ಬೆಳಗಾವಿ | ಸಮಾಜದಿಂದ ಹೊರ ಹಾಕಿದ್ದೀವಿ ಎಂಬ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ವಿಜಯಾನಂದ ಕಾಶಪ್ಪನವರ್ (Vijayananda Kashpanavar) ಇವರನ್ನ ತಂದು ಪೀಠಕ್ಕೆ ಕುರಿಸಿದ್ದು ನಾವು. ಸ್ವಾಮೀಜಿ ಗೆ ಬಿಜೆಪಿ ಪಕ್ಷದ ಶೂ ಹಾಕಿದಂತೆ ಕಾಣ್ತಾಯಿದೆ. ನನ್ನ ಸಮಾಜದ ಅಮಾಯಾಕರು, ದುಡಿದು ತಿನ್ನುವವರು ಮೊನ್ನೆ ಕಲ್ಲು ತುರಿದ್ದು ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಎಂದು ಹೇಳಿದ್ದಾರೆ.
ನಿಮ್ಮ ಹಾಗೆ ಹೆಡಿತನ ತೊರಿಸುವಂತರಲ್ಲಾ. ನಿಮಗೆ ತಾಕತ್ ಇದ್ರೆ ಬನ್ನಿ ನನ್ನ ಜೊತೆ. ಸ್ವಾಮೀಜಿ ಆಗಿ ಯಾವ ರೀತಿ ಮಾತಾನಾಬೇಕು ಎಂದು ತಿಳಿದುಕೊಳ್ಳಬೇಕು. ಸ್ವಾಮೀಜಿ ಅಂತಾ ನಾನು ಮರ್ಯಾದೆ ಕೊಡ್ತಾಯಿದ್ದೆ. ನಾನು ಹಿಂದೆ ಪಾದಯಾತ್ರೆ ಮಾಡ್ದೆ ಎಂದು ಶ್ರೀಗಳ ವಿರುದ್ಧ ಕಿಡಿ ಕಾರಿದ್ದಾರೆ.
ಮೀಸಲಾತಿ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿರುವಂತಹದನ್ನು ಇರ್ತ್ಯರ್ಥ ಮಾಡಿಕೊಳ್ಳಬೇಕು. ಇದು ಬಿಜೆಪಿ ಪ್ರಾಯೋಜಿತ ಹೋರಾಟ. ಒಂದು ಪಕ್ಷದ ಅಡಿಯಲ್ಲಿ ಸ್ವಾಮೀಜಿ ಹೋರಾಟ ಮಾಡೋದಕ್ಕೆ ಏನ್ ರೈಟ್ಸ್ ಇದೆ. ಯಾರ ಪೀಠ ಉಳಿಸಬೇಕು ಎಂಬುವುದನ್ನ ನಾವು ಯೋಚಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ಪಕ್ಷದ ಪ್ರಾಯೋಜಿತ ಹಾಗೂ ಒಂದು ವ್ಯಕ್ತಿಯನ್ನ ಉಳಿಸುವ ಹೋರಾಟ ಆಗಿದೆ. ನಮಗೆ ನಮ್ಮ ಸಮಾಜಕ್ಕೆ ಹೇಗೆ ಮೀಸಲಾತಿ ಪಡೆದುಕೊಳ್ಳಬೇಕು ಎಂದು ಗೊತ್ತು. ನಾವೆಲ್ಲ ಅದನ್ನ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ಸ್ಪೀಕರ್ ಕಚೇರಿ ಮುತ್ತಿಗೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮಾತಾಡಿದಕ್ಕೆ ಸ್ಪೀಕರ್ ಕಚೇರಿಗೆ ಬಿಜೆಪಿ ನಾಯಕರು ಹೋಗಿದ್ದಾರೆ. ಅವರ ಮೇಲೆ ಹಲ್ಲೆ ಮಾಡುವುದು ಎಷ್ಟು ಸರಿ..? ಪ್ರಜಾಪ್ರಭುತ್ವ ವ್ಯವಸ್ಥೆಯ ನಡೆನಾ ಇದು ..? ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರಶ್ನೆ ಮಾಡಿದ್ದಾರೆ.