ತುಮಕೂರು | ಕಳೆದ ಡಿಸೆಂಬರ್ 7 ರಂದು ವ್ಯಕ್ತಿಯೊಬ್ಬನನ್ನು ಹತ್ಯೆ (killing) ಮಾಡಿ, ದೊಡ್ಡ ನಾರಮಂಗಲ ಕೆರೆಯ (Dodda naravangala lake) ನೀರಿನಲ್ಲಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಇದೀಗ ಪೊಲೀಸರು (Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಅಶೋಕ್ ಕೆ ವಿ ಅವರ ಆದೇಶದ ಮೇರೆಗೆ ತುಮಕೂರು ಗ್ರಾಮಾಂತರ ವೃತ್ತದ ನಿರೀಕ್ಷಕರಾದ ಲಕ್ಷ್ಮಿಕಾಂತಯ್ಯ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು ಕೃತ್ಯವನ್ನು ಎಸಗಿದ್ದ ಉಸ್ಮಾನ್ (24) ಮತ್ತು ನಿಶ್ಚಿತ್ (24) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಇನ್ನು ಆರೋಪಿಗಳಿಂದ ಒಂದು ಕಾರು, ಒಂದು ಮೊಬೈಲ್, ಎಟಿಎಂ ಮತ್ತು ಡಿಎಲ್ ಇರುವ ಪರ್ಸನ್ನು ವಶಪಡಿಸಿಕೊಳ್ಳಲಾಗಿದೆ. ಮಾತ್ರವಲ್ಲದೆ ಆರೋಪಿಗಳು ಕೊಲೆ ಮಾಡಲು ಬಳಸಿದ್ದ ಚಾಕು ಮತ್ತು ಕಾರಿನ ಜಾಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಡಿಸೆಂಬರ್ 7 ಮತ್ತು 8 ನೇ ತಾರೀಖಿನ ರಾತ್ರಿ ಹತ್ತು ಗಂಟೆಯ ಮಧ್ಯದ ಅವಧಿಯಲ್ಲಿ ಸುಮಾರು 35 ವರ್ಷದ ಪುರುಷ ವ್ಯಕ್ತಿಯನ್ನು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ದೊಡ್ಡ ನಾರವಂಗಲ ಕೆರೆಯ ನೀರಿನಲ್ಲಿ ಹಾಕಿದ್ದರು. ಇನ್ನು ಈ ಘಟನೆ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿದ್ದು ನಡೆದಿದ್ದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.