ತುಮಕೂರು | ತುಮುಲು (Tumul Election) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುತೂಹಲದ ಬೆಳವಣಿಗೆಗಳು ಕಂಡುಬಂದವು. 10 ನಿರ್ದೇಶಕರ ಪೈಕಿ ಏಕೈಕ ಮಹಿಳಾ ನಿರ್ದೇಶಕಿ ಗುಬ್ಬಿಯ ಭಾರತಿ ಶ್ರೀನಿವಾಸ್, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಸ್.ಆರ್. ಶ್ರೀನಿವಾಸ್ ಅವರ ಅರ್ಧಾಂಗಿಯಾಗಿ ಪ್ರಭಾವ ಹೊಂದಿದ್ದರು. ತುಮುಲು ಅಧ್ಯಕ್ಷ ಸ್ಥಾನಕ್ಕೆ ಭಾರತಿ ಶ್ರೀನಿವಾಸ್ ಅವರ ಪ್ರಬಲ ಹಕ್ಕು ಇದೆ ಎಂಬ ನಿರೀಕ್ಷೆ ಬೆಂಬಲಿಗರಲ್ಲಿ ಮೂಡಿತ್ತು ಆದರೆ ಕೊನೆ ಕ್ಷಣದಲ್ಲಿ ಅದೆಲ್ಲವು ಕೂಡ ಬದಲಾಗಿ ಹೋಗಿದೆ.
ನಾಮಪತ್ರ ಸಲ್ಲಿಕೆಯ ವೇಳೆ ನಾಟಕೀಯ ಬೆಳವಣಿಗೆ
ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧೆ ನಡೆಸಲು ಎಸ್. ಆರ್. ಗೌಡ ಮತ್ತು ಶಾಸಕ ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದು ರಾತ್ರೋರಾತ್ರಿ ಬೆಳವಣಿಗೆಗೆ ಕಾರಣವಾಗಿದೆ. ಈ ಚುನಾವಣಾ ಪ್ರಕ್ರಿಯೆಗಾಗಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿತ್ತು.
ಪಾವಗಡ (Tumul Election) ಶಾಸಕ ವೆಂಕಟೇಶ್ ನಾಮನಿರ್ದೇಶನ
ಪಾವಗಡ ಕ್ಷೇತ್ರದ ಶಾಸಕ ವೆಂಕಟೇಶ್ ಅವರು ನಾಮ ನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಕೂಡಲೇ ತುಮುಲು ಅಧ್ಯಕ್ಷ ಗಾದಿ ಕಡೆ ಚಲನೆ ಮಾಡಿ ನಾಮಪತ್ರ ಸಲ್ಲಿಸಿದ್ದರು. ವೆಂಕಟೇಶ್ ಬೆಂಬಲಿಗರು ಮಲ್ಲಸಂದ್ರ ತುಮುಲು ಮುಂಭಾಗ ಜಮಾಯಿಸಿ ವೆಂಕಟೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಭಾರತಿ ಶ್ರೀನಿವಾಸ್ ಬೆಂಬಲಿಗರಲ್ಲಿ ಭಾರೀ ನಿರಾಸೆ
ಪ್ರಬಲ ಆಕಾಂಕ್ಷಿಯಾಗಿದ್ದ ಭಾರತಿ ಶ್ರೀನಿವಾಸ್ ಅವರು ತುಮುಲು ಅಧ್ಯಕ್ಷ ಗಾದಿಗೆ ಎದುರಾಳಿಗಳಿಂದ ಬೆಂಬಲ ಕಳೆದುಕೊಳ್ಳುವ ಸಾಧ್ಯತೆಯ ನಡುವೆ, ಅವರ ಬೆಂಬಲಿಗರಲ್ಲಿ ನಿರಾಸೆ ಮೂಡಿತು. ಚುನಾವಣೆಯಲ್ಲಿ ಗೆಲ್ಲುವ ಆಕಾಂಕ್ಷೆಯೊಂದಿಗೆ ಇದ್ದ ಭಾರತಿ ಶ್ರೀನಿವಾಸ್ ಬೆಂಬಲಿಗರು ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದಾರೆ.
ತುಮುಲ್ ಚುನಾವಣೆ (Tumul Election) ಪ್ರಕ್ರಿಯೆ
ತುಮುಲು ಚುನಾವಣೆಯಲ್ಲಿ ಆಯ್ಕೆಯಾದ 10 ನಿರ್ದೇಶಕರು ಮತ್ತು 3 ನಾಮ ನಿರ್ದೇಶನ ಸದಸ್ಯರ ಒಟ್ಟು 13 ಮತದಾರರ ಮೂಲಕ ಆಯ್ಕೆ ನಡೆದಿದೆ. ಪ್ರತಿ ಅಭ್ಯರ್ಥಿಯೂ ತಮ್ಮ ಕಡೆಯಿಂದ ಪ್ರಬಲ ಪ್ರಚಾರ ನಡೆಸಿದ್ದು, ಈ ಚುನಾವಣೆಯ ಫಲಿತಾಂಶ ಯಾವುದೇ ರೀತಿಯ ಅಚ್ಚರಿಗೆ ಕಾರಣವಾಗಬಹುದು ಎಂದು ಕುತೂಹಲದಿಂದ ಎದುರು ನೋಡುತ್ತಿದ್ದರು.
ಇದೀಗ ಪಾವಗಡ ವಿಧಾನಸಭಾ ಕ್ಷೇತ್ರದ ವೆಂಕಟೇಶ್ ಅವರು ಅಧಿಕೃತವಾಗಿ 9 ಮತಗಳನ್ನು ಪಡೆಯುವ ಮೂಲಕ ತುಮುಲ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಗೆ ತೆರೆ ಬಿದ್ದಿದೆ.