Thursday, December 12, 2024
Homeಜಿಲ್ಲೆತುಮಕೂರುTumkur Lok Sabha Constituency | ತುಮಕೂರು ಲೋಕಸಭೆಯಲ್ಲಿ ಬಿಗ್ ಟ್ವಿಸ್ಟ್ ; ಜೆ ಸಿ...

Tumkur Lok Sabha Constituency | ತುಮಕೂರು ಲೋಕಸಭೆಯಲ್ಲಿ ಬಿಗ್ ಟ್ವಿಸ್ಟ್ ; ಜೆ ಸಿ ಮಾಧುಸ್ವಾಮಿಗೆ ಕಾಂಗ್ರೆಸ್ ಟಿಕೆಟ್..?

ತುಮಕೂರು | ತುಮಕೂರು ಲೋಕಸಭಾ ಕ್ಷೇತ್ರದ (Tumkur Lok Sabha Constituency) ಬಿಜೆಪಿ (BJP) ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಜೆ ಸಿ ಮಾಧುಸ್ವಾಮಿಯವರಿಗೆ (JC Madhuswamy) ಟಿಕೆಟ್ ಕೈತಪ್ಪಿದ್ದು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದರ ಅವಕಾಶವನ್ನು ಬಳಸಿಕೊಂಡ ಕಾಂಗ್ರೆಸ್ (Congress) ನಾಯಕರು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರಲು ಪ್ರಯತ್ನ ನಡೆಸುತಿದ್ದಾರೆ.

Tumkur Fire accident | ಬೆಂಕಿ ಅವಘಡಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಮೃತ್ಯು..! – karnataka360.in

ಹೌದು,,, ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಕಂಡ ಜೆ ಸಿ ಮಾಧುಸ್ವಾಮಿ ಮನೆಯಲ್ಲಿರುವಾಗ ಬಿ ಎಸ್ ಯಡಿಯೂರಪ್ಪ ತುಮಕೂರು ಲೋಕಸಭೆಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಇವರನ್ನು ನಂಬಿ ಚುನಾವಣೆ ಅಖಾಡಕ್ಕಿಳಿದು ಪ್ರಚಾರವನ್ನು ಕೂಡ ಆರಂಭಿಸಿದ್ದರು ಜೆ ಸಿ ಮಾಧುಸ್ವಾಮಿ. ಇದೀಗ ಕೊನೆಯ ಹಂತದಲ್ಲಿ ಮಾಜಿ ಸಚಿವ ವಿ. ಸೋಮಣ್ಣನವರಿಗೆ ಬಿಜೆಪಿ ಪಕ್ಷ ಮಣೆ ಹಾಕಿದೆ. ಇದರ ಬೆನ್ನಲ್ಲೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಜೆ ಸಿ ಮಾರುಸ್ವಾಮಿ.

ಸೋಮಣ್ಣ ಮನೆಗೆ ಬರುತ್ತೇನೆ ಎಂದರೂ ಬರಬೇಡ ಎಂದಿರುವ ಮಾಧುಸ್ವಾಮಿ. ಪಕ್ಷದ ಹಿರಿಯ ನಾಯಕರು ಬಂದು ಸಮಾಧಾನಪಡಿಸಿದರು ಅವರ ಕೋಪ ತಣ್ಣಗಾಗಿಲ್ಲ,  ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕಾಂಗ್ರೆಸ್ ನಾಯಕರು ಮಾಧುಸ್ವಾಮಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಸಂಪರ್ಕ ಮಾಡಿ ಆಹ್ವಾನ ನೀಡಿದ್ದಾರೆ. ಇದರ ಜೊತೆಗೆ ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ಕೂಡ ಮಾಧುಸ್ವಾಮಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಒಂದೆರಡು ದಿನ ಕಾದು ನೋಡಿ ಎಲ್ಲವೂ ಒಳ್ಳೆಯದೇ ಆಗಲಿದೆ ಎಂದು ತಮ್ಮ ಬೆಂಬಲಿಗರು ಆಪ್ತರ ಬಳಿ ಜೆ ಸಿ ಮಾಧುಸ್ವಾಮಿ ಹೇಳಿಕೊಂಡಿರುವುದು ಬಹುತೇಕ ಅವರು ಬಿಜೆಪಿಯ ನಡೆಯಿಂದ ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷ ಸೇರುವ ಎಲ್ಲಾ ಸಾಧ್ಯತೆಗಳು ಇವೆ.

ಒಂದು ವೇಳೆ ಜೆ ಸಿ ಮಾಧುಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಈಗಾಗಲೇ ತುಮಕೂರು ಲೋಕಸಭೆಯಲ್ಲಿ ಘೋಷಣೆ ಮಾಡಿರುವ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡರಿಗೆ ಕ್ಷೇತ್ರ ಕೈತಪ್ಪುವ ಸಾಧ್ಯತೆ ಕೂಡ ಇದೆ. ಜೆ ಸಿ ಮಾಧುಸ್ವಾಮಿ ಅವರನ್ನು ತುಮಕೂರು ಲೋಕಸಭೆಯಲ್ಲಿ ಅಖಾಡಕ್ಕಿಳಿಸಿ ಎಸ್ ಪಿ ಮುದ್ದಹನುಮಗೌಡರಿಗೆ ಬೆಂಗಳೂರಿನ ಯಾವುದಾದರು ಒಂದು ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಒಂದು ವೇಳೆ ಲೋಕಸಭೆ ಟಿಕೆಟ್ ಕೊಡಲು ಸಾಧ್ಯವಾಗದೇ ಇದ್ದರೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆಯನ್ನ ಕೂಡ ನೀಡಲಾಗಿದೆ.

ಇದೆಲ್ಲವೂ ಕೂಡ ಇನ್ನೂ ಮಾತುಕತೆಯ ಹಂತದಲ್ಲಿದ್ದು ಜೆ ಸಿ ಮಾಧುಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರ..? ಇಲ್ಲ ಬಿಜೆಪಿ ಪಕ್ಷದಲ್ಲಿ ಇದ್ದು ಸೋಮಣ್ಣನವರಿಗೆ ಸಪೋರ್ಟ್ ಮಾಡುತ್ತಾರ..? ಎನ್ನುವುದನ್ನು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments