ತುಮಕೂರು | ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ (Tumul Election) ಫಲಿತಾಂಶ ಇದೀಗ ಪ್ರಕಟವಾಗಿದೆ. 10 ತಾಲ್ಲೂಕು ಸೇರಿದ್ದಂತೆ 10 ನಿರ್ದೇಶಕ ಸ್ಥಾನಕ್ಕೆ ನಡೆದಿದ್ದ ಚುನಾವಣೆ ಇದಾಗಿದ್ದು, ತೀವ್ರ ಕುತೂಹಲ ಕೆರಳಿಸಿತ್ತು. ತುಮುಲ್ ಚುನಾವಣೆ (Tumul Election) ನವೆಂಬರ್ 10 ರಂದು ಮತದಾನ ನಡೆದಿದ್ದು, 21 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1119 ಮತಗಳ ಪೈಕಿ 1188 ಮತಗಳು ಚಲಾವಣೆಗೊಂಡಿದ್ದವು.
ತುಮುಲ್ ಚುನಾವಣೆ (Tumul Election) ಫಲಿತಾಂಶದ ವಿವರ
ತುಮುಲ್ ಚುನಾವಣೆಯಲ್ಲಿ (Tumul Election) ಚಿಕ್ಕನಾಯಕನಹಳ್ಳಿಯ ಮಾಧುಸ್ವಾಮಿ ಬೆಂಬಲಿಗ ಅಭ್ಯರ್ಥಿ 82 ಮತಗಳನ್ನು ಪಡೆದ ಬುಳ್ಳೇನಹಳ್ಳಿ ಪ್ರಕಾಶ್ ಜಯಭೇರಿ ಬಾರಿಸಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ಶಾಸಕ ಎಸ್. ಆರ್ ಶ್ರೀನಿವಾಸ್ ಪತ್ನಿ ಭಾರತಿ ಶ್ರೀನಿವಾಸ್ 68 ಮತಗಳನ್ನ ಪಡೆದು ಜಯಗಳಿಸಿದ್ದಾರೆ. ತಿಪಟೂರಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ ಪ್ರಕಾಶ್ 105 ಮತಗಳನ್ನು ಪಡೆಯುವುದರ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ತುಮಕೂರು ತಾಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಂಜೇಗೌಡ 83 ಮತಗಳನ್ನು ಪಡೆದು ಜಯಗಳಿಸಿದರೆ. ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿ . ಸಿದ್ದಗಂಗಯ್ಯ 78 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ. ತುರುವೇಕೆರೆ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಮಹಾಲಿಂಗಯ್ಯ 85 ಮತಗಳನ್ನು ಪಡೆದು ಭರ್ಜರಿ ಗೆಲುವು ಪಡೆದಿದ್ದಾರೆ. ಮಧುಗಿರಿಯಲ್ಲಿ ಕೊನೆಗೂ ಕೆ. ಎನ್ ರಾಜಣ್ಣ ಬೆಂಬಲಿಗ 61 ಮತಗಳನ್ನ ಪಡೆದು ನಾಗೇಶ್ ಬಾಬು ಗೆಲುವು ಪಡೆದಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಎಂದಿನಂತೆ ಎಸ್.ಆರ್ ಗೌಡ 84 ಮತಗಳನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಕುಣಿಗಲ್‌ನಲ್ಲಿ ಎಂದಿನಂತೆ ಡಿ. ಕೃಷ್ಣಕುಮಾರ್ 126 ಮತಗಳನ್ನ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಪಾವಗಡದಲ್ಲಿ ಚನ್ನಮಲ್ಲಪ್ಪ 28 ಮತಗಳನ್ನು ಪಡೆದುಕೊಂಡರೆ ಚಂದ್ರಶೇಖರ್ ರೆಡ್ಡಿ 29 ಮತಗಳನ್ನು ಪಡೆದುಕೊಳ್ಳುವುದರ ಮೂಲಕ ಕೇವಲ 1 ಮತದಿಂದ ಗೆಲುವು ಪಡೆದಿದ್ದಾರೆ.