ತುಮಕೂರು | ಮಳೆಗಾಗಿ (Rain) ಹಾತೊರೆಯುತ್ತಿದ್ದ ತುಮಕೂರಿನ (Tumkur) ಜನರಿಗೆ ಇದೀಗ ಮಳೆರಾಯ ತಂಪೆನ್ನೆರೆದಿದ್ದಾನೆ. ತಡರಾತ್ರಿ ತುಮಕೂರು ನಗರ ಸೇರಿದಂತೆ ಜಿಲ್ಲೆಯ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿದೆ.
ಇನ್ನೂ ತಡರಾತ್ರಿ ಸುರಿದಂತಹ ಬಾರಿ ಮಳೆಗೆ ನಗರದ ಸಮೀಪವಿರುವ ಬೈರೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಬದಿ ಚರಂಡಿ ಇಲ್ಲದ ಕಾರಣ ಈ ಅವಾಂತರ ಸೃಷ್ಟಿಯಾಗಿದೆ ಎನ್ನಲಾಗುತ್ತದೆ.
ಇನ್ನು ಈ ವೇಳೆ ಮನೆಯಲ್ಲಿದ್ದ ದಿನಸಿ ಪದಾರ್ಥಗಳು ಕೂಡ ಸಂಪೂರ್ಣವಾಗಿ ಹಾಳಾಗಿದ್ದು, ನೀರಿನಲ್ಲಿ ಹಲವಾರು ಸಾಮಗ್ರಿಗಳು ಕೊಚ್ಚಿಹೋಗಿವೆ. ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಇನ್ನು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲೂ ಕೂಡ ಧಾರಾಕಾರವಾಗಿ ಮಳೆ ಸುರಿದಿದ್ದು, ರಸ್ತೆಯಲ್ಲಿ ಹೊಳೆಯಂತೆ ನೀರು ಹರಿದಿದೆ. ಈ ಧಾರಾಕಾರ ಮಳೆಯಿಂದಾಗಿ ರೈತ ಸಮುದಾಯದಲ್ಲಿ ಸಂತಸ ಮೂಡಿದೆ.