ತುಮಕೂರು | ತುಮಕೂರು (Tumkur Crime News) ಜಿಲ್ಲೆ ಮಧುಗಿರಿ ತಾಲೂಕಿನ ದಂಡೀಪುರದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆ ನಡೆದು ಚಾಕು ಇರಿತದಲ್ಲಿ ಅಂತ್ಯವಾಗಿರುವ ಘಟನೆ ಇದೀಗ ನಡೆದಿದೆ.
ಘಟನೆಯ ವಿವರ
ದಂಡೀಪುರದ ಚಂದ್ರ ಮತ್ತು ಕೊಡಿಗೇನಹಳ್ಳಿ ಗ್ರಾಮದ ನಂದಕುಮಾರ್ ನಡುವೆ ಬುಧವಾರ ರಾತ್ರಿ ಕ್ಷುಲ್ಲಕ ಕಾರಣದಿಂದ ಗಲಾಟೆ ನಡೆದಿದೆ. ಇಂದು ಬೆಳಗ್ಗೆ ಗಲಾಟೆ ತೀವ್ರಗೊಂಡು, ಚಂದ್ರ ಎನ್ನುವವನು ನಂದಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ.
ನಂದಕುಮಾರ್ ಗೆ ಚಾಕು ಇರಿತ
ಚಂದ್ರ, ನಂದಕುಮಾರ್ಗೆ ಚಾಕುವಿನಿಂದ ಹೊಟ್ಟೆ, ತಲೆ, ಮತ್ತು ಕೈ ಭಾಗಗಳಲ್ಲಿ ಇರಿತ ಮಾಡಿದ್ದಾನೆ. ಘಟನೆ ನಡೆದ ತಕ್ಷಣ ಚಂದ್ರ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ನಂದಕುಮಾರ್ ಅವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರಿಂದ ಶೋಧ ಕಾರ್ಯಾಚರಣೆ
ಈ ಪ್ರಕರಣ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಆರೋಪಿ ಚಂದ್ರನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.