ತುಮಕೂರು | ತುಮಕೂರು (Tumakuru) ನಗರದ ಸಿದ್ದಗಂಗಾ ಮಠದ (Siddaganga Mata) ಜಾತ್ರೆಗೆ ಬಂದಿದ್ದ ಬಾಲಕಿಯ (Girl)ಮೇಲೆ ಸಾಮೂಹಿಕ ಅತ್ಯಾಚಾರ (Rape) ನಡೆಸಿರುವಂತಹ ಘಟನೆ ಇದೀಗ ಬೆಳಕಿಗೆ ಬಂದಿದೆ.
ಬಾಲಕಿಯು ತನ್ನ ಬಾಯ್ ಫ್ರೆಂಡ್ ಜೊತೆ ಇದ್ದಾಗ ವಿಡಿಯೋವನ್ನು ಮಾಡಿಕೊಂಡ ಕಿಡಿಗೇಡಿಗಳು ವಿಡಿಯೋ ಬಿಡುಗಡೆಗೊಳಿಸುವುದಾಗಿ ಬಾಲಕಿಗೆ ಬೆದರಿಕೆ ಹಾಕಿ ಬಂಡೆ ಪಾಳ್ಯದ ರೂಂಗೆ ಎಳೆದೊಯ್ದು ಅತ್ಯಚಾರ ಮಾಡಿದ್ದಾರೆ.
ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.