ತುಮಕೂರು | ರಾತ್ರೋರಾತ್ರಿ ದೇವಾಲಯದ ಹುಂಡಿ (Temple Hundi) ಒಡೆದು ಅದರಲ್ಲಿದ್ದ ಸುಮಾರು 2 ಲಕ್ಷ ರೂಪಾಯಿ ಹಣವನ್ನು ಕಳ್ಳರು (Thieves) ದೋಚಿರುವ ಘಟನೆ ತುಮಕೂರು (Tumkur) ಗ್ರಾಮಾಂತರದ ಹೆಬ್ಬೂರಿನ ಪನ್ನಸಂದ್ರ ಗ್ರಾಮದ ದೇವಾಲಯದಲ್ಲಿ ನಡೆದಿದೆ.
ಪನ್ನಸಂದ್ರ ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ (Shri Lakshmi Narasimha Swamy Temple) ಹುಂಡಿಯನ್ನು ಹೊಡೆದಿರುವ ಕಳ್ಳರು ಅದರಲ್ಲಿದ್ದ ಸುಮಾರು 2 ಲಕ್ಷ ಹಣದ ಜೊತೆಗೆ 250 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ. ಈ ಘಟನೆ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮೂಡುವಂತೆ ಮಾಡಿದೆ. ತೋಟದ ಮನೆಗಳ ಮಂದಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ಇನ್ನೂ ಸ್ಥಳಕ್ಕೆ ಹೆಬ್ಬೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಕಿಶೋರ್ ಮತ್ತು ಹೇಮಂತ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.