ಸಿನಿಮಾ | ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರಸ್ತುತ ಕಾಂತಾರ 2 ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರೂ, ಪರಭಾಷಾ ಸಿನಿಮಾಗಳಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ತೆಲುಗು ನಿರ್ದೇಶಕ ಪ್ರಶಾಂತ್ ವರ್ಮಾ ಅವರ ‘ಜೈ ಹನುಮಾನ್’(Jai Hanuman) ಎಂಬ ಚಿತ್ರದಲ್ಲಿ ರಿಷಬ್ ಶೆಟ್ಟಿ ಆಂಜನೇಯ ಸ್ವಾಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾದ ಬೆನ್ನಿಗೇ, ಅದು ವಿವಾದಕ್ಕೆ ಕಾರಣವಾಗಿದೆ.
(Jai Hanuman) ಪೋಸ್ಟರ್ ಮತ್ತು ಟೀಸರ್ ವಿವಾದ
‘ಜೈ ಹನುಮಾನ್’ (Jai Hanuman) ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ಹನುಮಂತನ ಪಾತ್ರವನ್ನು ಹಿಂದೂ ಪೌರಾಣಿಕ ಚಿತ್ರಣದ ಮಿತಿಗಳನ್ನು ಮೀರಿ, ವಿಭಿನ್ನವಾಗಿ ತೋರಿಸಲಾಗಿದೆ. ಹನುಮಂತನನ್ನು ವಾನರ ಮುಖದ ಬದಲು ಮಾನವೀಯ ರೂಪದಲ್ಲಿ ತೋರಿಸಿರುವುದಕ್ಕೆ ನಿರ್ದಿಷ್ಟ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಉದ್ದನೆಯ ಗಡ್ಡ ಮತ್ತು ಕೂದಲು ಹೊಂದಿರುವ ಚಿತ್ರಣದ ಜೊತೆಗೆ, ಶ್ರೀರಾಮನ ಮೂರ್ತಿಯನ್ನು ಅಪ್ಪಿಕೊಂಡಿರುವ ದೃಶ್ಯವೂ ಇದೆ. ಟೀಸರ್‌ನಲ್ಲಿ ಇದೇ ದೃಶ್ಯಾವಳಿಗಳು ಪುನರಾವೃತ್ತವಾಗಿವೆ.
ಚಿತ್ರ ತಂಡದ ವಿರುದ್ಧ ದೂರು ದಾಖಲು
ವಕೀಲ ತಿರುಮಲ ರಾವ್ ನಾಂಪಲ್ಲಿ ನ್ಯಾಯಾಲಯದಲ್ಲಿ ‘ಜೈ ಹನುಮಾನ್’(Jai Hanuman) ಚಿತ್ರದ ನಿರ್ದೇಶಕ ಪ್ರಶಾಂತ್ ವರ್ಮಾ, ನಟ ರಿಷಬ್ ಶೆಟ್ಟಿ, ಮತ್ತು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಹನುಮಂತನ ವಾನರ ರೂಪವನ್ನು ಬದಲಾಯಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಸ್ಟರ್ ಮತ್ತು ಟೀಸರ್‌ಗಳನ್ನು ಹಿಂಪಡೆಯುವಂತೆ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದಾರೆ.
ಚಿತ್ರದ ಕಥೆ ಮತ್ತು ನಿರೀಕ್ಷೆ
ಜೈ ಹನುಮಾನ್ (Jai Hanuman) ರಾಮಾಯಣದ ನಂತರದ ಕಥೆಯನ್ನು ಒಳಗೊಂಡಿದ್ದು, ರಾಮನಿಗೆ ಹನುಮಂತ ನೀಡಿರುವ ಪ್ರತಿಜ್ಞೆಯ ಸುತ್ತ ಹೆಣೆಯಲಾಗಿದೆ. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿ ಆಂಜನೇಯ ಸ್ವಾಮಿಯ ನಟನೆ ಚಿತ್ರಣ ಪ್ರೇಕ್ಷಕರಲ್ಲಿ ನಿರೀಯನ್ನು ಹೆಚ್ಚಿಸಿದೆ.
ಈ ವಿವಾದವನ್ನು ಚಿತ್ರತಂಡ ಹೇಗೆ ತಡೆಗಟ್ಟುತ್ತದೆ, ಮತ್ತು ನ್ಯಾಯಾಲಯದ ತೀರ್ಪು ಹೇಗಿರುತ್ತದೆ ಎಂಬುದು ಕಾದು ನೋಡಬೇಕಾಗಿದೆ.