ತುಮಕೂರು | ರಾಜ್ಯದ ಎರಡನೇ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಮಕೂರು ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ವಿ.ಅಶೋಕ್ ಆಗಮಿಸಿದ್ದು ಇಂದು ಅಧಿಕಾರವನ್ನು ವಹಿಸಿಕೊಂಡರು. ಈ ಹಿಂದೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿದ್ದ ಅಶೋಕ್ ಅವರನ್ನು ಸೆಪ್ಟಂಬರ್ 5 ರಂದು ರಾಜ್ಯ ಸರ್ಕಾರ ತುಮಕೂರು ಎಸ್ಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
Electrical variation | ತುಮಕೂರು ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ಇರಲ್ಲ..! – karnataka360.in
ನಗರದ ಜಿಲ್ಲಾ ಪೊಲೀಸ್ ಕಚೇರಿಗೆ ಗುರುವಾರ ಪತ್ನಿ ಪಾಲಿಕೆ ಆಯುಕ್ತೆಯಾದ ಬಿ.ವಿ.ಅಶ್ವಿಜಾ, ಪುತ್ರ ಆರ್ಯವತ್ ಕುಟುಂಬ ಸಮೇತರಾಗಿ ಆಗಮಿಸಿದ ಕೆ.ವಿ.ಅಶೋಕ್‌ರನ್ನು ನಿರ್ಗಮಿತ ಎಸ್ಪಿ ರಾಹುಲ್‌ಕುಮಾರ್ ಶಹಾಪೂರವಾಡ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಮಧ್ಯಾಹ್ನ 12ಕ್ಕೆ ಅಶೋಕ್ ಅಧಿಕಾರ ಸ್ವೀಕರಿಸಿದರು.
ಜೂನ್ 10, 2021ರಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರವಹಿಸಿಕೊಂಡಿದ್ದ ರಾಹುಲ್ ಕುಮಾರ್ ಶಹಾಪೂರವಾಡ್ ಅವರು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಹುದ್ದೆಗೆ ವರ್ಗಾವಣೆ ಆಗಿದ್ದು ಆ ಸ್ಥಾನಕ್ಕೆ 2017ನೇ ಕರ್ನಾಟಕ ಐಪಿಎಸ್ ಬ್ಯಾಚ್‌ನ ಅಶೋಕ್‌ರನ್ನು ವರ್ಗಾಯಿಸಲಾಗಿದೆ.
ಆಂಧ್ರಮೂಲದ ಅಶೋಕ್ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಕುಮಾರ್ ಸರ್ ಅವರ ಹಾದಿಯಲ್ಲೇ ಹೆಜ್ಜೆಯನ್ನಿಟ್ಟು ಶಾಂತಿ, ಸುವ್ಯವಸ್ಥೆ ಕಾಪಾಡುವೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಅವರ ಮಾರ್ಗದರ್ಶನ ಪಡೆಯುವೆ ಎಂದರು.