Wednesday, March 12, 2025
Homeಆರೋಗ್ಯInternational Epilepsy Awareness Day | ಮೂರ್ಛೆ ರೋಗ ಯಾಕೆ ಬರುತ್ತೆ, ಯಾರಿಗೆ ಬರುತ್ತೆ ಗೊತ್ತಾ..?...

International Epilepsy Awareness Day | ಮೂರ್ಛೆ ರೋಗ ಯಾಕೆ ಬರುತ್ತೆ, ಯಾರಿಗೆ ಬರುತ್ತೆ ಗೊತ್ತಾ..? ಇಲ್ಲಿದೆ ನೋಡಿ ಈ ಬಗ್ಗೆ ಮಾಹಿತಿ

ಆರೋಗ್ಯ ಸಲಹೆ | ಅಪಸ್ಮಾರ ಅಥವಾ ಮೂರ್ಛೆ ರೋಗವು (International Epilepsy Awareness Day) ಮೆದುಳಿನ ದೀರ್ಘಕಾಲದ ಅಸ್ವಸ್ಥತೆಯಾಗಿದ್ದು, ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಆದರೂ, ಹಲವರು ಈ ಕಾಯಿಲೆಯನ್ನು ಶಾಪವೆಂದು ನಂಬುತ್ತಾರೆ. ಈ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಮತ್ತು ಅಪಸ್ಮಾರ ರೋಗ ಕುರಿತು ಜಾಗೃತಿ ಮೂಡಿಸಲು ಪ್ರತಿವರ್ಷ ಫೆಬ್ರವರಿ ತಿಂಗಳ ಎರಡನೇ ಸೋಮವಾರ ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನವನ್ನು (International Epilepsy Awareness Day) ಆಚರಿಸಲಾಗುತ್ತದೆ. 

ಇದನ್ನು ಓದಿ : Yash Toxic | ನಟ ಯಶ್ ನಿರ್ಧಾರಕ್ಕೆ ‘ಟಾಕ್ಸಿಕ್’ ನಿರ್ಮಾಪಕರು ಶಾಕ್ ; ಏರಿಕೆಯಾಯ್ತು ಚಿತ್ರದ ಬಜೆಟ್..!

ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನದ (International Epilepsy Awareness Day) ಇತಿಹಾಸ

ಅಪಸ್ಮಾರ ಪೀಡಿತರಿಗೆ ಬೆಂಬಲ ನೀಡಲು, ಮತ್ತು ಮೂರ್ಛೆ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು 2015ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದೊಂದಿಗೆ ಆರೋಗ್ಯ ರಕ್ಷಣಾ ಸೇವೆಗಳನ್ನು ಸುಧಾರಿಸುವ ಪ್ರಯತ್ನವೂ ಕೂಡ ಮಾಡಲಾಗುತ್ತಿದೆ. 

ಅಪಸ್ಮಾರ ಕಾಯಿಲೆ (International Epilepsy Awareness Day) ಮತ್ತು ಅದರ ಮಹತ್ವ 

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರಪಂಚದಾದ್ಯಂತ ಸುಮಾರು 50 ಮಿಲಿಯನ್ ಜನರು ಈ ಕಾಯಿಲೆಯಿಂದ ಪೀಡಿತರಾಗಿದ್ದಾರೆ. ಇದು ನರವೈಜ್ಞಾನಿಕ ಕಾಯಿಲೆ ಆಗಿದ್ದು, ಮಾನಸಿಕ ಅಸ್ವಸ್ಥತೆ ಅಥವಾ ಸಾಂಕ್ರಾಮಿಕ ರೋಗವಲ್ಲ. ಈ ಕಾಯಿಲೆಯು ಹಠಾತ್‌ ಆಗಿ ಆಗುವ ಮೆದುಳಿನ ವಿದ್ಯುತ್ ಚಟುವಟಿಕೆ ವ್ಯತ್ಯಾಸದಿಂದ ಉಂಟಾಗುತ್ತದೆ. 

ಮೂರ್ಛೆ ರೋಗದ ಸಾಧ್ಯಿತೆ ಹೆಚ್ಚಿಸುವ ಕಾರಣಗಳು

– ಅನುವಂಶೀಯ ಕಾರಣಗಳು 

– ಮೆದುಳಿಗೆ ತೀವ್ರ ಪೆಟ್ಟು ಅಥವಾ ಗಾಯ 

– ಪಾರ್ಶ್ವವಾಯು ಅಥವಾ ಮೆದುಳುಗಡ್ಡೆ 

– ಮೆದುಳಿನಲ್ಲಿ ರಕ್ತಸ್ರಾವ ಅಥವಾ ರಕ್ತನಾಳಗಳ ತೊಂದರೆ 

– ಜನ್ಮದೋಷ ಮತ್ತು ಮೆದುಳಿನ ಅಭಿವೃದ್ಧಿಯ ತೊಂದರೆಗಳು 

ಮೂರ್ಛೆ ರೋಗದ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ 

– ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸುವುದು 

– ಸಾಕಷ್ಟು ನಿದ್ರೆ ಪಡೆಯುವುದು 

– ಸ್ಟ್ರೆಸ್ ನಿಯಂತ್ರಿಸುವುದು 

– ಆಹಾರದಲ್ಲಿ ಕೆಫೀನ್ ಮತ್ತು ಎನರ್ಜಿ ಡ್ರಿಂಕ್‌ಗಳ ಸೇವನೆ ತಪ್ಪಿಸುವುದು 

– ಶಿಸ್ತುಬದ್ಧ ಜೀವನಶೈಲಿ ಮತ್ತು ವ್ಯಾಯಾಮ ಮಾಡುವುದು 

ಮೂರ್ಛೆ ರೋಗವು ವೈದ್ಯಕೀಯವಾಗಿ ನಿರ್ವಹಿಸಬಹುದಾದ ಕಾಯಿಲೆಯಾಗಿದೆ. ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಅಗತ್ಯ. ಅಂತರಾಷ್ಟ್ರೀಯ ಅಪಸ್ಮಾರ ಜಾಗೃತಿ (International Epilepsy Awareness Day) ದಿನದಂತಹ ಕಾರ್ಯಕ್ರಮಗಳು ಈ ಉದ್ದೇಶಕ್ಕೆ ಮಹತ್ವದ ಪಾತ್ರ ವಹಿಸುತ್ತವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments