ನವದೆಹಲಿ | ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 8ನೇ ಬಜೆಟ್ (Union Budget 2025-26) ಅನ್ನು 2025 ಫೆಬ್ರವರಿ 1ರಂದು ಮಂಡಿಸಿದರು. ಈ ಬಜೆಟ್‌ನಲ್ಲಿ ಬಡವರು, ಯುವಕರು, ರೈತರು ಮತ್ತು ಮಹಿಳೆಯರನ್ನು ಕೇಂದ್ರಬಿಂದು ಮಾಡಿಕೊಳ್ಳಲಾಗಿದೆ. ಆರ್ಥಿಕತೆಯ ವೇಗವನ್ನು ಹೆಚ್ಚಿಸಲು ಮತ್ತು ಸಮಗ್ರ ಬೆಳವಣಿಗೆಗೆ ಒತ್ತು ನೀಡಲಾಗಿದೆ.
(Union Budget 2025-26) ಪ್ರಮುಖ ಘೋಷಣೆಗಳು
1. ಮೂಲಸೌಕರ್ಯ ಅಭಿವೃದ್ಧಿ:
- ಐಐಟಿಗಳ ವಿಸ್ತರಣೆ, 5 ಹೊಸ ಐಐಟಿಗಳ ಮೂಲಸೌಕರ್ಯ ಹೆಚ್ಚಳ.
- ಉಡಾನ್ ಯೋಜನೆಯ ಮೂಲಕ 120 ಹೊಸ ತಾಣಗಳಿಗೆ ಪ್ರಾದೇಶಿಕ ಸಂಪರ್ಕ.
- ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ.
2. ಡಿಜಿಟಲ್ ಆರ್ಥಿಕತೆ ಮತ್ತು ನಾವೀನ್ಯತೆ:
- ಸ್ಟಾರ್ಟ್‌ಅಪ್‌ಗಳಿಗಾಗಿ ₹10,000 ಕೋಟಿ ರೂ. ನಿಧಿ.
- MSMEಗಳ ಸಾಲ ಮಿತಿ ₹5 ಕೋಟಿ ರೂ.ಗಳಿಂದ ₹10 ಕೋಟಿ ರೂ.ಗಳಿಗೆ ಹೆಚ್ಚಳ.
3. ತೆರಿಗೆ ಸುಧಾರಣೆ:
- 12 ಲಕ್ಷ ರೂ. ಆದಾಯದವರೆಗೂ ತೆರಿಗೆ ವಿನಾಯಿತಿ.
- ಹೊಸ ತೆರಿಗೆ ಸ್ಲ್ಯಾಬ್ ಜಾರಿಗೆ.
ಇದನ್ನು ಓದಿ : 2025 Budget | 2025 ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯದ ನಿರೀಕ್ಷೆಗಳು..!
4. ಆರೋಗ್ಯ ಮತ್ತು ಶಿಕ್ಷಣ:
- 10,000 ವೈದ್ಯಕೀಯ ಕಾಲೇಜು ಸೀಟುಗಳ ಹೆಚ್ಚಳ.
- ಪ್ರತಿ ಜಿಲ್ಲೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ.
5. ರೈತರ ಮತ್ತು ಕೃಷಿ ಬೆಂಬಲ:
- ತೊಗರಿ, ಉದ್ದು, ಮಸೂರ್ ದಾಲ್ ಉತ್ಪಾದನೆಗೆ 6 ವರ್ಷಗಳ ಯೋಜನೆ.
- ಹತ್ತಿ ಉತ್ಪಾದನೆ ಉತ್ತೇಜಿಸಲು 5 ವರ್ಷಗಳ ಯೋಜನೆ.
- ಪಿಎಂ ಧನ್ ಧ್ಯಾನ್ ಕೃಷಿ ಯೋಜನೆ – 100 ಜಿಲ್ಲೆಗಳಿಗೆ ಅನುಷ್ಠಾನ.
- ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಳ.
6. ಹಸಿರು ಇಂಧನ ಮತ್ತು ಹವಾಮಾನ ನಿಯಂತ್ರಣ:
- ಇವಿ ಬ್ಯಾಟರಿ ತಯಾರಿಕೆಗೆ ಸುಂಕ ವಿನಾಯಿತಿ.
- 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ಶಕ್ತಿಯ ಅಭಿವೃದ್ಧಿ.
7. ಸಮಾಜ ಕಲ್ಯಾಣ:
- 1 ಕೋಟಿ ಗಿಗ್ ಕಾರ್ಮಿಕರಿಗೆ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ.
- SC/ST ಮಹಿಳಾ ಉದ್ಯಮಿಗಳಿಗೆ ₹2 ಕೋಟಿ ರೂ. ಸಾಲ ಸೌಲಭ್ಯ.
8. ವಿದೇಶಿ ಹೂಡಿಕೆ ಮತ್ತು ವ್ಯಾಪಾರ:
- ವಿಮಾ ವಲಯದಲ್ಲಿ ವಿದೇಶಿ ಹೂಡಿಕೆ ಶೇ.74 ರಿಂದ ಶೇ.100ಕ್ಕೆ ವೃದ್ಧಿ.
- ರಫ್ತು ಉತ್ತೇಜನ ಮಿಷನ್ ಸ್ಥಾಪನೆ.
9. ಬಜೆಟ್ ಅಂದಾಜು:
- 2025-26ನೇ ಸಾಲಿನ ಒಟ್ಟು ವೆಚ್ಚ ₹50.65 ಲಕ್ಷ ಕೋಟಿ ರೂ.
- ಬಜೆಟ್ ಗಾತ್ರ (ಸಾಲಗಳನ್ನು ಹೊರತುಪಡಿಸಿ) ₹34.96 ಲಕ್ಷ ಕೋಟಿ ರೂ.
ಈ ಬಜೆಟ್ (Union Budget 2025-26) ದೇಶದ ಆರ್ಥಿಕ ಅಭಿವೃದ್ಧಿ ಮತ್ತು ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುವ ಗುರಿ ಹೊಂದಿದ್ದು, ಹಲವು ಪ್ರಮುಖ ವಲಯಗಳಲ್ಲಿ ಬದಲಾವಣೆಗಳನ್ನು ತರಲು ನಿರ್ಧಾರಿಸಲಾಗಿದೆ.