ತುಮಕೂರು | ನಗರದ ಭೀಮಸಂದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದ ಅಪಘಾತದಲ್ಲಿ (Tumkur Accident) ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು (Unidentified Person) ಚಿಕಿತ್ಸೆ ಫಲಕಾರಿಯಾಗದೆ ಮೇ 26 ರಂದು ಮೃತಪಟ್ಟಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವೀಂದ್ರ ವೈ.ವಿ. ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Sheep and Goat Fair | ಕುರಿ – ಮೇಕೆ ಕೊಳ್ಳುವವರಿಗೆ ಮತ್ತು ಮಾರುವವರಿಗೆ ಇಲ್ಲಿದೆ ಗುಡ್ ನ್ಯೂಸ್
ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ (Unidentified Person) ವ್ಯಕ್ತಿ
ಮೃತ ವ್ಯಕ್ತಿಯ ಕುರಿತು ಯಾವುದೇ ಗುರುತು ಪತ್ತೆಯಾಗಿಲ್ಲ. ಮೃತಪಟ್ಟಾಗ ವ್ಯಕ್ತಿಯು 5.6 ಅಡಿ ಎತ್ತರ ಹೊಂದಿದ್ದ, ಕೋಲು ಮುಖ ಹೊಂದಿದ್ದ, ಗೋಧಿ ಮೈಬಣ್ಣದವನು. ಅವರು ಸಿಮೆಂಟ್ ಬಣ್ಣದ ರೇಡಿಮೇಡ್ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದನು.
ಪೊಲೀಸರು ಮೃತ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ. ಈತನ ಸಂಬಂಧಿಕರು ಅಥವಾ ಆತ್ಮೀಯರು ಯಾರಾದರೂ ಇದ್ದರೆ, ಅಥವಾ ಈ ವ್ಯಕ್ತಿಯನ್ನು ಯಾರಾದರೂ ಗುರುತಿಸುವವರಿದ್ದರೆ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಯನ್ನು ಅಥವಾ ಸಂಚಾರ ಪೊಲೀಸ್ ಠಾಣೆ, ತುಮಕೂರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದು ಮಾನವೀಯ ದೃಷ್ಟಿಕೋನದಿಂದ ಅತೀ ಮಹತ್ವದ ಸಂಗತಿಯಾಗಿದ್ದು, ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ಹಾಗೂ ಕಾನೂನು ಪ್ರಕ್ರಿಯೆ ಸರಿಯಾಗಿ ನಡೆದು ಹೋಗಲು ವಾರಸುದಾರರ ಪತ್ತೆ ಅಗತ್ಯವಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕೆಂದು ಮತ್ತೊಮ್ಮೆ ಮನವಿ ಮಾಡಲಾಗಿದೆ.