ತುಮಕೂರು | ಅಖಿಲ ಕರ್ನಾಟಕ ಅಗ್ನಿವಂಶ ಕ್ಷತ್ರಿಯ (Agnivamsha Kshatriya) ತಿಗಳ ನೌಕರರ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ನಡೆಸಲು ಸಂಘದ ಸದಸ್ಯರು ನಿರ್ಧರಿಸಿದ್ದು, ಇದೀಗ ದಿನಾಂಕವನ್ನು ಕೂಡ ನಿಗದಿ ಮಾಡಲಾಗಿದೆ.
ತುಮಕೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವ ಅಗ್ನಿವಂಶ ಕ್ಷತ್ರಿಯ (ತಿಗಳ) ಸಮುದಾಯಕ್ಕೆ ಸೇರಿದ ನೌಕರರು ಸಂಘವನ್ನು ಸ್ಥಾಪನೆ ಮಾಡಿ ಇದೀಗ ಪ್ರತಿ ವರ್ಷವೂ ಕೂಡ ಸರ್ವ ಸದಸ್ಯರ ಸಭೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದೇ ರೀತಿಯಾಗಿ 2024ರ ಡಿಸೆಂಬರ್ 29 ಭಾನುವಾರ ಬೆಳಗ್ಗೆ 10.30 ಕ್ಕೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ತುಮಕೂರು ನಗರದ ಬಿಹೆಚ್ ರಸ್ತೆಯಲ್ಲಿರುವ ತಿಗಳರ ಸಾರ್ವಜನಿಕರ ವಿದ್ಯಾರ್ಥಿ ನಿಲಯ ವಿದ್ಯಾ ಸಿರಿ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಅಧ್ಯಕ್ಷತೆಯನ್ನು ಕರ್ನಾಟಕ ಅಗ್ನಿವಂಶ ಕ್ಷತ್ರಿಯ ನೌಕರರ ಸಂಘದ ಅಧ್ಯಕ್ಷರು ಹಾಗೂ ಡಿ ಎಸ್ ಇ ಆರ್ ಟಿ ಜಂಟಿ ನಿರ್ದೇಶಕರಾದ ಸಿ ನಂಜಯ್ಯ ಅವರು ವಹಿಸಲಿದ್ದಾರೆ.
ಇನ್ನು ತಿಗಳ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರಾದ ಗಂಗರಾಜು ಅವರು ವಿಶೇಷ ಆಹ್ವಾನಿತರಾಗಿದ್ದು, ರಾಜ್ಯ ಸಹಕಾರ ರತ್ನ ಪುರಸ್ಕೃತರಾದ ಶ್ರೀಮತಿ ಶಾರದಮ್ಮ ಮರಿಹೊನ್ನಯ್ಯನವರು, ತುಮಕೂರು ಗ್ರಾಮಾಂತರದ ನರಸಾಪುರದ ಜಿಕೆವಿಕೆ ಕೃಷಿ ಪ್ರಶಸ್ತಿ ಪುರಸ್ಕೃತರಾದ ಬಿ ಜಯಶ್ರೀ ಕಿರಣ್, ದ್ವಿತೀಯ ದರ್ಜೆ ಸಹಾಯಕರದ ಲಕ್ಷ್ಮಿಕಾಂತ್ ಸಾಧಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರತಿಭಾ ಪುರಸ್ಕಾರಕ್ಕೆ ಸಹಕಾರ ನೀಡಿರುವವರು ಕಲ್ಲೂರಿನ ವಕೀಲರಾದ ನಾಗೇಶ್, ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತರಾಯಪ್ಪ, ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಸಂಧ್ಯಾ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಗುಬ್ಬಿ ತಾಲೂಕು ಸಂಘಟನಾ ಕಾರ್ಯದರ್ಶಿ ಮಲ್ಲೇಶ್, ಸಿ ಆರ್ ಪಿ ಶ್ರೀನಿವಾಸ್, ಕಾರುಣ್ಯ ಪ್ರಥಮ ದರ್ಜೆ ಕಾಲೇಜು ಸಂಸ್ಥಾಪಕ ಪ್ರಾಂಶುಪಾಲರಾದ ಪಾಂಡುರಂಗ ಅವರು ನೀಡಿದ್ದಾರೆ.