ತುಮಕೂರು (ಫೆ. 04) | ದುಪ್ಪಟ್ಟು ಬಡ್ಡಿ ಆಮೀಷವೊಡ್ಡಿ ಜನರಿಗೆ ವಂಚನೆ ಮಾಡಿದ್ದ ಜ್ಯುವೆಲರಿ ಶಾಪ್ ಮಾಲೀಕ ಶಿವಾನಂದಮೂರ್ತಿ ಹಾಗೂ ಪತ್ನಿ ಅನ್ನಪೂರ್ಣ ಅವರನ್ನು ತುಮಕೂರು ನಗರ ಪೊಲೀಸರು (Tumkur Police) ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಘಟನೆಯ ವಿವರ
ಆಕಾಶ್ ಜ್ಯುವೆಲರಿ ಶಾಪ್ ಮಾಲೀಕರಾದ ಶಿವಾನಂದಮೂರ್ತಿ ಮತ್ತು ಪತ್ನಿ ಅನ್ನಪೂರ್ಣ ತುಮಕೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಜನರಿಂದ ಹೂಡಿಕೆ ಮಾಡಿಸಿದ್ದ ಹಣಕ್ಕೆ ದುಪ್ಪಟ್ಟು ಬಡ್ಡಿ ನೀಡುವ ಆಮೀಷವೊಡ್ಡಿ ಸುಮಾರು ₹30 ಕೋಟಿ ಮೌಲ್ಯದ ವಂಚನೆ ನಡೆಸಿ ಕುಟುಂಬ ಸಮೇತ ಪರಾರಿಯಾಗಿದ್ದರು.
ಈ ಸಂಬಂಧ ನೂರಾರು ಜನರು ತುಮಕೂರು ನಗರ ಪೊಲೀಸ್ (Tumkur Police) ಠಾಣೆಯಲ್ಲಿ ದೂರು ನೀಡಿದ್ದರು. ತುಮಕೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ಆರಂಭಿಸಿದ್ದರು.
ಇದನ್ನು ಓದಿ : Tumkur Railway Station | ಭೀಕರ ದುರಂತ : ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಯುವಕ ಸಾವು..!
(Tumkur Police) ಬಂಧನ ಮತ್ತು ಮುಂದಿನ ಕ್ರಮ
ಬೆಂಗಳೂರು ನಗರದಲ್ಲಿ ಶಿವಾನಂದಮೂರ್ತಿ ದಂಪತಿಯನ್ನು ಬಂಧಿಸಿದ ತುಮಕೂರು ಪೊಲೀಸರು (Tumkur Police) ವಂಚಿತರ ನಷ್ಟದ ಸುಧಾರಣೆ ಬಗ್ಗೆ ತನಿಖೆ ಮುಂದುವರಿಯುತ್ತಿದೆ. ಇನ್ನಷ್ಟು ಹೂಡಿಕೆದಾರರು ದೂರಿನೊಂದಿಗೆ ಪೊಲೀಸರ ಸಂಪರ್ಕಕ್ಕೆ ಬರಲು ಮನವಿ ಮಾಡಲಾಗಿದೆ. ಈ ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಬಂಧನ ಸಾಧ್ಯತೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.