Defamation Case | ಮಾನ ನಷ್ಟ ಮೊಕದ್ದಮೆ ಬಗ್ಗೆ ಈ ಮಾಹಿತಿ ತಿಳಿದುಕೊಳ್ಳಿ ಪ್ರಯೋಜನಕ್ಕೆ ಬರುತ್ತೆ..!

ನವದೆಹಲಿ | ಇತ್ತೀಚೆಗಿನ ಹಲವು ಪ್ರಕರಣಗಳಲ್ಲಿ “ಮಾನ ನಷ್ಟ ಮೊಕದ್ದಮೆ” (Defamation Case) ಎಂಬ ಪದ ಹೆಚ್ಚಾಗಿ ಕೇಳಿಸುತ್ತಿದೆ. ಮನುಷ್ಯನಿಗೆ ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಅತ್ಯಂತ ಪ್ರಮುಖವಾಗಿದ್ದು, ಯಾರಾದರೂ ಅವಮಾನಕರ ಹೇಳಿಕೆಗಳಿಂದ ಅಥವಾ ಸುಳ್ಳು ಆರೋಪಗಳಿಂದ ಅವನ ಮಾನ ಹಾನಿಯಾದರೆ, ನ್ಯಾಯಾಲಯದಲ್ಲಿ ಮಾನ ನಷ್ಟದ ಮೊಕದ್ದಮೆ ಹೂಡಬಹುದಾಗಿದೆ.

ಮಾನ ನಷ್ಟ ಮೊಕದ್ದಮೆ (Defamation Case)  ಎಂದರೇನು..? ಯಾರು ಹಾಕಬಹದು..?

ಯಾರಾದರೂ ವ್ಯಕ್ತಿಯ ಬಗ್ಗೆ ಸುಳ್ಳು ಮಾಹಿತಿ, ತಪ್ಪಾದ ಆರೋಪ ಅಥವಾ ಅವಹೇಳನಕಾರಿ ಹೇಳಿಕೆ ನೀಡಿದರೆ, ಅಥವಾ ಸಾರ್ವಜನಿಕವಾಗಿ ಅವನ ಗೌರವವನ್ನು ಕೆಡಿಸುವಂತ ಕೆಲಸ ಮಾಡಿದರೆ, ಅದು ಮಾನ ನಷ್ಟಕ್ಕೆ ಕಾರಣವಾಗುತ್ತದೆ. ಹೀಗಾಗಿ, ಮಾನ ಹಾನಿಗೊಳಗಾದ ವ್ಯಕ್ತಿ ನ್ಯಾಯಾಲಯದಲ್ಲಿ ಮಾನ ನಷ್ಟದ ಮೊಕದ್ದಮೆ (Defamation Case)  ಹೂಡಿ ಪರಿಹಾರವನ್ನು ಬೇಡಬಹುದು.

ಇದನ್ನು ಓದಿ : Madenuru Manu Case | ಮಡೆನೂರು ಮನು ಮೊಬೈಲ್ ಫೋನ್ ನಲ್ಲಿ ಸಿಕ್ತು ಮಹತ್ವದ ದಾಖಲೆ

ಯಾರಿಗಾದರೂ ತಮ್ಮ ಮಾನ ಅಥವಾ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಿದೆಯೆಂದು ತೋಚಿದರೆ, ಅವರು ಮಾನ ನಷ್ಟ ಮೊಕದ್ದಮೆ ಹಾಕಬಹುದು. ಇದು ವ್ಯಕ್ತಿ, ಸಂಸ್ಥೆ, ರಾಜಕಾರಣಿ ಅಥವಾ ಕಲಾವಿದರಿಗೂ ಅನ್ವಯಿಸುತ್ತದೆ.

ಮಾನ ನಷ್ಟ ಮೊಕದ್ದಮೆ (Defamation Case) ಯಾವಾಗ ಹಾಕಬಹುದು?

  • ತಪ್ಪು ಸುದ್ದಿ ಅಥವಾ ನಿಂದನೆ ಲೇಖನ ಪ್ರಕಟಿಸಿದಾಗ
  • ಮಾಧ್ಯಮಗಳು ಸುಳ್ಳು ಸುದ್ದಿ ಹರಡಿದಾಗ
  • ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನ ಮಾಡಿದಾಗ
  • ಸಾರ್ವಜನಿಕ ವೇದಿಕೆಯಲ್ಲಿ ಅಪಮಾನಕಾರಿ ಹೇಳಿಕೆ ನೀಡಿದಾಗ

ಮಾನ ನಷ್ಟ ಮೊಕದ್ದಮೆಯಿಂದ (Defamation Case)  ಪ್ರಯೋಜನವೇನು?

  • ಮಾನ ಮರಳಿ ಪಡೆಯಲು ಅವಕಾಶ
  • ಆರ್ಥಿಕ ಪರಿಹಾರ (ಹಾನಿ ಪೂರೈಸಲು)
  • ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ
  • ಇತರರಿಗೆ ಎಚ್ಚರಿಕೆ

ಇದು ಭಾರತೀಯ ದಂಡ ಸಂಹಿತೆ (IPC) 499 ಮತ್ತು 500ರಡಿಯಲ್ಲಿ ಕ್ರಿಮಿನಲ್ ಮಾನ ನಷ್ಟವಾಗಬಹುದು ಮತ್ತು ಸಿವಿಲ್ ಮೊಕದ್ದಮೆಯಾಗಿ ಕೂಡ ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *