ಬೆಂಗಳೂರು | ನೊಂದ ಮಹಿಳೆಯರ ಪರ ನಿಲ್ಲದೆ ಆರೋಪಿ ಮುನಿರತ್ನ (Munirathna Egg Attack) ಪರ ನಿಂತಿರುವ ಬಿಜೆಪಿ ನಾಯಕರು ಮತ್ತು ಪಕ್ಷದ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.
ಈ ಬಗ್ಗೆ ನೊಂದ ಮಹಿಳೆಯೊಂದಿಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಮುನಿರತ್ನರವರ ಮೇಲೆ ಮೊಟ್ಟೆ ಎಸೆತ ಒಂದು ನಾಟಕೀಯ ಬೆಳವಣಿಗೆ ಇದನ್ನು ಬಹು ದೊಡ್ಡ ಪ್ರಕರಣ ಎಂದು ಬಿಜೆಪಿ ಪಕ್ಷ ಬಿಂಬಿಸುತ್ತಿದೆ. ವಿಧಾನಸೌಧದಲ್ಲಿ ಅತ್ಯಚಾರವಾಗಿದೆ ನ್ಯಾಯ ಕೊಡಿಸಿ ಎಂದು ಎಷ್ಟೇ ಮನವಿ ಮಾಡಿದರು ಅವರ ಕಿವಿ ಕಿವುಡಾಗಿತ್ತು. ಆಗ ನೊಂದ ಮಹಿಳೆಯರ ಪರ ಬರಲಿಲ್ಲ, ರೇಪಿಸ್ಟ್ ಗಳು, ಸುಳ್ಳು ಹೇಳುವವರ ಪರ ನಿಂತಿದ್ದಾರೆ ಎಂದರು.
ನೊಂದ ಮಹಿಳೆ ವಿಧಾನಸೌಧದಲ್ಲಿ ಅತ್ಯಚಾರವಾದರು ಅದರ ಬಗ್ಗೆ ನ್ಯಾಯ ಒದಗಿಸಲು ಮತ್ತು ಮಹಿಳೆಯ ನೋವು ಅಲಿಸಲು ಬಿಜೆಪಿ ಪಕ್ಷದ ಯಾವ ಒಬ್ಬ ಮುಖಂಡರು ಮುಂದೆ ಬರಲಿಲ್ಲ. ಶಾಸಕ ಮುನಿರತ್ನರವರು ಸ್ವಯಂಪೇರಿತರಾಗಿ ಮೊಟ್ಟೆ ದಾಳಿ ಮಾಡಿಸಿಕೊಂಡಿದ್ದಾರೆ. ಸಾರ್ವಜನಿಕರಿಂದ ಕನಿಕರ ಗಿಟ್ಟಿಕೊಳ್ಳಲು ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಶಾಸಕ ಮುನಿರತ್ನ ಕುಟುಂಬ ರೌಡಿ ಹಿನ್ನಲೆ ಇದೆ. ಶಾಸಕರಾಗಿ ಆಯ್ಕೆಯಾದ ನಂತರ ರೌಡಿಸಂ ಮಾಡುವುದು ಬಿಟ್ಟಿಲ್ಲ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಪ್ರಜಾಪ್ರತಿನಿಧಿ ಒಬ್ಬ ಕ್ರಿಮಿನಲ್ ಅದರೆ ಸಮಾಜ ಕೆಟ್ಟು ಹೋಗುತ್ತದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಂತಿಯುತ ಹೋರಾಟದಲ್ಲಿ ಇರುವವರು ಎಂದು ಕಾನೂನನ್ನು ಕೈಗೆತ್ತಿಕೊಂಡಿಲ್ಲ ಎಂದರು.