ತಿಪಟೂರು | ನಗರದ ಹೊರವಲಯದಲ್ಲಿರುವ ಅಣ್ಣಾಪುರ ಗೇಟಿನಿಂದ ಭೈರನಾಯಕನಹಳ್ಳಿ ಕಣಿವೆಗೆ ಹೀಗುವ ದಾರಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.
ಮೃತ ದುರ್ದೈವಿಯನ್ನು ತುಮಕೂರು ಮೂಲದ ಕುರುಬ ಜನಾಂಗಕ್ಕೆ ಸೇರಿದ ಉಮೇಶ್S/O ಶಂಕರ್ ಲಿಂಗಪ್ಪ ಎಂದು ಗುರುತಿಸಲಾಗಿದೆ.
ವಾಸನೆ ಬಂದ ನಂತರ ಘಟನೆ ಬಯಲಾದ, ಬೇರೆ ಕಡೆ ಕೊಲೆ ಮಾಡಿ ಇಲ್ಲಿಗೆ ಶವ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸ್ ತನಿಖೆಯ ನಂತರ ಸತ್ಯಾಂಶ ಹೊರಬೀಳಬೇಕಾಗಿದೆ.