ಸಿನಿಮಾ | ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಯಶಸ್ಸು ಕಂಡ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ನಂತರ, ಯಶ್ ಈಗ ಗೀತು ಮೋಹನ್ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ (Yash Toxic) ಚಿತ್ರದೊಂದಿಗೆ ಮತ್ತೊಮ್ಮೆ ದೊಡ್ಡ ಮಟ್ಟದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಅಧಿಕೃತ ಘೋಷಣೆ ಇತ್ತೀಚೆಗೆ ನಡೆದಿದ್ದು, ಯಶ್ ಅವರ ಜನ್ಮದಿನದಂದು ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ.
(Yash Toxic) ಬಜೆಟ್ ಶೇಕಡಾ 40ರಷ್ಟು ಏರಿಕೆ
‘ಟಾಕ್ಸಿಕ್’ (Yash Toxic) ಚಿತ್ರದ ಒಟ್ಟು ಬಜೆಟ್ ಶೇಕಡಾ 40ರಷ್ಟು ಹೆಚ್ಚಳ ಕಂಡಿದೆ. ಈ ನಿರ್ಧಾರಕ್ಕೆ ಯಶ್ ಹಾಗೂ ಗೀತು ಮೋಹನ್ದಾಸ್ ಅವರ ಹೊಸ ತಂತ್ರ ಕಾರಣವಾಗಿದೆ. ಮೊದಲಿಗೆ ಈ ಚಿತ್ರವನ್ನು ಕನ್ನಡ ಹಾಗೂ ಇತರ ಭಾರತೀಯ ಭಾಷೆಗಳಿಗೆ ಡಬ್ ಮಾಡುವ ಉದ್ದೇಶವಿತ್ತು. ಆದರೆ ಈಗ, ಇಂಗ್ಲಿಷ್ನಲ್ಲಿಯೂ ಚಿತ್ರೀಕರಣ ಮಾಡಲಾಗುತ್ತಿದೆ. ಇದರಿಂದಾಗಿ ನಿರ್ಮಾಣ ವೆಚ್ಚ ಹೆಚ್ಚಾಗಿದೆ.
ಇದನ್ನು ಓದಿ : World Pulses Day 2025 | ವಿಶ್ವ ದ್ವಿದಳ ಧಾನ್ಯ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ನಿಮಗೆ ಗೊತ್ತಾ..?
(Yash Toxic) ಪ್ಯಾನ್ ಇಂಡಿಯಾ ಚಿತ್ರವಲ್ಲ ಪ್ಯಾನ್ ವರ್ಲ್ಡ್ ಚಿತ್ರ
ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಿಂದ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಹೆಜ್ಜೆ ಹಾಕಿದ್ದು, ಅದಕ್ಕಾಗಿ ಚಿತ್ರತಂಡ ವಿಭಿನ್ನ ಪ್ರಯತ್ನ ಮಾಡುತ್ತಿದೆ. ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ಕೂಡ ನಟಿಯರು ಡೈಲಾಗ್ ಹೇಳುತ್ತಿದ್ದಾರೆ. ದಬ್ಬಿಂಗ್ ಮಾಡುವ ಬದಲು, ನೇರವಾಗಿ ಎರಡು ಭಾಷೆಗಳಲ್ಲಿ ಚಿತ್ರೀಕರಣ ನಡೆಯುತ್ತಿರುವುದರಿಂದ ಬಜೆಟ್ ಹೆಚ್ಚಳ ಕಂಡಿದೆ.
ಪ್ರಮುಖ ತಾರಾಗಣ ಮತ್ತು ಚಿತ್ರೀಕರಣ
ಈ ಚಿತ್ರದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡ ಈಗಾಗಲೇ ಬೆಂಗಳೂರು, ಗೋವಾ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದು, ಇನ್ನೂ ಕೆಲವು ಕಡೆ ಶೂಟಿಂಗ್ ನಡೆಯಲಿದೆ.

ಹಾಲಿವುಡ್ ನಿರ್ಮಾಣ ಸಂಸ್ಥೆಗಳ ಜತೆ ಮಾತುಕತೆ
ಯಶ್ ಮತ್ತು ಅವರ ತಂಡ ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ಹಾಲಿವುಡ್ ನಿರ್ಮಾಣ ಸಂಸ್ಥೆಗಳ ಜತೆ ಚರ್ಚೆ ನಡೆಸುತ್ತಿದ್ದಾರೆ. ಹೈ ಬಜೆಟ್, ಪ್ಯಾನ್ ವರ್ಲ್ಡ್ ರಿಲೀಸ್ ಮತ್ತು ಹಾಲಿವುಡ್ ಸಹಯೋಗದಿಂದ, ‘ಟಾಕ್ಸಿಕ್’ (Yash Toxic) ಚಿತ್ರವು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಮಾರ್ಪಟ್ಟಿದೆ.