ತುಮಕೂರು | ನಿರೀಕ್ಷೆಯಂತೆ ಹಠಕ್ಕೆ ಬಿದ್ದು ಮಾಜಿ ಸಚಿವ ವಿ. ಸೋಮಣ್ಣನವರಿಗೆ (V. Somanna) ಸಂಸದ ಜಿ ಎಸ್ ಬಸವರಾಜು (GS Basavaraju) ಬಿಜೆಪಿ ಟಿಕೆಟ್ (BJP ticket) ಕೊಡಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ತುಮಕೂರು (Tumkur) ಲೋಕಸಭಾ ಸಂಸದ ಜಿ ಎಸ್ ಬಸವರಾಜು.
ಬಿಜೆಪಿ ಏಜೆನ್ಸಿಯ ಮೂಲಕ ಸರ್ವೆ ಮಾಡಿಸಿದೆ ಆ ಸರ್ವೇ ಆಧರಿಸಿ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಸೋಮಣ್ಣನವರಿಗೆ ಟಿಕೆಟ್ ಸಿಕ್ಕಿರುವುದು ನನ್ನಿಂದಲೇ ಅನ್ನೋದು ಮಹಾ ಮೂರ್ಖತನ ಎಂದು ಬಸವರಾಜು ಹೇಳಿದ್ದಾರೆ.
ಸೋಮಣ್ಣನವರಿಗೆ ತುಮಕೂರು ಜಿಲ್ಲೆಯಲ್ಲಿ ಅವರದೇ ಆದಂತಹ ರಿಪೋರ್ಟ್ ಇದೆ. ತುಮಕೂರು ಜಿಲ್ಲೆಗೂ ಅವರಿಗೂ ಸುಮಾರು 40 ವರ್ಷಗಳ ಒಡಂಬಡಿಕೆ ಇದೆ. ಮೂರು ಬಾರಿ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಸಿದ್ದಗಂಗಾ ಮಠಕ್ಕೆ ಅವರದೇ ಆದಂತಹ ಕೊಡುಗೆ ಇದೆ. ಎಂದು ತಿಳಿಸಿದ್ದಾರೆ.
ವಿ. ಸೋಮಣ್ಣನವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಅವರ ನಡೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ಮಾಧುಸ್ವಾಮಿಯವರಿಗೆ ಯಾವ ರೀತಿ ಮಾತು ಕೊಟ್ಟಿದ್ರು ಅನ್ನೋದು ನನಗೆ ಗೊತ್ತಿಲ್ಲ ಸರ್ವೆಯ ಮೂಲಕ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಬಾರಿ ದೇವೇಗೌಡರು ಸ್ಪರ್ಧೆ ಅಂತ ಹೇಳಿದಾಗ ನನ್ನ ತಲೆ ಕೆಟ್ಟು ಹೋಗಿತ್ತು, ತುಮಕೂರಿಗೆ ಹೇಮಾವತಿ ನೀರಿನಲ್ಲಿ ಅನ್ಯಾಯ ಆದ ವಿಚಾರದಲ್ಲಿ ದೇವೇಗೌಡರು ಸೋಲು ಅನುಭವಿಸಿದ್ದರು. ಕಳೆದ ಬಾರಿ ಮಧುಗಿರಿ ಶಾಸಕ ಕೆ ಎನ್ ರಾಜಣ್ಣ ನನ್ನ ಜೊತೆ ಈ ಚೆನ್ನಾಗಿದ್ದರೂ ಅವರು ಈಗ ಬೇರೆ ಪಕ್ಷದಲ್ಲಿದ್ದಾರೆ. ಎಲ್ಲಾ ಟೈಮಿನಲ್ಲಿ ಅವರು ಹಾಗೆ ಇರುತ್ತಾರೆ ಅಂತ ಹೇಳುವುದಕ್ಕಾಗುವುದಿಲ್ಲ ಎಂದು ಹೇಳಿದರು.
ತುಮಕೂರು ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಸೋಮಣ್ಣ ಕಳಂಕ ರಹಿತ ವ್ಯಕ್ತಿ. ಹರಿಯುವ ನೀರಿನಂತೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿ. ನಾನು ಕೇಳಿದ 100 ಜನರಲ್ಲಿ 99 ಜನ ವಿ ಸೋಮಣ್ಣ ಪರ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧುಸ್ವಾಮಿಯವರಿಗೆ ಟಿಕೆಟ್ ತಪ್ಪಿಸುವಷ್ಟು ಪ್ರಭಾವ ನನ್ನಲ್ಲಿ ಇದ್ದಿದ್ರೆ ನಾನು ಪ್ರಧಾನಿ ಆಗುತ್ತಿದ್ದೆ. ಅಮಿತ್ ಶಾ ತುಮಕೂರು ಜಿಲ್ಲೆಯಲ್ಲಿ ವಾತಾವರಣ ಹೇಗಿದೆ ಅಂತ ನನ್ನ ಬಳಿ ಕೇಳಿದರು ಜಾತಿ ಸಮೀಕರಣದ ಬಗ್ಗೆ ನಾನು ಅವರಿಗೆ ಹೇಳಿದೆ. ಗೋ ಬ್ಯಾಕ್ ಸೋಮಣ್ಣ ಅಂತ ಒಂದು ಐವತ್ತು ಜನ ಕೂಗಿದ್ರು ಹಾಗೇನೆ ಪ್ಲೀಸ್ ಕಮ್ ಟು ತುಮಕೂರು ಸೋಮಣ್ಣ ಅಂತ ನಾನು ಒಂದು ನೂರು ಜನರಿಂದ ಕೂಗಿಸಿದ್ದೀನಿ ಹಾಗೆಂದ ಮಾತ್ರಕ್ಕೆ ಎಲ್ಲವೂ ನಡೆದು ಹೋಗುತ್ತದೆ ಎಂದು ಅಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಮಿನಿ ಸೋಮಣ್ಣ ಅವರೇ ಆಗಿದ್ದಾರೆ. ಹೀಗಿದ್ದಾಗ ಅವರಿಬ್ಬರ ನಡುವೆ ವೈಮನಸ್ಸು ಇದೆ ಅಂತ ಹೇಳೋಕೆ ಹೇಗೆ ಸಾಧ್ಯ..? ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಸಾಧಕ ಬಾದಕಗಳನ್ನ ಚರ್ಚೆ ಮಾಡಿದಾಗ ಸೋಮಣ್ಣ ವಿನ್ನಿಂಗ್ ಕ್ಯಾಂಡಿಡೇಟ್ ಅಂತ ಆಗಿದೆ. ಟಿಕೆಟ್ ಇನ್ನು ಮಾಧುಸ್ವಾಮಿಯವರ ಮನಸ್ಸು ಒಲಿಸುವಂತಹ ಜವಾಬ್ದಾರಿ ಅಭ್ಯರ್ಥಿ ಸೋಮಣ್ಣನವರಿಗೆ ಬಿಟ್ಟ ವಿಚಾರ. ಮಾಧುಸ್ವಾಮಿ ಸೋಮಣ್ಣನವರಿಗೆ ಸಪೋರ್ಟ್ ಮಾಡೇ ಮಾಡ್ತಾರೆ ಅವರು ಬಿಜೆಪಿಗೆ ಬಿಟ್ಟು ಕಾಂಗ್ರೆಸ್ ಗೆ ಮಾಡ್ತಾರ..? ಎಂದು ತುಮಕೂರಿನಲ್ಲಿ ಸಂಸದ ಬಸವರಾಜು ಹೇಳಿದ್ದಾರೆ.