Thursday, December 12, 2024
Homeಜಿಲ್ಲೆಬೆಂಗಳೂರು ನಗರಅವರನ್ನು ನಾವು ಗುರುಗಳು ಅಂತ ಕರೆಯುತ್ತಿದ್ದೇವು  - ಬಸವರಾಜ ಬೊಮ್ಮಾಯಿ

ಅವರನ್ನು ನಾವು ಗುರುಗಳು ಅಂತ ಕರೆಯುತ್ತಿದ್ದೇವು  – ಬಸವರಾಜ ಬೊಮ್ಮಾಯಿ

ಬೆಂಗಳೂರು | ಭಾನುವಾರ ನಿಧನ ಹೊಂದಿರುವ ಮಾಜಿ ಶಾಸಕ ಸಿ.ಎಂ. ನಿಂಬಣ್ಣನವರ ಅವರು ಸೌಮ್ಯ ಸ್ವಭಾವದವರಾಗಿದ್ದರು. ಅವರನ್ನು ನಾವು ಗುರುಗಳು ಅಂತ ಕರೆಯುತ್ತಿದ್ದೇವು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 ಮಾಜಿ ಶಾಸಕ ಸಿ ಎಂ ನಿಂಬಣ್ಣನವರ ಪರವಾಗಿ ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಂಬಣ್ಣನವರ ಅವರು ಹಲವಾರು ವರ್ಷ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಕಲಘಟಗಿ ಕ್ಷೇತ್ರದಲ್ಲಿ ರೈತ ಸಂಘ ಸೇರಿದಂತೆ ಅನೇಕರನ್ನು ಸೇರಿಸಿಕೊಂಡು ಹೋರಾಟ ಮಾಡಿದ್ದರು.

2013ರಲ್ಲಿ ವಿಧಾನಸಭಾ  ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ, ಅವಕಾಶ ಸಿಗಲಿಲ್ಲ. 2018 ರಲ್ಲಿ  ಜನರ ಒತ್ತಡದಿಂದ ಸ್ಪರ್ಧೆ ಮಾಡಿದ್ದರು‌ ಜನರೇ ಅವರ ಚುನಾವಣೆಯನ್ನು ಮಾಡಿದ್ದರು ಎಂದರು.

ಅವರು ಸೌಮ್ಯ ಸ್ವಭಾವದವರು, ಅವರು ಸದನಕ್ಕೆ ತಪ್ಪದೆ ಹಾಜರಾಗುತ್ತಿದ್ದರು ಅಲ್ಲದೇ ಮೊದಲೇ ಬಂದು ಸದನಕ್ಕೆ ಬಂದು ಕೂಡುತ್ತಿದ್ದರು. ಅವರು ಶಾಸಕರಾಗಲಿ ಬಿಡಲಿ ನಮ್ಮ ಜೊತೆ ಇರಬೇಕಿತ್ತು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments