Thursday, December 12, 2024
Homeಜಿಲ್ಲೆತುಮಕೂರುTumkur Mahanagara Corporation | ತುಮಕೂರಿನ ಈ ರಸ್ತೆಗಳಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿದ್ರೆ ಮುಲಾಜಿಲ್ಲದೆ ದಂಡ..!

Tumkur Mahanagara Corporation | ತುಮಕೂರಿನ ಈ ರಸ್ತೆಗಳಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿದ್ರೆ ಮುಲಾಜಿಲ್ಲದೆ ದಂಡ..!

ತುಮಕೂರು | ಮಹಾನಗರ ಪಾಲಿಕೆ (Mahanagara Corporation) ವ್ಯಾಪ್ತಿಯಲ್ಲಿ ನಿಷೇಧಿತ ರಸ್ತೆಗಳೆಂದು (forbidden road) ಘೋಷಿಸಲ್ಪಟ್ಟ ರಸ್ತೆಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು (Flex, banner) ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು  ಪಾಲಿಕೆ ಆಯುಕ್ತ ಬಿ. ವಿ. ಅಶ್ವಿಜಾ (B. V. Ashvija)ಸೂಚನೆ ನೀಡಿದ್ದಾರೆ.

One station one product  | ತುಮಕೂರು ರೈಲ್ವೆ ನಿಲ್ದಾಣದಲ್ಲಿಂದು ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆ ಉದ್ಘಾಟನೆ..! – karnataka360.in

ಮಹಾನಗರಪಾಲಿಕೆ ವ್ಯಾಪ್ತಿಯ ಬಟವಾಡಿಯಿಂದ ಗುಬ್ಬಿಗೇಟ್ (ಬಿ.ಹೆಚ್.ರಸ್ತೆ) ಹಾಗೂ ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗಿನ ರಸ್ತೆಯನ್ನು ನಿಷೇಧಿತ ರಸ್ತೆಗಳೆಂದು ಘೋಷಿಸಲಾಗಿದೆ. ಕರ್ನಾಟಕ ರಾಜ್ಯ ಸಾರ್ವಜನಿಕ ಸ್ಥಳಗಳ ಅಂದಗೆಡಿಸುವ ನಿಯಂತ್ರಣ ಕಾಯ್ದೆ-1981ರಡಿ ಯಾವುದೇ ರೀತಿಯ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಹೋರ್ಡಿಂಗ್ಸ್, ಪೋಸ್ಟರ್ಸ್, ಕಟೌಟ್ಸ್, ಗೋಡೆ ಬರಹ, ನಾಮಫಲಕ, ಜಾಹೀರಾತು ಫಲಕ ಸೇರಿದಂತೆ ಇನ್ನಿತರ ಪ್ರಚಾರ ಸಾಮಗ್ರಿಗಳ ಮೂಲಕ ಸಾರ್ವಜನಿಕ ಸ್ಥಳಗಳನ್ನು ಅಂದಗೆಡಿಸುವಂತಿಲ್ಲ.

ನಿಷೇಧಿತ ರಸ್ತೆಗಳನ್ನು ಹೊರತುಪಡಿಸಿ, ಅನುಮತಿ ನೀಡಿರುವ ಅಂತಿಮ ದಿನಾಂಕ/ಸಮಯದ ತರುವಾಯ ಸಂಬಂಧಿಸಿದವರು ಜಾಹೀರಾತು ಫಲಕಗಳನ್ನು ತೆರವುಗೊಳಿಸತಕ್ಕದ್ದು. ಇಲ್ಲವಾದಲ್ಲಿ ನಿಯಮಾನುಸಾರ ದಂಡ ವಿಧಿಸಿ ಪಾಲಿಕೆ ವತಿಯಿಂದಲೇ ತೆರವುಗೊಳಿಸಲಾಗುವುದು.  ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವವರು ಜಾಹೀರಾತು/ಪ್ರಚಾರ ಸಾಮಗ್ರಿಗಳ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ.   ಮಹಾನಗರಪಾಲಿಕೆ ಆರೋಗ್ಯ ಶಾಖೆ/ಕಂದಾಯ ಶಾಖೆಯಿಂದ   ಬಂಟಿಂಗ್ಸ್ ಹರ‍್ಡಿಂಗ್ಸ್, ಪೋಸ್ಟರ್ಸ್, ಬಟ್ಟೆ ಬ್ಯಾನರ್, ಬಟ್ಟೆ ಬಾವುಟ ಹಾಗೂ ಬಟ್ಟೆಯ ಫ್ಲೆಕ್ಸ್ಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments