ತುಮಕೂರು | 4.66 ಲಕ್ಷ ಸಾಲಕ್ಕೆ 7.20 ಲಕ್ಷ ಬಡ್ಡಿ ಕಟ್ಟಿದರೂ ಅಸಲು ಕೂಡ ತೀರದ ಹಿನ್ನಲೆಯಲ್ಲಿ ಬಡ್ಡಿ, ಚಕ್ರಬಡ್ಡಿ ಪೀಡನೆಗೆ ತತ್ತರಿಸಿ ಸೈಯದ್ ಸಮಿವುಲ್ಲಾ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು (Tumkur News) ಜಿಲ್ಲೆಯಲ್ಲಿ ನಡೆದಿದೆ.
ಘಟನೆ ವಿವರಗಳು
ತುಮಕೂರಿನ (Tumkur News) ಲೇಬರ್ ಕಾಲೋನಿಯ ಸೈಯದ್ ಸಮಿವುಲ್ಲಾ 2019 ಜನವರಿಯಲ್ಲಿ ಫೈವ್ ಸ್ಟಾರ್ ಫೈನಾನ್ಸ್ ಕಂಪನಿಯಲ್ಲಿ ಮನೆ ನಿರ್ಮಾಣಕ್ಕಾಗಿ 4.66 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಸಾಲಕ್ಕೆ ವಾರ್ಷಿಕ 24.55% ಬಡ್ಡಿದರ ನಿಗದಿಯಾಗಿತ್ತು. 7.20 ಲಕ್ಷ ರೂಪಾಯಿ ಬಡ್ಡಿ ಪಾವತಿಸಿದರೂ ಅಸಲು ತೆಗೆಯದ ಕಾರಣ ಮತ್ತಷ್ಟು ಬಡ್ಡಿ, ಚಕ್ರಬಡ್ಡಿ ಪೀಡನೆ ಆರಂಭವಾಯಿತು. 2024ರ ಮೇನಲ್ಲಿ ಹೃದಯಾಘಾತದಿಂದ ಸಮಿವುಲ್ಲಾ ಸಾವನ್ನಪ್ಪಿದ್ದಾರೆ ಇದಕ್ಕೆ ಕಾರಣ ಫೈವ್ ಸ್ಟಾರ್ ಫೈನಾನ್ಸ್ ಕಂಪನಿ ಎಂದು ಆರೋಪ ಮಾಡಿದ್ದಾರೆ.
ಕುಟುಂಬಕ್ಕೆ ತಪ್ಪದ ಕಿರುಕುಳ
ಸಮಿವುಲ್ಲಾ ಸಾವಿನ ಬಳಿಕವೂ ಖಾಸಗಿ ಫೈನಾನ್ಸ್ ಕಂಪನಿಯ ಪೀಡನೆ ನಿಲ್ಲದಿದ್ದು, ಅವರ ಕುಟುಂಬದ ಮೇಲೆ ಸಾಲ ತೀರಿಸಲು ದೌರ್ಜನ್ಯ ಮುಂದುವರಿಸಲಾಗಿದೆ. ಕಂಪನಿಯ ಸಿಬ್ಬಂದಿಗಳು ಸೈಯದ್ ಅವರ ಮನೆ ಮುಂದೆ ಹೋಗಿ ಗಲಾಟೆ ನಡೆಸಿದ್ದಾರೆ. ಲಾಯರ್ ಜೊತೆ ತೆರಳಿ ಕುಟುಂಬವನ್ನು ಬೆದರಿಸುವ ಘಟನೆಗಳೂ ನಡೆದಿದೆ.
ಸಾಲ ಪಾವತಿ ಮಾಹಿತಿ
ಸಮಿವುಲ್ಲಾ ಅವರು 84 ಕಂತುಗಳಲ್ಲಿ ಸಾಲ ತೀರಿಸಬೇಕಿದ್ದರೂ, 58 ಕಂತುಗಳ ಮೂಲಕ ಬಡ್ಡಿ ಹಾಗೂ ಚಕ್ರಬಡ್ಡಿ ಪಾವತಿಸಿದ್ದರು. ಆದರೆ, ಖಾಸಗಿ ಫೈನಾನ್ಸ್ ಕಂಪನಿಯ ಚಕ್ರ ಬಡ್ಡಿ ಪೀಡನೆ ಸಮಿವುಲ್ಲಾ ಅವರ ಜೀವ ಕಸಿದುಕೊಂಡಿತು.
ಸಾಲಗಾರ ಕುಟುಂಬದ ಸಂಕಷ್ಟ
ಖಾಸಗಿ ಫೈನಾನ್ಸ್ ಕಂಪನಿಯ ದೌರ್ಜನ್ಯದಿಂದ ತತ್ತರಿಸುತ್ತಿರುವ ಸೈಯದ್ ಅವರ ಕುಟುಂಬ ನ್ಯಾಯಕ್ಕಾಗಿ ಹೆಣಗುತ್ತಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಫೈನಾನ್ಸ್ ಕಂಪನಿ ತುಮಕೂರಿನ (Tumkur News) ಎಂ.ಜಿ ರಸ್ತೆಯಲ್ಲಿದ್ದು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.