ಬೆಳಗಾವಿ | ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದು ನನ್ನ ಮುಖ್ಯ ಕರ್ತವ್ಯ. ಇದರಿಂದ ಹೊರತಾಗಿ ನಾನು ಬೇರೆ ಯಾವುದಕ್ಕೂ ಗಮನಹರಿಸುವುದಿಲ್ಲ. ನನ್ನ ಹೆಸರನ್ನು ಬೇರೆ ವಿಚಾರಗಳಿಗೆ ಬಳಸಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D K Shivakumar) ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರ ರಕ್ಷಣೆ
ಕಾರ್ಯಕರ್ತರ ರಕ್ಷಣೆ ನನ್ನ ಮೊದಲ ಕರ್ತವ್ಯ ನಾನು, ಪಕ್ಷ, ಹೈಕಮಾಂಡ್ ಇದ್ದೇವೆ. ಮಾಧ್ಯಮದವರು ಯಾರೋ ಸುಳ್ಳು ಹೇಳಿದ ವಿಚಾರಗಳಿಗೆ ಮಹತ್ವ ನೀಡಬೇಡಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯವಿಲ್ಲ
ಕಾಂಗ್ರೆಸ್ನಲ್ಲಿ ಬಂಡಾಯ ಅಥವಾ ಆಂತರಿಕ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ, ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ನನಗೆ ಯಾರೊಂದಿಗೂ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನಾನು ಎಲ್ಲರನ್ನು ಸಮಾನವಾಗಿ ನೋಡುತ್ತೇನೆ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರ ಸೇವೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳ ಸುಳ್ಳು ವರದಿ ವಿರುದ್ಧ ಆಕ್ರೋಶ
ಯಾರೋ ಸುಳ್ಳು ಮಾಹಿತಿ ನೀಡುತ್ತಾರೆ, ಮಾಧ್ಯಮಗಳು ಅದನ್ನು ನಂಬಿ ವರದಿ ಮಾಡಬೇಡಿ. ಈ ಮೂಲಕ ನಿಮ್ಮ ಘನತೆಯನ್ನು ಕಳೆದುಕೊಳ್ಳಬೇಡಿ ಎಂದರು. ನಾನು ಹಿರಿಯ ಶಾಸಕರ ಮನೆಗೆ ಭೇಟಿಗೆ ಹೋದಾಗ, ಕೆಲವು ಮಾಧ್ಯಮಗಳು ತಿರುಚಿದ ವರದಿ ಮಾಡಿದ್ದವು. ಇಂತಹ ಸುಳ್ಳು ಕಥೆಗಳನ್ನು ನಂಬಬೇಡಿ ಎಂದು ತಿಳಿಸಿದರು.
ಯತ್ನಾಳ್ ಹೇಳಿಕೆ ಬಗ್ಗೆ (D K Shivakumar) ತಿರುಗೇಟು
ಯತ್ನಾಳ್ ಅವರ ಕಾಂಗ್ರೆಸ್ನ 60 ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಇಂತಹ ರಾಜಕಾರಣದ ಪ್ರಶ್ನೆಗೆ ನಾನು ಉತ್ತರ ನೀಡುವುದಿಲ್ಲ. ಈ ಬಗೆಗಿನ ಸುಳ್ಳು ಹೇಳಿಕೆಗಳಿಗೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ
ನಾನು ಜೀವನಪೂರ್ಣವಾಗಿ ಪಕ್ಷಕ್ಕೆ ತ್ಯಾಗ ಮಾಡಿದ್ದೇನೆ. ಪಕ್ಷವೇ ನನಗೆ ಮುಖ್ಯ ನನಗೆ ಫಲದ ಆಸೆ ಇಲ್ಲ. ನನ್ನ ಕೆಲಸದಿಂದ ಜನರಿಗೆ ಒಳ್ಳೆಯದಾಗಿದೆಯೆಂದರೆ ಅದು ನನ್ನ ಗೆಲುವು ಎಂದು ಹೇಳಿದರು.
ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ರಕ್ಷಣೆಗೆ ಆದ್ಯತೆ
ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳೇ ನಮ್ಮ ಪಕ್ಷದ ಮೂಲ ಮಂತ್ರ.ಸಮಾಜದ ನ್ಯಾಯವನ್ನು ಮತ್ತು ಸಂವಿಧಾನವನ್ನು ಉಳಿಸುವುದು ನಮ್ಮ ಉದ್ದೇಶ ಎಂದು ಡಿಸಿಎಂ ಹೇಳಿದರು.