Thursday, December 12, 2024
Homeಜಿಲ್ಲೆತುಮಕೂರುTumkur Police | ತುಮಕೂರು ನಗರದಲ್ಲಿ ಪೊಲೀಸರ ಭರ್ಜರಿ ಪಥಸಂಚಲನ..!

Tumkur Police | ತುಮಕೂರು ನಗರದಲ್ಲಿ ಪೊಲೀಸರ ಭರ್ಜರಿ ಪಥಸಂಚಲನ..!

ತುಮಕೂರು | ಗೌರಿ ಮತ್ತು ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯಾದಂತಹ ಅಶಾಂತಿಗೆ ಅವಕಾಶ ನೀಡದೆ ಸಾರ್ವಜನಿಕರೊಂದಿಗೆ ನಾವು ಇದ್ದೇವೆ ಎನ್ನುವ ಭರವಸೆ ಮೂಡಿಸಲು ತುಮಕೂರು ನಗರದ ಹಲವಾರು ಕಡೆ ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಪಥ ಸಂಚಲನ ನಡೆಸಲಾಯಿತು.

ಇಂದು ಬೆಳಗ್ಗೆ 09:30 ಗಂಟೆಗೆ ಪೊಲೀಸ್ ಅದೀಕ್ಷಕರಾದ ಅಶೋಕ್ ಕೆ.ವಿ ರವರ ನೇತೃತ್ವದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ತುಮಕೂರು ನಗರದ ಜೆಸಿ ರಸ್ತೆ, ಮಂಡಿಪೇಟೆ, ಬಿಜಿ ಪಾಳ್ಯ, ಪಿ.ಹೆಚ್.ಕಾಲೋನಿ, ಕುರಿಪಾಳ್ಯ, ಬನಶಂಕರಿ ವೃತ್ತ ದಿಂದ ಮರಳೂರಿನ ರಸ್ತೆಗಳಲ್ಲಿ ಪಥಸಂಚಲನ ನೆಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ನಗರ ಡಿಎಸ್ಪಿ ಶ್ರೀನಿವಾಸ್, ನಗರದ ಇನ್ಸ್ಪೆಕ್ಟರ್ ಗಳು ಮತ್ತು ತುಮಕೂರು ನಗರ ಉಪವಿಭಾಗ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments