Thursday, December 12, 2024
Homeಜಿಲ್ಲೆತುಮಕೂರುYashwant Guruji's Prophecy | ಮೋದಿ ಮತ್ತೆ ಪ್ರಧಾನಿ ಆಗಲ್ಲ, ಸ್ತ್ರೀ ದೇಶವನ್ನು ಆಳುತ್ತಾರೆ :...

Yashwant Guruji’s Prophecy | ಮೋದಿ ಮತ್ತೆ ಪ್ರಧಾನಿ ಆಗಲ್ಲ, ಸ್ತ್ರೀ ದೇಶವನ್ನು ಆಳುತ್ತಾರೆ : ಸ್ಪೋಟಕ ಭವಿಷ್ಯ ನುಡಿದ ಯಶವಂತ ಗುರೂಜಿ..!

ತುಮಕೂರು | ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ (Lok Sabha Elections) ನಡೆಯಲಿದ್ದು ಎಲ್ಲಾ ರಾಜಕೀಯ ಪಕ್ಷಗಳು (Political parties) ಸಿದ್ಧತೆಯನ್ನು ನಡೆಸಿವೆ. ಈ ವೇಳೆ ಗುರೂಜಿಯೊಬ್ಬರು ನೀಡಿರುವಂತಹ ಭವಿಷ್ಯವಾಣಿ (Prophecy) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಎರಡು ಬಾರಿ ಪ್ರಧಾನಿಯಾಗಿ 10 ವರ್ಷಗಳ ಕಾಲ ದೇಶವನ್ನು ಆಳಿದ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಗುರೂಜಿಯವರ ಭವಿಷ್ಯವಾಣಿಯಂತೆ ಓರ್ವ ಸ್ತ್ರೀ ಅಧಿಕಾರವನ್ನು ಹಿಡಿಯಲಿದ್ದು ನಂತರ ಉದಾರ ಮನಸ್ಸಿನಿಂದ ಪುರುಷನಿಗೆ ಅಧಿಕಾರವನ್ನು ಹಸ್ತಾಂತರ ಮಾಡುತ್ತಾರೆ ಎಂದು ಹೇಳಿದ್ದಾರೆ.

Agni Bannirayaswamy Jayanti | ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಅದ್ಧೂರಿ ಆಚರಣೆಗೆ ಕರೆ ನೀಡಿದ ಅಗ್ನಿವಂಶ ಕ್ಷತ್ರಿಯ ಸಮಾಜದ ಮುಖಂಡರು..! – karnataka360.in

ಹೌದು,,, ಈ ಬಾರಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಯಶವಂತ ಗುರೂಜಿ (Yashwant Guruji) ಭವಿಷ್ಯವನ್ನು ನುಡಿದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸೀಟುಗಳನ್ನು ಪಡೆಯಲಿದೆ ಎಂದು ನಿಖರ ಭವಿಷ್ಯವನ್ನು ನುಡಿದಿದ್ದರು.

ಮಹಾಶಿವರಾತ್ರಿಗೂ ಮುನ್ನ ಚುನಾವಣೆ ನಡೆದಿದ್ದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಯೋಗವಿತ್ತು. ಆದರೆ ಈಗ ಮೋದಿ ಅವರಿಗೆ ಆ ಯೋಗ ಇಲ್ಲ ಅವರಿಗೆ ಅನಾರೋಗ್ಯ ಕಾಡಬಹುದು ಎಂದು ನೊಣವಿನಕೆರೆಯ ಯಶವಂತ ಗುರೂಜಿ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.

ಇನ್ನು ಈ ಕಾಲಜ್ಞಾನದ ಪ್ರಕಾರ ಪ್ರಧಾನಿ ಯೋಗ ಹೊಂದಿರುವುದು ಪ್ರಿಯಾಂಕ ಗಾಂಧಿ. ಹೀಗಾಗಿ ಅವರು ಸಹೋದರ ರಾಹುಲ್ ಗಾಂಧಿ ಅವರಿಗೆ ತಮ್ಮ ಸ್ಥಾನವನ್ನು ಬಿಟ್ಟು ಕೊಡುವ ಸಾಧ್ಯತೆ ಇದೆ. ಪ್ರಿಯಾಂಕ ಗಾಂಧಿಗೆ ಹಂಸಕ, ಚಂದ್ರ ಮಂಗಳ, ಬುಧಾದಿತ್ಯ ಯೋಗ ಶುರುವಾಗಿದೆ. ಈ ಯೋಗದಿಂದಲೇ ಪ್ರಧಾನಿ ಪಟ್ಟ ಸಿಗುವ ಅವಕಾಶ ಒದಗಿ ಬರಲಿದೆ ಎಂದು ಕಾಲಜ್ಞಾನಿ ಯಶವಂತ ಗುರೂಜಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments