ತುಮಕೂರು | ಅಪರಿಚಿತ ಶವವೊಂದು (Dead Body) ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವಂತಹ ಘಟನೆ ತುಮಕೂರು (Tumkur) ಜಿಲ್ಲೆಯ ಮಧುಗಿರಿ (Madhugiri) ತಾಲೂಕಿನ ತುಂಗೋಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೌದು,, ಸುಮಾರು ಒಂದು ವಾರದ ಹಿಂದೆ ಅಪರಿಚಿತ ವ್ಯಕ್ತಿಯು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇನ್ನೂ ವೃತ ಶವವು 45 ರಿಂದ 50 ವರ್ಷದ ವಯಸ್ಸಿನ ಪುರುಷನ ಶವ ಎನ್ನಲಾಗಿದೆ. ವ್ಯಕ್ತಿಯ ಹೆಸರು, ವಿಳಾಸ ಮತ್ತು ವಾರಸುದಾರರು ಪತ್ತೆಯಾಗಿಲ್ಲ.
ಇನ್ನು ಸ್ಥಳಕ್ಕೆ ಮಿಡಿಗೇಶಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹವನ್ನು ತುಮಕೂರಿನ ಶವಗಾರಕ್ಕೆ ರವಾನೆ ಮಾಡಲಾಗಿದೆ.