Wednesday, February 5, 2025
Homeಜಿಲ್ಲೆತುಮಕೂರುKN Rajanna challenge | ಕೆ ಎನ್ ರಾಜಣ್ಣ ಸವಾಲು ಸ್ವೀಕರಿಸುತ್ತಾರ ಗುಬ್ಬಿ ಶಾಸಕ ಎಸ್...

KN Rajanna challenge | ಕೆ ಎನ್ ರಾಜಣ್ಣ ಸವಾಲು ಸ್ವೀಕರಿಸುತ್ತಾರ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್..?

ತುಮಕೂರು | ತುಮಕೂರು ಹಾಲು ಒಕ್ಕೂಟ (Tumulu) ಅಧ್ಯಕ್ಷ ಸ್ಥಾನವನ್ನು ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ ಅವರ ಪತ್ನಿಗೆ ನೀಡದಿರುವ ಕುರಿತು ಶಾಸಕ ಶ್ರೀನಿವಾಸ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚೆಗಷ್ಟೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ. ಎನ್. ರಾಜಣ್ಣ (KN Rajanna challenge) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ನಿರ್ಣಯವನ್ನು ತಮ್ಮೊಂದಿಗೆ ಚರ್ಚೆಯಿಲ್ಲದೇ ತೆಗೆದುಕೊಳ್ಳಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. 

“ನಾನು ಯಾರಿಗೂ ಕೇಳೋದಿಲ್ಲ” – (KN Rajanna challenge) ಸಚಿವ ರಾಜಣ್ಣ 

ಶಾಸಕ ಶ್ರೀನಿವಾಸ ಅವರ ಆರೋಪಗಳಿಗೆ ತಿರುಗೇಟು ನೀಡಿದ ಸಹಕಾರ ಸಚಿವ ಕೆ. ಎನ್. ರಾಜಣ್ಣ (KN Rajanna challenge), “ನಾನು ಯಾರಿಗೂ ಕೇಳುವುದಿಲ್ಲ. ದೇವರು ಹೇಗೆ ಬುದ್ಧಿ ಕೊಡುತ್ತಾನೋ ಹಾಗೆ ನಾನು ಕೆಲಸ ಮಾಡುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.  ಒಬ್ಬ ದಲಿತನನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದರೆ ಅದನ್ನು ವಿರೋಧಿಸುವುದು ರಾಜಕೀಯಕ್ಕೆ ಗೌರವ ತರುವುದಿಲ್ಲ. ದಲಿತರಿಗೆ ನ್ಯಾಯ ಕೊಡುವುದು ಸರ್ಕಾರದ ಕರ್ತವ್ಯ ಎಂದು ಹೇಳಿದ್ದಾರೆ.  

ಒಕ್ಕಲಿಗರನ್ನು ಹಿಂಬಾಲಿಸುವ ಆರೋಪಕ್ಕೆ ರಾಜಣ್ಣ ತಿರುಗೇಟು 

ಶಾಸಕ ಶ್ರೀನಿವಾಸ ಅವರು ಅಧ್ಯಕ್ಷ ಸ್ಥಾನಕ್ಕಾಗಿ 8 ಜನ ಒಕ್ಕಲಿಗ ನಿರ್ದೇಶಕರಾದರೂ ಅವರನ್ನು ಆಯ್ಕೆ ಮಾಡಲಿಲ್ಲ ಎಂದು ದೂರಿದ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎಷ್ಟು ಕುರುಬ ಶಾಸಕರು ಇದ್ದರು ಎಂದು ಪ್ರಶ್ನೆ ಮಾಡಿದ್ದಾರೆ. ಪಾವಗಡ ಶಾಸಕ ವೆಂಕಟೇಶ್ ಅವರನ್ನು ನಾಮ ನಿರ್ದೇಶನ ಮಾಡಿ ಅಧ್ಯಕ್ಷ ಸ್ಥಾನ ನೀಡಿದವರು ನಾನು ಎಂದು ತಿರುಗೇಟು ನೀಡಿದ್ದಾರೆ.   

ಎಸ್ ಆರ್ ಶ್ರೀನಿವಾಸ್ ಗೆ ಕೆ ಎನ್ ರಾಜಣ್ಣ (KN Rajanna challenge) ಸವಾಲು

ರಾಜಣ್ಣ ಅವರು, ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಎಲ್ಲಾ ಪಕ್ಷದವರ ಸಹಕಾರದಿಂದ ಆಯ್ಕೆಯಾದೆ. ಶ್ರೀನಿವಾಸ್ ಗೆ ತಾಕತ್ ಇದ್ದರೆ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ತೀಕ್ಷ್ಣವಾಗಿ ಟಾಂಗ್ ನೀಡಿದ್ದಾರೆ.   

ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಸ್ವಾಗತ

ಬಿಎಸ್‌ಆರ್ ಪಕ್ಷದ ಶಕ್ತಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವಿನ ವೈಮನಸ್ಯ, ಮತ್ತು ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಅವರನ್ನು ಸ್ವಾಗತಿಸುವುದಾಗಿ ತಿಳಿಸಿದರು. ಅವರು ಪ್ರಭಾವಶಾಲಿ ನಾಯಕ. ಅವರು ನಮ್ಮ ಪಕ್ಷಕ್ಕೆ ಬಂದರೆ ಸಮಾಜದ ಹಿತಕ್ಕಾಗಿ ಕೆಲಸ ಮಾಡಬಹುದು ಎಂದು ತಿಳಿಸಿದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments