ಕೃಷಿ ಮಾಹಿತಿ | ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ (Animal Husbandry and Veterinary Training Centre) ವತಿಯಿಂದ ರೈತರಿಗೆ ವಿವಿಧ ಪಶುಪಾಲನೆ (animal husbandry) ಕುರಿತು ಆಸಕ್ತ 25 ಮಂದಿ ರೈತರಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಮುಖ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ.
ತರಬೇತಿಯನ್ನು ಜನವರಿ 3, 4, 29, 30 ರಂದು ಆಧುನಿಕ ಕುರಿ/ಮೇಕೆ ಸಾಕಾಣಿಕೆ ತರಬೇತಿ (Training in sheep/goat husbandry), ಜನವರಿ 16 ಮತ್ತು 17 ರಂದು ಆಧುನಿಕ ಹೈನುಗಾರಿಕೆ ತರಬೇತಿ ಹಾಗೂ ಜ.19 ಮತ್ತು 20ರಂದು ಕೋಳಿ ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ನಿಗಧಿಪಡಿಸಿದ ದಿನಾಂಕದಂದು ಬೆಳಿಗ್ಗೆ ೧೦ ಗಂಟೆಗೆ ತರಬೇತಿಗೆ ಹಾಜರಾಗಬಹುದಾಗಿದೆ.
![](https://i0.wp.com/karnataka360.in/wp-content/uploads/2024/01/goatp5.jpg?resize=696%2C464&ssl=1)
ತರಬೇತಿಗೆ ಹಾಜರಾಗಲು ಇಚ್ಛಿಸುವವರು 2 ಪಾಸ್‌ಪೋರ್ಟ್ ಅಳತೆ ಭಾವಚಿತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ)ವನ್ನು ಕಡ್ಡಾಯವಾಗಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ/ದೂರವಾಣಿ ಸಂಖ್ಯೆ 0816-2251214 ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.