ತುಮಕೂರು | ಇಂದು ಇಡೀ ರಾಜ್ಯಾದ್ಯಂತ ದೊಡ್ಮನೆಯ ಕುಡಿ ಯುವರಾಜ್ ಕುಮಾರ್ (Yuvraj Kumar) ಅಭಿನಯದ ಯುವ ಸಿನಿಮಾ (Yuva Movie) ಬಿಡುಗೆಯಾಗಿದ್ದು ಅದ್ದೂರಿಯಾಗಿ ಪ್ರದರ್ಶನ ಕಾಣುತ್ತದೆ. ಮನೆ ಮಂದಿ ಎಲ್ಲಾ ಕುಳಿತು ನೋಡಬಹುದಾದ ಸಿನಿಮಾವಾಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಆ ಭಾಗ್ಯ ತುಮಕೂರು (Tumkur) ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಅಭಿಮಾನಿಗಳಿಗೆ ಇಲ್ಲ.
ಹೌದು… ಎಲ್ಲಾ ಅಂದುಕೊಂಡಂತೆ ಆಗಿದ್ದರೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಶ್ರೀನಿವಾಸ ಚಿತ್ರಮಂದಿರದಲ್ಲಿ ಯುವ ಸಿನಿಮಾ ಬಿಡುಗಡೆಯಾಗಬೇಕೆತ್ತು. ಚಿತ್ರ ಪ್ರೇಮಿಗಳಿಂದ ತುಂಬಿ ತುಳುಕಬೇಕಿತ್ತು. ಆದರೆ ಗೇಟಿಗೆ ಬೇಗ ಹಾಕಿ ಚಿತ್ರವನ್ನು ಪ್ರದರ್ಶನ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂದು ಹೇಳುವುದಕ್ಕೂ ಚಿತ್ರಮಂದಿರದ ಬಳಿ ಯಾವ ಸಿಬ್ಬಂದಿಯೂ ಕೂಡ ಇಲ್ಲ.
ಚಿಕ್ಕನಾಯಕನಹಳ್ಳಿ ಪಟ್ಟಣದ ತುಂಬೆಲ್ಲ ಮಾರ್ಚ್ 29ರಂದು ಶ್ರೀನಿವಾಸ ಚಿತ್ರಮಂದಿರದಲ್ಲಿ ಯುವ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಪೋಸ್ಟರ್ ಗಳನ್ನೂ ಅಂಟಿಸಲಾಗಿತ್ತು. ಈ ಪೋಸ್ಟರ್ಗಳನ್ನು ನೋಡಿ ಯುವ ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ದೊಡ್ಡ ಶಾಕ್ ಎದುರಾಗಿದೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ದೂರದ ಭಾಗಗಳಿಂದ ಹಲವಾರು ಮಂದಿ ಅಭಿಮಾನಿಗಳು ಥಿಯೇಟರ್ ಬಳಿ ಬಂದಿದ್ದಾರೆ. ಆದರೆ ಥಿಯೇಟರ್ ಬಾಗಿಲು ಹಾಕಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಕನಿಷ್ಠ ಪಕ್ಷ ಏನಾಗಿದೆ ಎಂದು ಹೇಳಲು ಚಿತ್ರಮಂದಿರದ ಯಾವ ಸಿಬ್ಬಂದಿಯೋ ಅಲ್ಲಿ ಇಲ್ಲ. ಇದು ದೊಡ್ಮನೆಗೆ ಮಾಡಿದ ಅಪಮಾನ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.