ಮನರಂಜನೆ | ಪ್ರೇಮಿಗಳಿಗೆ ಫೆಬ್ರವರಿ ತಿಂಗಳು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ನಟ ದರ್ಶನ್ (Actor Darshan) ಅಭಿಮಾನಿಗಳಿಗೆ. ಯಾಕಂದ್ರೆ ಇದೇ ಫೆಬ್ರವರಿ 16 ರಂದು ನಟ ದರ್ಶನ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆದರೆ ಈ ಬಾರಿ ಡಿ ಬಾಸ್ ಹುಟ್ಟುಹಬ್ಬವನ್ನು ಆಚರಣೆ ಮಾಡದಂತೆ ನನನ್ನು ಭೇಟಿ ಮಾಡಲು ಬರದಂತೆ ತಮ್ಮ ಸೆಲೆಬ್ರಿಟಿಗಳಿಗೆ ಮನವಿ ಮಾಡಿದ್ದಾರೆ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ (Actor Darshan) ನಟ ದರ್ಶನ್.
ಅಭಿಮಾನಿಗಳಿಗೆ ದರ್ಶನ್ (Actor Darshan) ಮೂಲಕ ದರ್ಶನ್ ಸಂದೇಶ
ಈ ಕುರಿತು ವಿಡಿಯೋ ಮೂಲಕ ಮನವಿ ಮಾಡಿರುವ ದರ್ಶನ್, ಅಭಿಮಾನಿಗಳ ಕಾಳಜಿಗೆ ಧನ್ಯವಾದ ತಿಳಿಸಿದ್ದಾರೆ. ನನಗೆ ನಿಮ್ಮನ್ನ ಭೇಟಿ ಮಾಡಿ ಧನ್ಯವಾದ ಹೇಳಬೇಕು ಎಂಬ ಇಚ್ಛೆ ಇತ್ತು, ಆದರೆ ಈ ಬಾರಿ ಅದು ಸಾಧ್ಯವಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ, ತುಂಬಾ ಹೊತ್ತು ನಿಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ನಾನು ಶೀಘ್ರವೇ ಗುಣಮುಖನಾಗಿ ನಿಮ್ಮನ್ನು ಖಂಡಿತಾ ಭೇಟಿಯಾಗುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ (Actor Darshan) ನಟ ದರ್ಶನ್.
ದರ್ಶನ್ (Actor Darshan) ಅವರ ಆರೋಗ್ಯ ಸಮಸ್ಯೆ ಮತ್ತು ಚಿತ್ರರಂಗದ ಹೊಣೆಗಾರಿಕೆ
ನನಗೆ ಬೆನ್ನು ನೋವು ಇದೆ, ಅದಕ್ಕಾಗಿ ಶಸ್ತ್ರಚಿಕಿತ್ಸೆ ಅಗತ್ಯ ಹೀಗಾಗಿ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ, ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ಇದೆ. ಸೂರಪ್ಪ ಬಾಬು ಅವರ ಸಿನಿಮಾ ಸದ್ಯದ ಮಟ್ಟಿಗೆ ಮಾಡಲು ಸಾದ್ಯವಿಲ್ಲ ಹೀಗಾಗಿ ಅವರ ಹಣವನ್ನು ಹಿಂದಿರುಗಿಸಿದ್ದೇನೆ ಮುಂದಿನ ದಿನಗಳಲ್ಲಿ ಅವರಿಗೂ ಸಿನಿಮಾ ಮಾಡುತ್ತೇನೆ. ಪ್ರೇಮ್ ಮತ್ತು ರಕ್ಷಿತಾ ನನಗೆ ತುಂಬಾ ಆತ್ಮೀಯರು ಅವರ ಜೊತೆಯು ಸಿನಿಮಾ ಮಾಡುತ್ತೇನೆ ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಯಾವುದೇ ಪರ ಭಾಷೆ ಸಿನಿಮಾಗೆ ಹೋಗಿ ಅಭಿನಯ ಮಾಡುವ ಆಸೆ ಇಲ್ಲ ಮಾಡುವುದು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನು ಓದಿ : Emergency Movie | ಕಂಗನಾ ರಣಾವತ್ ನಿರ್ದೇಶನದ ‘ಎಮರ್ಜೆನ್ಸಿ’ ಚಿತ್ರಕ್ಕೆ ಲಂಡನ್ನಲ್ಲಿಯೂ ವಿರೋಧ..!
ಅಭಿಮಾನಿಗಳು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಕೊಡಬೇಡಿ
ನನ್ನ ಸೆಲೆಬ್ರಿಟಿಗಳು ಯಾರದ್ದೂ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ನಾನು ಮತ್ತೆ ಚೇತರಿಸಿಕೊಂಡು, ಖಂಡಿತವಾಗಿಯೂ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡ ಎಂದು ಅಭಿಮಾನಿಗಳಿಗೆ ಮನವಿ
ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿರುವ ನಟ ದರ್ಶನ್ (Actor Darshan), ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರೋ, ನಾನು ಸಹ ಅದೇ ರೀತಿ ನಿಮ್ಮನ್ನು ಪ್ರೀತಿಸುತ್ತೇನೆ ನಿಮ್ಮ ಪ್ರೀತಿ, ಒಲುಮೆಗೆ ಧನ್ಯವಾದ ಎಂದಿದ್ದಾರೆ.