Wednesday, February 5, 2025
Homeಜಿಲ್ಲೆಚಿಕ್ಕಬಳ್ಳಾಪುರChikkaballapur News | ಶಿಕ್ಷಣ ಸಂಸ್ಥೆ ನಿರ್ಲಕ್ಷ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿನಿ

Chikkaballapur News | ಶಿಕ್ಷಣ ಸಂಸ್ಥೆ ನಿರ್ಲಕ್ಷ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿನಿ

ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರಕ್ಕೆ (Chikkaballapur) ಸೇರಿದ ಯುವತಿ ನೇಣಿಗೆ ಶರಣಾಗಿರುವ ಘಟನೆ ಶ್ರೀನಿವಾಸಪುರ ಹೊರಹೊಲಯದ ಶ್ರೀ ಭೈರವೇಶ್ವರ ವಿದ್ಯಾ ನಿಕೇತನ ಸಂಸ್ಥೆಯಲ್ಲಿ ನಡೆದಿದ್ದು, ಯುವತಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗರೇಕಾಲುವೆ ಗ್ರಾಮದ ಯುವತಿ ಶ್ರೀನಿವಾಸಪುರ ತಾಲ್ಲೂಕಿನ ಹೊರಹೊಲಯದ ಶ್ರೀ ಭೈರವೇಶ್ವರ ವಿದ್ಯಾ ನಿಕೇತನದಲ್ಲಿ ಪ್ರಥಮ ಪಿ ಯು ಸಿ ಓದುತ್ತಿದ್ದ ವಿದ್ಯಾರ್ಥಿ ಬಿಂಧುಶ್ರೀ (17), ನೇಣಿಗೆ ಶರಣಾಗಿದ್ದಾಳೆ.

ವಿದ್ಯಾರ್ಥಿನಿಗೆ ಈ ಹಿಂದೆ ಶಿಕ್ಷಕರು ಸುಖಾ ಸುಮನೆ ಹೊಡೆದಿದ್ದರು ಹಾಗೂ ವಿದ್ಯಾರ್ಥಿಗಳನ್ನು ನಿರ್ಲಕ್ಷವಾಗಿ ನೋಡುತ್ತಿದ್ದಾರೆ ಎಂಬ ಆರೋಪ ಪೋಷಕರಿಂದ ಕೇಳಿಬರುತ್ತಿದ್ದು, ಆರೋಗ್ಯ ಸಮಸ್ಯೆ ಇದ್ದ ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸದೆ ಆಕೆ ವಸತಿ ಶಾಲೆಯಿಂದ ಕಾಲೇಜಿಗೆ ಬಾರದೆ ಇದ್ದು ಆಕೆಯನ್ನು ವಿಚಾರಿಸುವಲ್ಲಿ ಆಡಳಿತ ಮಂಡಳಿ ನಿರ್ಲಕ್ಷ ತೋರಿದ್ದೆ ಆಕೆಯ ಸಾವಿಗೆ ಕಾರಣವೆಂದು ಪೋಷಕರು ಆಕ್ರೋಷಿಸಿದ್ದರು.

ಇನ್ನು ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ದೊಡ್ಡ ಸಂಸ್ಥೆಗಳಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಿದ್ರೆ ಉನ್ನತ ಮಟ್ಟಕ್ಕೆ ಸೇರುವ ಆಸೆ ಹೊಂದಿರುವ ಪೋಷಕರಿಗೆ ಇಂತಹ ನಿರ್ಲಕ್ಷಗಳಿಂದ ತಮ್ಮ ಮಕ್ಕಳನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿರುವ ನೋವಿನ ಸಂಗತಿ. ಇನ್ನು ಈ ಯುವತಿಯ ಸಾವಿಗೆ ನಿಖರ ಕಾರಣವೇನೆಂದು ತಿಳಿಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments