ತುಮಕೂರು | ಅಯೋಧ್ಯೆ (Ayodhya) ಶ್ರೀರಾಮ ಮಂದಿರದಲ್ಲಿ (Sri Rama Mandir) ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಾಗಿದೆ. ಈಗಾಗಲೇ ದೇಶಾದ್ಯಂತ ಸಾವಿರಾರು ಮಂದಿ ಶ್ರೀರಾಮ ಭಕ್ತರು (Devotees Sri Rama) ಅಯೋಧ್ಯೆಗೆ ತೆರಳುತ್ತಿದ್ದಾರೆ. ಇದರ ನಡುವೆ ತುಮಕೂರು (Tumkur) ಜಿಲ್ಲೆಯಿಂದಲೂ ಕೂಡ ಭಕ್ತರು ಅಯೋಧ್ಯೆಗೆ ತೆರಳಿದ್ದಾರೆ.
ಹೌದು,, ತುಮಕೂರು ಜಿಲ್ಲೆಯಿಂದ 215 ಮಂದಿ ಅಯೋಧ್ಯೆ ರಾಮಮಂದಿರಕ್ಕೆ ತೆರಳಿದ್ದು ಇವರಿಗೆ ಶುಭ ಹಾರೈಕೆ ಮಾಡಲು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಜಿಲ್ಲಾಧ್ಯಕ್ಷ ರವಿಶಂಕರ್ ಹಬ್ಬಾಕ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ತುಮಕೂರು ನಗರದ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದರು.
ಈ ವೇಳೆ ಮಾತನಾಡಿದ ಶಾಸಕ ಸುರೇಶ್ ಗೌಡ, ತುಮಕೂರು ಜಿಲ್ಲೆಯಿಂದ ಶ್ರೀ ರಾಮನ ಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ. ನೇರವಾಗಿ ಅಯೋಧ್ಯೆಗೆ ತೆರಳಲಿರುವ ರೈಲು ಶ್ರೀ ರಾಮನ ಭಕ್ತರಿಗೆ ಅರ್ಪಣೆಯಾಗಿದೆ ಅವರ ಮುಖದಲ್ಲಿ ಶ್ರೀರಾಮನನ್ನು ನೋಡಿದಷ್ಟೇ ಸಂತಸವಾಗುತ್ತಿದೆ. ಅವರು ಕ್ಷೇಮವಾಗಿ ಹೋಗಿ ಬರಲಿ ಎಂದು ನಾವು ಶುಭ ಹಾರೈಸಿದ್ದೇವೆ ಎಂದು ತಿಳಿಸಿದರು.