Skip to content
June 7, 2025
Newsletter
Random News
Karnataka 360

Karnataka 360

  • Home
  • Top NewsBreaking
  • Finance
  • Law
  • Web Stories

Trending News

Finance
Business Plan | ಉದ್ಯಮವನ್ನ ಒಬ್ಬರೇ ಮಾಡಿದ್ರೆ ಬೆಸ್ಟಾ..? ಪಾರ್ಟ್ನರ್ ಜೊತೆಯಲ್ಲಿ ಮಾಡಿದ್ರೆ ಬೆಸ್ಟಾ..?
Finance
Indian American Startup Culture | ಅಮೇರಿಕಾದ ಮತ್ತು ಭಾರತದ ಉದ್ಯಮಿಗಳ ನಡುವಿನ ಪ್ರಮುಖ ವ್ಯತ್ಯಾಸಗಳು..!
Finance
Social Media Earnings | ಸೋಶಿಯಲ್ ಮಿಡಿಯಾ ಬಳಕೆ ಮಾಡಿ ಹಣ ಸಂಪಾದಿಸಬಹುದು..?
Finance
India 4th Largest Economy | ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಪಟ್ಟಕ್ಕೇರಿದ ಭಾರತ
  • Home
  • Top News
  • Bangalore Metro | ಮೆಟ್ರೋದಲ್ಲಿ ಯುವತಿಯರ ವೀಡಿಯೋ ರೆಕಾರ್ಡ್ : “ಮೆಟ್ರೋ ಚಿಕ್ಸ್” ಅಕೌಂಟ್ ವಿರುದ್ಧ ಎಫ್‌ಐಆರ್
  • Top News

Bangalore Metro | ಮೆಟ್ರೋದಲ್ಲಿ ಯುವತಿಯರ ವೀಡಿಯೋ ರೆಕಾರ್ಡ್ : “ಮೆಟ್ರೋ ಚಿಕ್ಸ್” ಅಕೌಂಟ್ ವಿರುದ್ಧ ಎಫ್‌ಐಆರ್

Manju2 weeks ago2 weeks ago01 mins

ಬೆಂಗಳೂರು | ಬೆಂಗಳೂರು ಮೆಟ್ರೋ (Bangalore Metro) ರೈಲಿನಲ್ಲಿ ಯುವತಿಯರ ವೀಡಿಯೋಗಳನ್ನು ಅಕ್ರಮವಾಗಿ ರೆಕಾರ್ಡ್ ಮಾಡಿ, ಅದನ್ನು “ಮೆಟ್ರೋ ಚಿಕ್ಸ್” (Metro Chicks) ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ ಘಟನೆ ನಾಗರೀಕ ಸಮಾಜದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿ, ಅಪರಿಚಿತ ವ್ಯಕ್ತಿ ವಿರುದ್ಧ ಐಟಿ ಆಕ್ಟ್ ಸೆಕ್ಷನ್ 67 ಹಾಗೂ ಭಾರತೀಯ ನ್ಯುಸನ್ಸ್ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 78(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

“ಮೆಟ್ರೋ ಚಿಕ್ಸ್” (Metro Chicks) ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಿಂದ 13ಕ್ಕೂ ಹೆಚ್ಚು ವೀಡಿಯೋಗಳು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋಗಳಲ್ಲಿ ಮೆಟ್ರೋ (Bangalore Metro) ರೈಲಿನ ಒಳಗೆ ಹಾಗೂ ಮೆಟ್ರೋ ಸ್ಟೇಶನ್‌ಗಳಲ್ಲಿ ಯುವತಿಯರ ಆಕ್ಷೇಪಾರ್ಹ ದೃಶ್ಯಗಳನ್ನು ರೆಕಾರ್ಡ್ ಮಾಡಲಾಗಿದೆ. ಅಕೌಂಟ್‌ನಲ್ಲಿ 5,538 ಫಾಲೋವರ್ಸ್ ಇದ್ದು, ಇದು ಹೆಚ್ಚು ಜನರಿಗೆ ತಲುಪಿರುವುದು ಗಂಭೀರತೆಗೆ ಕಾರಣವಾಗಿದೆ. ವಿಡಿಯೋಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸುದ್ದಿ ವೈರಲ್ ಆಗುತ್ತಿದ್ದಂತೆ ಅಕೌಂಟ್‌ನಲ್ಲಿದ್ದ ಎಲ್ಲ ವೀಡಿಯೋಗಳನ್ನು ಈಗಾಗಲೇ ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೂ ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದು, ತನಿಖೆಗೆ ತಾಂತ್ರಿಕ ನೆರವು ಪಡೆದುಕೊಳ್ಳಲಾಗುತ್ತಿದೆ.

Tagged: Banashankari Police Station Bangalore Metro Instagram account Karnataka 360 Metro Chicks video of young women

Post navigation

Previous: Cauvery Aarti | ದೇವರು, ಧರ್ಮ ಬಿಜೆಪಿಯವರ ಆಸ್ತಿಯೇ..? : ಡಿ ಕೆ. ಶಿವಕುಮಾರ್ ವಾಗ್ದಾಳಿ
Next: Ranya Rao gold smuggling case | ಗೃಹ ಸಚಿವ ಡಾ ಜಿ. ಪರಮೇಶ್ವರ್ ಗೂ, ನಟಿ ರನ್ಯಾ ರಾವ್ ಗೂ ಇದ್ಯಾ ಸಂಬಂಧ..?  

Leave a Reply Cancel reply

Your email address will not be published. Required fields are marked *

Related News

Hemavathi Link Canal | ಸೆಕ್ಷನ್ 144 ಹಾಕಿದ್ರೆ ಕಚ್ಚೇನು ಕಟ್ಟಲ್ಲ ನಮ್ಮ ಹೋರಾಟ ಮಾಡಿಯೇ ಮಾಡುತ್ತೇವೆ

Manju1 week ago1 week ago 0

Chand Symbol Sheep | ಏಳು ತಿಂಗಳ ಈ ಕುರಿಗೆ 3.50 ಲಕ್ಷ ಅಂತೆ..!

Manju1 week ago1 week ago 0

Find Me On

Recent Posts

  • Hemavathi Link Canal | ಸೆಕ್ಷನ್ 144 ಹಾಕಿದ್ರೆ ಕಚ್ಚೇನು ಕಟ್ಟಲ್ಲ ನಮ್ಮ ಹೋರಾಟ ಮಾಡಿಯೇ ಮಾಡುತ್ತೇವೆ
  • Chand Symbol Sheep | ಏಳು ತಿಂಗಳ ಈ ಕುರಿಗೆ 3.50 ಲಕ್ಷ ಅಂತೆ..!
  • Illegal Tutorials | ಟುಟೋರಿಯಲ್ ನಡೆಸಿದ್ರೆ ಮುಲಾಜಿಲ್ಲದೆ ಕ್ರಮ
  • Hombale Films | ಬಹು ದೊಡ್ಡ ಘೋಷಣೆ ಮಾಡಿದ ಕನ್ನಡದ ಹೆಮ್ಮೆ ಹೊಂಬಾಳೆ ಫಿಲ್ಮ್ಸ್
  • Business Plan | ಉದ್ಯಮವನ್ನ ಒಬ್ಬರೇ ಮಾಡಿದ್ರೆ ಬೆಸ್ಟಾ..? ಪಾರ್ಟ್ನರ್ ಜೊತೆಯಲ್ಲಿ ಮಾಡಿದ್ರೆ ಬೆಸ್ಟಾ..?

Recent Comments

No comments to show.

Archives

  • May 2025

Categories

  • Finance
  • Law
  • Top News
  • Uncategorized
Karnatak 360 - All rights reserved by Karnataka 360 News Powered By BlazeThemes.
  • Privacy Policy
  • Disclaimer
  • About us
  • Contact us
Go to mobile version