Thursday, December 12, 2024
Homeಜಿಲ್ಲೆತುಮಕೂರುTumkur Ettinhola Project | ಎತ್ತಿನಹೊಳೆ ಯೋಜನೆ ಮೂಲಕ ಶಿರಾ ತಾಲೂಕಿನ 200 ಕೆರೆಗಳಿಗೆ ನೀರು...

Tumkur Ettinhola Project | ಎತ್ತಿನಹೊಳೆ ಯೋಜನೆ ಮೂಲಕ ಶಿರಾ ತಾಲೂಕಿನ 200 ಕೆರೆಗಳಿಗೆ ನೀರು – ಟಿ ಬಿ ಜಯಚಂದ್ರ

ಬೆಂಗಳೂರು | ಎತ್ತಿನಹೊಳೆ ಯೋಜನೆಯಿಂದ (Ettinhola Project) ತುಮಕೂರು (Tumkur) ಜಿಲ್ಲೆಯ ಶಿರಾ ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ ಯೋಜನೆಯನ್ನು ಮಾರ್ಪಡಿಸಿ ಕೆರೆಗಳಿಗೆ ನೀರು (Water to lakes) ತುಂಬಿಸುವ ಯೋಜನೆಯಾಗಿ ರೂಪಿಸಲು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಸಮನ್ವಯ ಸಮತಿಗೆ ಮನವಿ ಮಾಡಲು ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ (TB Jayachandra) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಎತ್ತಿನಹೊಳೆ ಯೋಜನೆ ಮೂಲಕ ಶಿರಾ ತಾಲೂಕಿನ 200 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಬಿ ಜಯಚಂದ್ರ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು‌.

ಉಪಮುಖ್ಯಮಂತ್ರಿಗಳಾದ ಡಿ‌.ಕೆ ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರರಾದ ಕೆ. ಜಯಪ್ರಕಾಶ್ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಮಂಡಳಿ  ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣ ಚಿತ್ತಯ್ಯ ಮುಖ್ಯ ಇಂಜಿನಿಯರ್ ವರದಯ್ಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಆನಂದ್ ಕುಮಾರ್  ಹಾಗೂ  ಸಹಾಯಕ ಅಭಿಯಂತರರಾದ ಯೋಗೇಶ್ ಹಾಗೂ ಟಿ.ಬಿ ಜಯಚಂದ್ರ ಅವರ ನೀರಾವರಿ ಸಲಹೆಗಾರರ ಈಶ್ವರಯ್ಯ ಅವರು ಸಭೆಯಲ್ಲಿ ಹಾಜರಿದ್ದರು.

ಎತ್ತಿನಹೊಳೆ ಯೋಜನೆ ಮೂಲಕ ಶಿರಾ ನಗರದ 200 ಕೆರೆಗಳಿಗೆ ಕುಡಿಯುವ ನೀರಿಗಾಗಿ 0.514  ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ ಇದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ ಹಾಗಾಗಿ ಈ ಯೋಜನೆಯನ್ನು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿ ಮಾರ್ಪಡಿಸಬೇಕು ಎಂದು ಟಿ‌.ಬಿ ಜಯಚಂದ್ರ ಅವರು ಅಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು ಈ ವಿಷಯವನ್ನು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಸಮನ್ವಯ ಸಮಿತಿ ಸಭೆಯಲ್ಲಿ ಮಂಡಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜೊತೆ ಸಹ ಮುಂದಿನ ತಿಂಗಳಲ್ಲಿ ಒಂದು ಸಭೆ ಮಾಡುವುದಾಗಿ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರ ಎತ್ತಿನಹೊಳೆ ಯೋಜನೆಯ ಕಾರ್ಯ ಪ್ರಗತಿಯನ್ನು ಹಾಗೂ ಭೂಸ್ವಾಧೀನ ಮತ್ತು   ಈ ಯೋಜನೆ ಹಣ ಬಿಡುಗಡೆಗೊಳಿಸಿರುವ ಮಾಹಿತಿಯನ್ನು  ಟಿ. ಬಿ ಜಯಚಂದ್ರ ಅವರು ಇದೇ ವೇಳೆ ಪಡೆದರು. ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಇದೆ ವೇಳೆ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿಯ ವಿವರಗಳನ್ನು ಸಹ ಟಿ.ಬಿ ಜಯಚಂದ್ರ ಅವರು ಪಡೆದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments