ತುಮಕೂರು |ಅಬಕಾರಿ ಇಲಾಖೆಯು (Department of Excise) ಲೋಕಸಭೆ ಚುನಾವಣೆ-2024 (Loka sabha elections 2024) ರ ನಿಮಿತ್ತ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ (Control Room) ಅನ್ನು ತೆರೆದಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ತಯಾರಿಕೆ/ ಶೇಖರಣೆ/ ಸಾಗಾಣಿಕೆ/ ಮಾರಾಟ/ ಅಕ್ರಮ ಮದ್ಯ ತಯಾರಿಕಾ ವಸ್ತುಗಳು ಮತ್ತು ಗಾಂಜಾ, ಅಫೀಮು, ಡ್ರಗ್ಸ್ ಹಾಗೂ ಇನ್ನಿತರೆ ಯಾವುದೇ ಮಾದಕ ವಸ್ತುಗಳ ಅಕ್ರಮ ತಯಾರಿಕೆ/ ಶೇಖರಣೆ/ ಸಾಗಾಣಿಕೆ/ ಮಾರಾಟದಂತಹ ಅಕ್ರಮಗಳು ಕಂಡು ಬಂದಲ್ಲಿ ಅಬಕಾರಿ ಉಪ ಅಯುಕ್ತರಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.
ಕಛೇರಿಯಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಂನ ಟೋಲ್ ಫ್ರೀ ಸಂಖ್ಯೆ18004255440 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.