ಮುಗಿದಿದ್ದು, ಬಾಕಿ ಇರುವ ಚಿತ್ರೀಕರಣವನ್ನು ಬೇಗ ಮುಗಿಸಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.

ಅಳಿಲನ್ನು ನುಂಗಿದ ಕೊಳಕುಮಂಡಲ ಹಾವು ಕೊನೆಗೆ ಏನಾಯ್ತು ಗೊತ್ತಾ..?

ತುಮಕೂರು | ತುಮಕೂರಿನ ಮಹಾಲಕ್ಷ್ಮಿ ನಗರದ ಧನುಷ್ ಚಡಗ ಅವರ ಮನೆಯ ಕೈ ತೋಟದಲ್ಲಿ ಅಳಿಲನ್ನು ನುಂಗುತ್ತಿದ್ದ ಹಾವನ್ನು ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಡುವಂತಹ ಕೆಲಸ ಮಾಡಿದ್ದಾರೆ ಉರಗ ತಜ್ಞ ಮನು ಅಗ್ನಿವಂಶಿ.

ಹೌದು,, ತೋಟದಲ್ಲಿ ಕೊಳಕುಮಂಡಲ ಹಾವು ಅಳಿಲನ್ನು ನುಂಗುತ್ತಿರವುದನ್ನು ನೋಡಿದ ಧನಷ್ ಅವರು ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆಮಾಡಿ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ ರವರು ಹಾವು ಅಳಿಲನ್ನು ಪೂರ್ತಿಯಾಗಿ ನುಂಗುವರೆಗೂ ಕಾದು ನಂತರ ಸುರಕ್ಷಿತವಾಗಿ ರಕ್ಷಸಿ  ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಕೊಳಕುಮಂಡಲ ಹಾವು ಸಾಮಾನ್ಯವಾಗಿ ಇಲಿ ಮತ್ತು ಕಪ್ಪೆಗಳನ್ನು ತಿಂದು ಜೀವಿಸುತ್ತವೆ ಅಳಿಲನ್ನು ತಿನ್ನುವುದು ಅಪರೂಪ ಎಂದು  ಉರಗ ತಜ್ಞ ಮನು ತಿಳಿಸಿದರು.

ತುಮಕೂರು ಕಾಂಗ್ರೆಸ್ ನಲ್ಲಿ ಬಂಡಾಯ ಶಮನ : ಇಕ್ಬಾಲ್ ಪರ ನಿಂತ ಷಫಿ ಅಹಮದ್..!

ತುಮಕೂರು | ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲಿ ಎದ್ದಿದ್ದ ಭಿನ್ನಮತ ಶಮನವಾಗಿದೆ. ಹಿರಿಯ ನಾಯಕ, ಮಾಜಿ ಶಾಸಕ ಎಸ್.ಷಫಿ ಅಹಮ್ಮದ್ ಅಭ್ಯರ್ಥಿ ಇಕ್ಬಾಲ್  ಅಹ್ಮದ್ ಗೆ ಬಲ ನೀಡಲು ಮನಸ್ಸು ಮಾಡಿದ್ದಾರೆ.

ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮ್ಮದ್ ಭಾನುವಾರ ತನ್ನ ರಾಜಕೀಯ ಗುರುವೂ ಆಗಿರುವ ಎಸ್.ಷಫಿ ಅಹ್ಮದ್ ಅವರನ್ನು ಭೇಟಿ ನೀಡಿ ಆಶೀರ್ವಾದ ಪಡೆದರು. ಜತೆಗೆ ತನಗೆ ನಿಮ್ಮ ಬೆಂಬಲ ಬೇಕೆಂದು ಕೇಳಿಕೊಂಡರು. ಷಫಿ ಅಹ್ಮದ್ ಇಕ್ಬಾಲ್ ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ರಫೀಕ್ ಅಹ್ಮದೇ ಆಗಲಿ ಅಥವಾ ಇಕ್ಬಾಲೇ ಆಗಲಿ ಯಾರೇ ಆದರೂ ಕಾಂಗ್ರೆಸ್. ಹೀಗಾಗಿ ಪಕ್ಷ ಮುಖ್ಯವೆಂಬ ಭಾವನೆಯನ್ನು ವ್ಯಕ್ತಪಡಿಸಿದ ಷಫಿ ಅಹ್ಮದ್ ಇಕ್ಬಾಲ್ ಗೆಲುವಿಗೆ ಶ್ರಮಿಸು ಭರವಸೆ ನೀಡಿದ್ದಾರೆನ್ನಲಾಗಿದೆ.

ಅಳಿಯ, ಮಾಜಿ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಗೆ ಟಿಕೆಟ್ ಕೈ ತಪ್ಪಿ ಇಕ್ಬಾಲ್ ಅಹಮ್ಮದ್ ಗೆ ಮಣೆ ಹಾಕಿದ ಹಿನ್ನೆಲೆಯಲ್ಲಿ ಷಫಿ ಅಸಮಾಧಾನಗೊಂಡಿದ್ದರು.  ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ ಇತ್ತೀಚೆಗೆ ಷಫಿ ಅವರನ್ನು ಭೇಟಿ ಮಾಡಿ ‘ಪಕ್ಷದ ಅಭ್ಯರ್ಥಿ ಇಕ್ಬಾಲ್  ಅವರನ್ನು ಗೆಲ್ಲಿಸುವ ಹೊಣೆ ನಿಮ್ಮದು ‘ ಎಂದು ಹೇಳಿದ್ದರು. ಸುರ್ಜೆವಾಲ ಮನವೊಲಿಕೆ ಯತ್ನ ಯಶಸ್ವಿಯಾಗಿತ್ತು.‌ ಇದೀಗ ಇಕ್ಬಾಲ್ ‌ಕೂಡ ಮಾತುಕತೆ ನಡೆಸಿರುವುದರಿಂದ ಗುರುವಿನ ಶ್ರೀರಕ್ಷೆ ಸಿಕ್ಕಂತಾಗಿದೆ.

ಪ್ರಚಾರಕ್ಕೆ ಅಧಿಕೃತ ಚಾಲನೆ

ನಗರ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಭಾನುವಾರ ಮಹಾನಗರ ಪಾಲಿಕೆ ಸಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರ ನಿವಾಸದಿಂದ ಚಾಲನೆ ನೀಡಲಾಯಿತು. ಅಭ್ಯರ್ಥಿ  ಇಕ್ಬಾಲ್ ಪರ ಪ್ರಚಾರಕ್ಕೆ ಮಾಜಿ ಶಾಸಕ ಎಸ್.ಷಫಿ ಅಹ್ಮದ್ ಚಾಲನೆ‌ ನೀಡಿದರು.   ಮಹಾನಗರ ಪಾಲಿಕೆ‌ ಮೇಯರ್ ಪ್ರಭಾವತಿ ಸುಧೀಶ್ವರ್,  ಪಾಲಿಕೆ ಮಾಜಿ ವಿರೋಧಪಕ್ಷದ  ನಾಯಕ ಕುಮಾರ್ ಜೆ. , ಸದಸ್ಯರಾದ ಶಕೀಲ್ ಅಹಮ್ಮದ್, ವಿನಾಯತ್ ಖಾನ್, ಶಿವರಾಂ‌ ಮಹೇಶ್,‌ಎನ್., ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮೆಹಬುಬ್, ಪಾಶರಾಜು ಜಿ. , ಹಫೀಸ್ ಉಲ್ಲಾ ಖಾನ್, ಮಹಮ್ಮದ್ ಪೀರ್ , ತ್ರಿಲೋಕ್ ಜಿಯಾ‌ ಮತ್ತಿತರರಿದ್ದರು.

ಕರ್ನಾಟಕ 360 ಲೋಕಾರ್ಪಣೆ..!

ಸಮಸ್ತ ಕರ್ನಾಟಕದ ಜನತೆಗೆ ಕರ್ನಾಟಕ 360 ತಂಡದ ವತಿಯಿಂದ ನಮಸ್ಕಾರ. ಹೊಸ ಆಲೋಚನೆ, ಹೊಸ ವಿಚಾರಗಳೊಂದಿಗೆ ಇಂದಿನಿಂದ ನಿಮ್ಮ ಮುಂದೆ ಬರುತ್ತಿದೆ, ಕರ್ನಾಟಕ 360 ಎಂಬ ವಿನೂತನ ಸುದ್ದಿ ಹಾಗೂ ಮನರಂಜನೆಯ ನ್ಯೂಸ್ ವೆಬ್ ಪೋರ್ಟಲ್.

ಕರ್ನಾಟಕ 360 ಸ್ಥಳೀಯ ಸುದ್ದಿಗಳು ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಸುದ್ದಿಗಳ ಜೊತೆಗೆ ಆರೋಗ್ಯ, ಕ್ರೀಡೆ, ಮನರಂಜನೆ ಹಾಗೂ ವಿಶೇಷ ಮಾಹಿತಿಗಳನ್ನು ಕೂಡ ನೀಡುತ್ತದೆ. ಇದನ್ನು ಹರಸಿ ಹಾರೈಸಿ.

ಇಂತಿ

ಕರ್ನಾಟಕ 360 ತಂಡ